Dharmavaram: ಗಣೇಶೋತ್ಸವದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಯುವಕ ಕುಸಿದು ಬಿದ್ದು ಹೃದಯಾಘಾತದಿಂದ ಸಾವು !!
Dharmavaram: ಹೃದಯಾಘಾತ ಮತ್ತು ಹೃದಯಸ್ತಂಭನ ಇಂದು ಚಿಕ್ಕಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದೆ. ಕೆಲವೇ ಕ್ಷಣಗಳಲ್ಲಿ ಪ್ರಾಣಕ್ಕೆ ಎರವಾಗುತ್ತಿರುವ ಈ ಕಾಯಿಲೆ ದಿಢೀರ್ ಜೀವ ತೆಗೆಯುತ್ತಿರುವುದು ಆತಂಕದ ವಿಷಯವಾಗಿದೆ. ಅದರಲ್ಲೂ ಯುವ ಜನತೆಯಲ್ಲಿ ಹೃದಯಾಘಾತದ(hart attack)ಘಟನೆಗಳು ಹೆಚ್ಚುತ್ತಿವೆ. ಅಂತೆಯೇ ಇದೀಗ ಗಣೇಶ ಹಬ್ಬದಲ್ಲಿ ಡ್ಯಾನ್ಸ್(Dance) ಮಾಡುತ್ತಾ ಹೃದಯಾಘಾತವಾಗಿ ಕುಸಿದುಬಿದ್ದು ಸಾವನ್ನಪ್ಪಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಹೌದು, ಕಳೆದೊಂದು ವಾರದಿಂದ ದೇಶಾದ್ಯಂತ ಗಣೇಶ ಚತುರ್ಥಿಯನ್ನ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆಂಧ್ರಪ್ರದೇಶದ(Andrapradesh) ಧರ್ಮಾವರಂ(Dharmavaram) ಪಟ್ಟಣದ ಮಾರುತಿ ನಗರದಲ್ಲೂ ಗಣೇಶನ ಪ್ರತಿಷ್ಠಾಪನೆ ಮಾಡಲಾಗಿದೆ. ವಿನಾಯಕನ ಉತ್ಸವದ ಸಂಭ್ರಮದಲ್ಲಿ ಪ್ರಸಾದ್ ಎಂಬ 26 ವರ್ಷದ ಯುವಕ ತನ್ನ ಸ್ನೇಹಿತನೊಂದಿಗೆ ಡ್ಯಾನ್ಸ್ ಮಾಡುತ್ತಿದ್ದ. ಎಲ್ಲರೂ ಪ್ರಸಾದ್ ಮಾಡುತ್ತಿದ್ದ ಡ್ಯಾನ್ಸ್ ನೋಡಿ ಸಂತೋಷದಲ್ಲಿ ಕಾಲ ಕಳೆಯುತ್ತಿದ್ದರು. ಆದ್ರೆ ಇದ್ದಕ್ಕಿದ್ದಂತೆ ಪ್ರಸಾದ್ ಮಂಟಪದಲ್ಲಿದ್ದ ಕಂಬಕ್ಕೆ ಒರಗೆ ಕುಸಿದು ಬಿದ್ದಿದ್ದಾನೆ.
ಗಣೇಶ ಮಂಟಪದಲ್ಲಿ ಕುಣಿಯುತ್ತಿದ್ದ ಪ್ರಸಾದ್(Prasad) ಏಕಾಏಕಿ ಕುಸಿದು ಬಿದ್ದಿದ್ದನ್ನು ನೋಡಿ ಎಲ್ರೂ ಗಾಬರಿಯಾಗಿದ್ದಾರೆ. ತಕ್ಷಣವೇ ಅಲ್ಲಿದ್ದ ಸ್ನೇಹಿತರು ಪ್ರಸಾದ್ ಅನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆ ತಲುಪುವಷ್ಟರಲ್ಲೇ ಪ್ರಸಾದ್ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಡ್ಯಾನ್ಸ್ ಮಾಡುವಾಗಲೇ ಪ್ರಸಾದ್ ಹೃದಯಾಘಾತವಾಗಿ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಅಂದಹಾಗೆ ಧರ್ಮಾವರಂನಲ್ಲಿ ಪ್ರತಿ ವರ್ಷ ಅದ್ಧೂರಿ ಗಣೇಶ ಹಬ್ಬ ಆಚರಿಸಲಾಗುತ್ತದೆ. ಗ್ರಾಮದ ಕೆಲವೇ ಕೆಲವು ಹಿಂದೂ ಕುಟುಂಬಗಳು ಸೇರಿ ಈ ಗಣೇಶ ಹಬ್ಬ ಆಚರಿಸುತ್ತದೆ. ಗಣೇಶನ ಕೂರಿಸಿ ಪೂಜೆ ನೆರವೇರಿಸಲಾಗುತ್ತದೆ. ಮೂರು ದಿನ ವಿಶೇಷ ಪೂಜೆಗಳು ನಡೆಯುತ್ತದೆ. ಈ ವೇಳೆ ಮಂಟಪ ಹಾಕಲಾಗುತ್ತದೆ. ಡಿಜೆ ಮ್ಯೂಸಿಕ್, ಲೈಟಿಂಗ್ಸ್ ಸೇರಿದಂತೆ ಹಲವು ಅಲಂಕಾರಗಳನ್ನು ಮಾಡಲಾಗುತ್ತದೆ. ಹೀಗಾಗಿ ಡಿಜೆಗೆ ಸದ್ದಿಗೆ ಡ್ಯಾನ್ಸ್ ಮಾಡುತ್ತಿದ್ದಾಗ ಅದರ ಎಲ್ಲಾ ಸೌಂಡ್ ಗೆ ಪ್ರಸಾದ್ ಗೆ ಹೃದಯಾಘಾತ ಆಗಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.