Google ವಿರುದ್ಧ ಮಹಿಳೆ ಕೇಸು! ನನ್ನ ಗಂಡನ ಸಾವಿಗೆ ಮ್ಯಾಪ್‌ ಕಾರಣ ಎಂದು ದಾವೆ ಹೂಡಿದೆ ಪತ್ನಿ!!!

world news american woman case against google and Google map showing collapsed bridge

Share the Article

Google map: ಇತ್ತೀಚೆಗೆ ಜನರು ಗೂಗಲ್‌ ಮ್ಯಾಪ್‌ ಬಳಸಿಕೊಂಡು ಊರಿಂದ ಊರಿಗೆ, ನಗರದಿಂದ ನಗರಕ್ಕೆ, ದೇಶದಿಂದ ದೇಶಕ್ಕೆ ಹೋಗುವ ಎಷ್ಟೋ ವರದಿಗಳನ್ನು, ವೀಡಿಯೋಗಳನ್ನು ನಾವು ಕೇಳುತ್ತಾ ಬಂದಿದ್ದೇವೆ. ಇದೇ ರೀತಿಯ ಗೂಗಲ್‌ ಮ್ಯಾಪ್‌ ಹಿಂಬಾಲಿಸಿ ಹಲವು ಮಂದಿ ನೀರಿಗೆ ಬಿದ್ದು, ಎದ್ನೋ ಬಿದ್ನೋ ಎಂದು ಜೀವ ಉಳಿಸಿದ ಘಟನೆ, ಸಾವು ಕಂಡ ಘಟನೆಗಳ ವರದಿಗಳನ್ನು ನಾವು ಕಂಡಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆಯೋರ್ವಳು ತನ್ನ ಗಂಡ ಸಾವಿಗೀಡಾಲು ಗೂಗಲ್‌ ಕಾರಣ ಎಂದು ಹೇಳಿ ಸಂಸ್ಥೆ ವಿರುದ್ಧ ದಾವೆ ಹೂಡಿದ್ದಾರೆ.

ಅಮೆರಿಕದ ಉತ್ತರ ಕೆರೊಲಿನಾದ ವ್ಯಕ್ತಿಯ ಪತ್ನಿಯೇ ಸಂಸ್ಥೆ ವಿರುದ್ಧ ಪ್ರಕರಣ ಹೂಡಿದ್ದಾರೆ. 2022ರ ಸೆ.30ರ ರಾತ್ರಿ ಫಿಲಿಪ್‌ ಪ್ಯಾಕ್ಸನ್‌ ಎಂಬ ವ್ಯಕ್ತಿ ಪಾರ್ಟಿ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಅಪರಿಚಿತ ಸ್ಥಳವಾದ ಕಾರಣ ಮರಳಿ ಬರುವಾಗ ಗೂಗಲ್‌ ಮ್ಯಾಪ್‌( Google map) ನಿರ್ದೇಶನಗಳನ್ನು ಅನುಸರಿಸಿ, ಅದು ತೋರಿಸಿದ ಮಾರ್ಗದಲ್ಲೇ ಕಾರು ಚಲಾಯಿಸಿಕೊಂಡು ಬರುತ್ತಿದ್ದರು.

Google map

ಮ್ಯಾಪ್‌ ಕುಸಿದ ಸೇತುವೆ ಮೇಲೆ ಮಾರ್ಗ ತೋರಿಸಿದ್ದು, ಫಿಲಿಪ್‌ ಅವರು ಅದೇ ಮಾರ್ಗದಲ್ಲಿ ತೆರಳಿದ್ದು, ಕಾರು ಕಂದಕಕ್ಕೆ ಉರುಳಿ ಫಿಲಿಪ್‌ ಮೃತಪಟ್ಟಿದ್ದರು. ಈ ಕಾರಣದಿಂದ ಗೂಗಲ್‌ನ ಬೇಜಾವಾಬ್ದಾರಿಯೇ ಫಿಲಿಪ್‌ ಸಾವಿಗೆ ಕಾರಣವೆಂದು ಆರೋಪಿಸಿದ್ದಾರೆ. ಈ ಕಾರಣದಿಂದ ಗೂಗಲ್‌ ವಿರುದ್ಧ ಮೊಕದ್ದಮೆ ದಾಖಲು ಮಾಡಿದ್ದಾರೆ.

ರಸ್ತೆ ಕುಸಿತ ಕುರಿತು ಹಲವು ಮಂದಿ ವರ್ಷದ ಹಿಂದೆಯೇ ಗೂಗಲ್‌ಗೆ ಮಾಹಿತಿ ನೀಡಿದ್ದರೂ, ಸಂಸ್ಥೆ ಅದನ್ನು ಅಪ್‌ಡೇಟ್‌ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಅಪ್‌ಡೇಟ್‌ ಮಾಡದೇ ಇರುವುದರಿಂದ ಸಂಸ್ಥೆಯ ವಿರುದ್ಧ ದಾವೆ ಹೂಡಿದ್ದಾರೆ.

ಇದನ್ನೂ ಓದಿ: KSRTC Bus in Mangalore: ಫ್ರೀ ಎಫೆಕ್ಟ್‌, ಮಂಗಳೂರಿಗರೇ ನಿಮಗೊಂದು ಶುಭ ಸುದ್ದಿ; ರೋಡಿಗಿಳಿಯಲಿದೆ ಸರಕಾರಿ ಬಸ್‌ಗಳು!

Leave A Reply