NDA alliance: ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಭಾರೀ ದೊಡ್ಡ ಆಘಾತ- NDA ಮೈತ್ರಿ ಕೂಟದಿಂದ ದೇಶದ ಪ್ರಬಲ ಪಕ್ಷ ಔಟ್ !!

National politics news AIADMK ends alliance With BJP And Announces Exit From NDA

NDA alliance: ದೇಶದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಈಗಿಂದಲೇ ತಯಾರಿ ನಡೆಸುತ್ತಿವೆ. ಪ್ರಧಾನಿ ಮೋದಿ ಅವರನ್ನು ಮಣಿಸಬೇಕು, ಸೋಲಿಸೇ ತೀರುತ್ತೇವೆ ಎಂಬ ನಂಬಿಕೆಯಿಂದ 26 ವಿಪಕ್ಷಗಳು ಒಟ್ಟು ಸೇರಿ ‘ಇಂಡಿಯಾ'(INDIA) ಮೈತ್ರಿಕೂಟವನ್ನು ರಚಿಸಿಕೊಂಡು ಚುನಾವಣೆಗೆ ಅಣಿಯಾಗಿ ನಿಂತಿವೆ. ಇತ್ತ ಇದಕ್ಕೆ ಕೌಂಟ್ರು ಕೊಡೋ ನಿಟ್ಟಿನಲ್ಲಿ ಬಿಜೆಪಿ(BJP) ನೇತೃತ್ವದದಲ್ಲಿ 36 ಪಕ್ಷಗಳು ಒಗ್ಗಟ್ಟಾಗಿ NDA ಮೈತ್ರಿಕೂಟ ಮಾಡಿಕೊಂಡಿವೆ. ಒಟ್ಟಿನಲ್ಲಿ ಎರಡೂ ಮೈತ್ರಿ ಕೂಟಗಳು ತಮ್ಮ ಶಕ್ತಿ ಪ್ರದರ್ಶಿಸಿವೆ. ಆದರೆ ಈ ಬೆನ್ನಲ್ಲೇ ಚುನಾವಣೆ ಹೊಸ್ತಿಲಲ್ಲೇ NDA ಮೈತ್ರಿಕೂಟಕ್ಕೆ(NDA alliance) ಭಾರಿ ದೊಡ್ಡ ಆಘಾತ ಉಂಟಾಗಿದೆ.

ಹೌದು, ಲೋಕಸಭಾ ಚುನಾವಣೆಗೆ(Parliament election)ಮೊದಲೇ ಎನ್‌ಡಿಎ ಕೂಟಕ್ಕೆ ಆಘಾತ ಎದುರಾಗಿದೆ. ದಕ್ಷಿಣ ಭಾರತದಲ್ಲಿ ಅತೀ ಹೆಚ್ಚಿನ ಸ್ಥಾನ ಗೆಲ್ಲುವ ಕನಸಿಗೆ ತೀವ್ರ ಹೊಡೆತ ಬಿದ್ದಿದೆ. ಇಂದು ಆಲ್ ಇಂಡಿಯಾ ಅಣ್ಣಾ ದ್ರಾವಿಡ್ ಮುನ್ನೇತ್ರ ಕಳಗಂ( ಎಐಎಡಿಎಂಕೆ) ತನ್ನ ಪಕ್ಷದ ಸಂಸದರು, ಶಾಸಕರು ಹಾಗೂ ನಾಯಕರ ಜೊತೆಗೆ ಜಿಲ್ಲಾ ಮಟ್ಟದ ಸಭೆ ನಡೆಸಿ ಮಹತ್ವದ ತೀರ್ಮಾನ ಘೋಷಿಸಿದ್ದು, NDA ಮೈತ್ರಿ ಕೂಟದಿಂದ ಹೊರನಡೆಯುವ ತೀರ್ಮಾನ ಮಾಡಿದ್ದಾರೆ.

ಅಂದಹಾಗೆ ಎಐಎಡಿಎಂಕೆ(AIADMK) ಪ್ರಧಾನ ಕಚೇರಿಯಲ್ಲಿ ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಎನ್‌ಡಿಎ ಮೈತ್ರಿಯಿಂದ ಹೊರಬರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ (ಎನ್‌ಡಿಎ) ಹೊರ ನಡೆಯುವುದಾಗಿ ಎಐಡಿಎಂಕೆ ಘೋಷಿಸಿದೆ. 2024 ರ ಲೋಕಸಭೆ ಚುನಾವಣೆಗೆ ಪ್ರತ್ಯೇಕವಾಗಿ ಮುನ್ನಡೆಯುವುದಾಗಿಯೂ ಹೇಳಿದೆ. ಇನ್ನು ಎನ್‌ಡಿಎ ಮೈತ್ರಿ ಕೂಟದಿಂದ ಎಐಎಡಿಎಂಕೆ ಹೊರಬರಲು ನಿರ್ಣಯ ಕೈಗೊಳ್ಳುತ್ತಿದ್ದಂತೆಯೇ ಪಕ್ಷದ ಕಚೇರಿ ಹೊರಗೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಮೈತ್ರಿ ಯಿಂದ ಹೊರಬರಲು ಕಾರಣವೇನು?
ಇತ್ತೀಚೆಗೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಕೊಯಮತ್ತೂರಿನಲ್ಲಿ ಭಾಷಣ ಮಾಡುವಾಗ ಡಿಎಂಕೆ ಸಂಸ್ಥಾಪಕ ಮಾಜಿ ಮುಖ್ಯಮಂತ್ರಿ ಸಿ.ಎನ್‌. ಅಣ್ಣಾದುರೈ ಅವರು ಸನಾತನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಜೊತೆಗೆ ಅವರು ಸನಾತನ ಧರ್ಮದ ವಿರುದ್ಧವಾಗಿದ್ದರು ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಐಡಿಎಂಕೆ ನಾಯಕರು,‘ಅಣ್ಣಾಮಲೈ ಅವರು ನಿರಂತರವಾಗಿ ಪಕ್ಷದ ನಾಯಕರನ್ನು ಟೀಕಿಸಿ ಅವಮಾನಿಸುತ್ತಿದ್ದಾರೆ. ಇದು ಬಿಜೆಪಿ ಹಾಗೂ ಅಣ್ಣಾಡಿಎಂಕೆ ನಡುವೆ ಬಿರುಕಿಗೆ ಕಾರಣವಾಗಲಿದೆ. ಅವರು ತಮ್ಮ ವೈಯಕ್ತಿಕ ವರ್ಚಸ್ಸನ್ನು ವೃದ್ಧಿಸಿಕೊಳ್ಳುವುದರಲ್ಲಿ ರಾಜ್ಯದ ಹಿರಿಯರಿಗೆ ಅಗೌರವ ತೋರುತ್ತಿದ್ದಾರೆ. ಇದನ್ನು ಸಹಿಸಲಾಗದು. ನಾವು ಸದ್ಯಕ್ಕೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿಲ್ಲ. ಇದರ ಬಗ್ಗೆ ಬರುವ ಚುನಾವಣೆ ಸಂದರ್ಭದಲ್ಲಿ ಯೋಚಿಸಲಾಗುವುದು ಎಂದು ತಿಳಿಸಿದ್ದರು. ಇದೀಗ ಪಕ್ಷದೊಳಗೆ ಸಭೆ ನಡೆಸಿ ಮೈತ್ರಿ ಮುರಿದುಕೊಂಡಿರುವ ಅಧಿಕೃತ ಹೇಳಿಕೆ ನೀಡಿದೆ.

ಎಐಎಡಿಎಂಕೆ ಪಕ್ಷದ ಈ ನಿಲುವಿಗೆ ಬಿಜೆಪಿ ನಾಯಕ ಎಂ. ಚಕ್ರವರ್ತಿ ಭಿನ್ನ ನಿಲುವು ವ್ಯಕ್ತಪಡಿಸಿದ್ದಾರೆ. ಅಣ್ಣಾಮಲೈ ಅವರು ಸನಾತನ ಧರ್ಮದ ವಿಚಾರದ ಚರ್ಚೆ ವೇಳೆ ಅಣ್ಣಾದುರೈ ಅವರ ಬಗ್ಗೆ ಮಾತನಾಡಿದ್ದರು. ಈ ವೇಳೆ ಎಐಎಡಿಎಂಕೆ ಪಕ್ಷವನ್ನು ಟೀಕೆ ಮಾಡಿರಲಿಲ್ಲ ಎಂದು ಸಮರ್ಥನೆ ನೀಡಿದ್ದಾರೆ. ಆದರೆ, ಅಣ್ಣಾಮಲೈ ಅವರ ಹೇಳಿಕೆ ಹೊರಬಿದ್ದ ಬಳಿಕ ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿ ಕಳೆದ ವಾರವೇ ಮುರಿದು ಹೋಗಿತ್ತು.

ಇದನ್ನೂ ಓದಿ: Karkala: ಕರಾವಳಿಗಳಿಗರಿಗೆ ಬಿಗ್ ಶಾಕ್- ಕಾರ್ಕಾಳ ಪರಶುರಾಮನ ಮೂರ್ತಿ ಬದಲಾವಣೆ ?! ಅಸಲಿ-ನಕಲಿ ಬಗ್ಗೆ ಸಚಿವೆ ಹೇಳಿದ್ದೇನು?

Leave A Reply

Your email address will not be published.