ಅಕ್ಟೋಬರ್ 1 ರಿಂದ ಬದಲಾಗಲಿವೆ ಈ ಹಣಕಾಸು ನಿಯಮಗಳು! ಗ್ರಾಹಕರೇ ಅಲರ್ಟ್ ಆಗಿ
National news government new financial rules these financial rules will change from October 1
Financial rules change : ಬರುವ ತಿಂಗಳು ಅಂದರೆ 2023 ರ ಅಕ್ಟೋಬರ್ ನಲ್ಲಿ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಅನೇಕ ನಿಯಮಗಳಲ್ಲಿ ಬದಲಾವಣೆಗಳು ಆಗಲಿದೆ. ಶೀಘ್ರದಲ್ಲಿ ನೀವು ಸರ್ಕಾರದ ಈ (Government Rule) ಕೆಲಸವನ್ನು ಪೂರ್ಣಗೊಳಿಸಬೇಕು. ಮುಖ್ಯವಾಗಿ ಅಕ್ಟೋಬರ್ 1, ರಿಂದ, 2023 ಮ್ಯೂಚುವಲ್ ಫಂಡ್ಗಳಿಂದ ಡಿಮ್ಯಾಟ್ ಖಾತೆಗಳಿಗೆ ನಾಮನಿರ್ದೇಶನಗಳನ್ನು ಸೆಬಿ ಕಡ್ಡಾಯಗೊಳಿಸಿದೆ. ಇದಲ್ಲದೆ, 2000 ರೂಪಾಯಿ ನೋಟುಗಳ ವಿನಿಮಯದ ಗಡುವು ಸಹ ಸೆಪ್ಟೆಂಬರ್ 30 ಕ್ಕೆ ಕೊನೆಗೊಳ್ಳಲಿದೆ. ಆದ್ದರಿಂದ ಈ ಕೆಲಸವನ್ನು ಮಾಡದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಅಕ್ಟೋಬರ್ 1 ರಿಂದ ಬದಲಾಗುವ ಕೆಲವು ನಿಯಮಗಳ( Financial rules change )ಬಗ್ಗೆ ನೀವು ತಿಳಿದುಕೊಳ್ಳಬೇಕು.
ಈ ನಿಯಮಗಳು ಅಕ್ಟೋಬರ್ 1 ರಿಂದ ಬದಲಾಗಲಿವೆ:
ಡಿಮ್ಯಾಟ್, ಎಂಎಫ್ ನಾಮನಿರ್ದೇಶನ:
ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಗಳ ಜೊತೆಗೆ ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ನಾಮನಿರ್ದೇಶನ ಕಡ್ಡಾಯವಾಗಿದೆ. ಇದಕ್ಕಾಗಿ ಪರಿಷ್ಕೃತ ಗಡುವು ಸೆಪ್ಟೆಂಬರ್ 30, 2023 ಆಗಿರುತ್ತದೆ. ಈ ದಿನಾಂಕದೊಳಗೆ ಖಾತೆದಾರರು ನಾಮನಿರ್ದೇಶನ ಮಾಡದಿದ್ದರೆ, ಅಕ್ಟೋಬರ್ 1 ರಿಂದ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ. ನಿಗದಿತ ಸಮಯದ ಮಿತಿಯೊಳಗೆ ನೀವು ನಾಮನಿರ್ದೇಶನ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ನಿಮ್ಮ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಇದರ ನಂತರ, ನೀವು ಅದರಲ್ಲಿ ಹೂಡಿಕೆ ಮಾಡಲು ವಹಿವಾಟು ಸಾಧ್ಯವಾಗುವುದಿಲ್ಲ. ಈ ಹಿಂದೆ, ಸೆಬಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಗಳನ್ನು ನಾಮನಿರ್ದೇಶನ ಮಾಡಲು ಮಾರ್ಚ್ 31 ರ ಗಡುವನ್ನು ನಿಗದಿಪಡಿಸಿತ್ತು, ನಂತರ ಅದನ್ನು ಇನ್ನೂ ಆರು ತಿಂಗಳು ವಿಸ್ತರಿಸಲಾಯಿತು. ನಿಮ್ಮ ಖಾತೆಗೆ ನೀವು ನಾಮಿನಿಯನ್ನು ಸೇರಿಸದಿದ್ದರೆ, ಸಾಧ್ಯವಾದಷ್ಟು ಬೇಗ ಈ ಕೆಲಸವನ್ನು ಪೂರ್ಣಗೊಳಿಸಿ.
ಉಳಿತಾಯ ಖಾತೆಗೆ ಆಧಾರ್ ಕಡ್ಡಾಯ:
ಸಣ್ಣ ಉಳಿತಾಯ ಯೋಜನೆಗಳಲ್ಲಿ ಆಧಾರ್ ಕಡ್ಡಾಯವಾಗಿದೆ. ಈಗ ಪಿಪಿಎಫ್, ಪೋಸ್ಟ್ ಆಫೀಸ್ ಸ್ಟೀಮ್ ಇತ್ಯಾದಿಗಳಲ್ಲಿ ಆಧಾರ್ ಮಾಹಿತಿಯನ್ನು ನಮೂದಿಸುವುದು ಅವಶ್ಯಕ. ನೀವು ಇದನ್ನು ಮಾಡದಿದ್ದರೆ, ತಕ್ಷಣ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಹೋಗಿ ಈ ಮಾಹಿತಿಯನ್ನು ನೋಂದಾಯಿಸಿ ಇಲ್ಲದಿದ್ದರೆ ಈ ಖಾತೆಗಳನ್ನು ಅಕ್ಟೊಬರ್ 1 ರಿಂದ ರದ್ದು ಗೊಳಿಸಲಾಗುತ್ತದೆ.
ಟಿಸಿಎಸ್ ನಿಯಮಗಳಲ್ಲಿ ಬದಲಾವಣೆ:
ನೀವು ಮುಂದಿನ ತಿಂಗಳಿನಿಂದ ವಿದೇಶದಲ್ಲಿ ಪ್ರವಾಸ ಪ್ಯಾಕೇಜ್ ಖರೀದಿಸಲು ಯೋಜಿಸುತ್ತಿದ್ದರೆ, ನೀವು 7 ಲಕ್ಷ ರೂ.ಗಿಂತ ಕಡಿಮೆ ಟೂರ್ ಪ್ಯಾಕೇಜ್ ಖರೀದಿಸಿದರೆ, ನೀವು 5 ಪ್ರತಿಶತ ಟಿಸಿಎಸ್ ಪಾವತಿಸಬೇಕಾಗುತ್ತದೆ. ಅದೇ ಸಮಯದಲ್ಲಿ 7 ಲಕ್ಷ ರೂ.ಗಿಂತ ಹೆಚ್ಚಿನ ಟೂರ್ ಪ್ಯಾಕೇಜ್ಜಳಿಗೆ ಶೇಕಡಾ 20 ರಷ್ಟು ಟಿಸಿಎಸ್ ಪಾವತಿಸಬೇಕಾಗುತ್ತದೆ.
2000 ರೂಪಾಯಿ ನೋಟುಗಳ ವಿನಿಮಯಕ್ಕೆ ಗಡುವು:
2,000 ಮುಖಬೆಲೆಯ ನೋಟುಗಳನ್ನು ಠೇವಣಿ ಇಡಲು ಅಥವಾ ವಿನಿಮಯ ಮಾಡಿಕೊಳ್ಳಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಠೇವಣಿದಾರರಿಗೆ ಈಗಾಗಲೇ ನಾಲ್ಕು ತಿಂಗಳ ಕಾಲಾವಕಾಶ ನೀಡಿತ್ತು. ಸೆಪ್ಟೆಂಬರ್ 30, 2023 ರೊಳಗೆ 2000 ಮುಖಬೆಲೆಯ ನೋಟುಗಳನ್ನು ಬ್ಯಾಂಕ್ ನಲ್ಲಿ ವಿನಿಮಯ ಮಾಡಿಕೊಳ್ಳಬೇಕು ಅಥವಾ ಠೇವಣಿ ಇಡಬೇಕು. ಇಲ್ಲವಾದಲ್ಲಿ ಸಮಸ್ಯೆಗಳು ಎದುರಾಗುತ್ತದೆ.
ಅಕ್ಟೊಬರ್ ನಿಂದ ಜನನ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ:
ಅಕ್ಟೊಬರ್ ತಿಂಗಳಿನಿಂದ ಹಣಕಾಸು ಮತ್ತು ಸರ್ಕಾರಿ ಕೆಲಸದ ನಿಯಮಗಳಲ್ಲಿ ಸರ್ಕಾರ ಪ್ರಮುಖ ಬದಲಾವಣೆಗಳನ್ನು ಮಾಡಲಿದೆ. ಅಕ್ಟೋಬರ್ 1 ರಿಂದ ಶಾಲೆ, ಕಾಲೇಜು ಪ್ರವೇಶ, ಚಾಲನಾ ಪರವಾನಗಿಗಾಗಿ ಅರ್ಜಿ, ಮತದಾರರ ಪಟ್ಟಿಗೆ ಹೆಸರು ಸೇರಿಸುವುದು, ಆಧಾರ್ ನೋಂದಣಿ, ವಿವಾಹ ನೋಂದಣಿ ಅಥವಾ ಸರ್ಕಾರಿ ಉದ್ಯೋಗ ಅರ್ಜಿ ಮುಂತಾದ ಎಲ್ಲಾ ಕಾರ್ಯಗಳಿಗೆ ಜನನ ಪ್ರಮಾಣಪತ್ರಗಳು ಬೇಕಾಗುತ್ತವೆ.
ಇದನ್ನೂ ಓದಿ: ವೀಡಿಯೋ ಕ್ರಿಯೆಟರ್ಸ್‌ಗಳಿಗೆ ಭರ್ಜರಿ ಗುಡ್‌ನ್ಯೂಸ್ !! ಅಚ್ಚರಿಯಂತೆ ಹೊಸ ಘೋಷಣೆ ಮಾಡಿದ ಯೂಟ್ಯೂಬ್