Liquor Sale Ban: ಗಮನಿಸಿ ಮದ್ಯ ಪ್ರಿಯರೇ, ಈ ದಿನಗಳಂದು ಇಲ್ಲಿ ಮದ್ಯಮಾರಾಟ ಬಂದ್‌!!!

Latest news Sale of Liquor is banned here on these days

Share the Article

Liquor Sale Ban: ಎಲ್ಲಾ ಕಡೆ ಗಣೇಶನ ಹಬ್ಬದ ವಿಸರ್ಜನಾ ಕಾರ್ಯಕ್ರಮ ನಡೆಯುತ್ತಿದ್ದು, ಜನರು ವಿಜೃಂಭಣೆಯಿಂದ ಗಣಪತಿಯನ್ನು ವಿಸರ್ಜನೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಜೊತೆಗೆ ಈದ್‌ಮಿಲಾದ್‌ ಹಬ್ಬ ಕೂಡಾ ಬರುತ್ತಿದ್ದು, ಹೀಗಾಗಿ ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದ್ಯ ಮಾರಾಟ ನಿಷೇಧ ಕುರಿತಂತೆ ನಿರ್ಬಂಧಗಳನ್ನು ಹೇರಲಾಗಿದೆ.

ಶಿವಮೊಗ್ಗ ಜಿಲ್ಲಾಧಿಕಾರಿಯವರು ಕೆಲವೊಂದು ಸೂಚನೆಗಳನ್ನು ನೀಡಿದ್ದು, ಇದರಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಸೆಪ್ಟೆಂಬರ್‌ 27ರ ಸಂಜೆ 6 ಗಂಟೆಯಿಂದ ಸೆ.29ರ ಬೆಳಗ್ಗೆ 6 ಗಂಟೆಯವರೆಗೆ, ಸೆ.30ರ ಬೆಳಿಗ್ಗೆ 6 ಗಂಟೆಯಿಂದ ಅ.2ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟದ ಮೇಲೆ ನಿಷೇಧ (Liquor Sale Ban ) ಹೇರಲಾಗಿದೆ. ಇದು ಪರಿಷ್ಕೃತ ಆದೇಶ, ಇದು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಅನ್ವಯವಾಗುತ್ತದೆ.

 

ಇದನ್ನು ಓದಿ: ಜವರಾಯನ ರೂಪದಲ್ಲಿ ಬಂದ ಸ್ಕೂಲ್ ಬಸ್ – ರಿಕ್ಷಾಕ್ಕೆ ಡಿಕ್ಕಿ ಹೊಡೆದು ಐವರ ಸಾವು

Leave A Reply