Bengaluru: ಆಂಟಿ ಪಕ್ಕಕ್ಕೆ ಸರಿಯಿರಿ ಅಂದಿದ್ದಷ್ಟೇ- ಚಪ್ಪಲಿ ಬಿಚ್ಚಿ ಹಿಗ್ಗಾ ಮುಗ್ಗಾ ಥಳಿಸಿದ ಮಹಿಳೆ !! ಅರೆ, ತಪ್ಪು ‘ಆಂಟಿ’ಯದ್ದಾ ಇಲ್ಲಾ ಆ ವ್ಯಕ್ತಿಯದ್ದಾ ?

Bengaluru news assaulted by woman in Bengaluru for calling her aunty file complaint

Bengaluru: ಮಹಿಳೆಯರು ಯಾವ ಕಾರಣಕ್ಕೆ ಯಾವಾಗ ಸೆಟೆದು ನಿಲ್ಲುತ್ತಾರೆ ಅನ್ನೋದು ಊಹೆ ಮಾಡೋಕೆ ಆಗಲ್ಲ. ಅಂತೆಯೇ ಆಂಟಿ ಎಂದು ಕರೆದರು ಎಂಬ ಕಾರಣಕ್ಕೆ ಮಹಿಳೆಯೊಬ್ಬರು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿ ಮನಸೋ ಇಚ್ಛೆ ನಿಂದಿಸಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

ಹೌದು, ರಾಜಾಜಿನಗರದ ಪೊಲೈಟ್‌ ಸೆಕ್ಯೂರಿ ಏಜೆನ್ಸಿಯ 64 ವರ್ಷದ ಸೆಕ್ಯೂರಿ ಗಾರ್ಡ್‌ ಕೃಷ್ಣಯ್ಯ ಅವರು, ಎಟಿಎಂ ಕೇಂದ್ರದ ಬಾಗಿಲ ಬಳಿ ‘ಆಂಟಿ ಪಕ್ಕಕ್ಕೆ ಸರಿಯಿರಿ’ ಎಂದ ಕಾರಣಕ್ಕೆ ಮಹಿಳೆಯೊಬ್ಬರು ಚಪ್ಪಲಿಯಿಂದ ಹೊಡೆದು ಮನಸೋ ಇಚ್ಛೆ ಶಬ್ಧಗಳಿಂದ ನಿಂದಿಸಿದ ಆರೋಪದಡಿ ಮಲ್ಲೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಸೆಕ್ಯೂರಿ ಗಾರ್ಡ್‌ ಕೃಷ್ಣಯ್ಯ ನೀಡಿದ ದೂರಿನ ಪ್ರಕಾರ, ಕೃಷ್ಣಯ್ಯ ರಾಜಾಜಿನಗರದ ಪೊಲೈಟ್‌ ಸೆಕ್ಯೂರಿ ಏಜೆನ್ಸಿಯಲ್ಲಿ ಸೆಕ್ಯೂರಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಏಜೆನ್ಸಿಯು ವಿವಿಧ ಬ್ಯಾಂಕ್‌ಗಳ ಎಟಿಎಂಗೆ ಹಣ ತುಂಬುವ ಕೆಲಸ ಮಾಡುತ್ತಿದೆ. ಎಟಿಎಂ ಕೇಂದ್ರಗಳಲ್ಲಿ ಎಟಿಎಂ ಯಂತ್ರಗಳಿಗೆ ತುಂಬುವಾಗ ಕೃಷ್ಣಯ್ಯ ಹೊರಗೆ ಭದ್ರತೆ ನೀಡುವ ಕೆಲಸ ಮಾಡುತ್ತಾರೆ.

ಅಂತೆಯೇ, ಕೃಷ್ಣಯ್ಯ ಅವರು ಸೆ.19 ರಂದು ರಾತ್ರಿ 7.30ರ ಸುಮಾರಿಗೆ ಮಲ್ಲೇಶ್ವರದ ಗಣೇಶ ದೇವಸ್ಥಾನದ ರಸ್ತೆಯ ಐಸಿಐಸಿಐ ಬ್ಯಾಂಕ್‌ ಎಟಿಎಂ ಯಂತ್ರಕ್ಕೆ ಹಣ ತುಂಬಲು ಬಂದಿದ್ದಾರೆ. ಈ ವೇಳೆ ಸಿಬ್ಬಂದಿ ಎಟಿಎಂ ಕೇಂದ್ರದ ಒಳಗೆ ಹಣ ತುಂಬುವಾಗ ಕೃಷ್ಣಯ್ಯ ಎಟಿಎಂ ಹೊರಗೆ ನಿಂತು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಅಶ್ವಿನಿ ಎಂಬ ಮಹಿಳೆ ಎಟಿಎಂ ಕೇಂದ್ರದ ಬಾಗಿಲಿಗೆ ಅಡ್ಡಲಾಗಿ ನಿಂತಿದ್ದರು ಎನ್ನಲಾಗಿದೆ. ಈ ವೇಳೆ ಕೃಷ್ಣಯ್ಯ ಅವರು ‘ಆಂಟಿ ಪಕ್ಕಕ್ಕೆ ಸರಿಯಿರಿ’ ಎಂದಿದ್ದಾರೆ.

ಅಷ್ಟಕ್ಕೆ ಅಷ್ಟಕ್ಕೆ ಕೋಪಗೊಂಡ ಮಹಿಳೆ ನನ್ನನ್ನೇ ” ಆಂಟಿ ಅನ್ನುವೆಯಾ ” ಎಂದು ಅವಾಚ್ಯಶಬ್ಧಗಳಿಂದ ನಿಂದಿಸಿ ಏಕಾಏಕಿ ಚಪ್ಪಲಿ ತೆಗೆದು ಕೃಷ್ಣಯ್ಯನಿಗೆ ಹಲ್ಲೆ ಮಾಡಿದ್ದಾರೆ. ಅದಲ್ಲದೆ ಮಹಿಳೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬಳಿಕ ಸೆಕ್ಯೂರಿಗಾರ್ಡ್ ಕೃಷ್ಣಯ್ಯ ಮಹಿಳೆ ವಿರುದ್ಧ ಮಲ್ಲೇಶ್ವರ ಠಾಣೆಗೆ ದೂರು ನೀಡಿದ್ದಾರೆ, ಈ ದೂರಿನ ಮೇರೆಗೆ ಪ್ರಕರ ದಾಖಲಿಸಿಕೊಂಡು ಮಹಿಳೆಯನ್ನು ವಿಚಾರಣೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಅಕ್ಟೋಬರ್ 1 ರಿಂದ ಬದಲಾಗಲಿವೆ ಈ ಹಣಕಾಸು ನಿಯಮಗಳು! ಗ್ರಾಹಕರೇ ಅಲರ್ಟ್ ಆಗಿ

Leave A Reply

Your email address will not be published.