Shocking news: ಚಂದ್ರಯಾನ-3 ಯಶಸ್ಸಿನ ಇಂಜಿನಿಯರ್ ಸದ್ಯ ಬೀದಿಬದಿಯ ಇಡ್ಲಿ ವ್ಯಾಪಾರಿ !! ಅರೆ ಏನಿದು ವಿಚಿತ್ರ ?!

Chandrayaan-3 ISRO technician who worked in the Chandrayaan-3 launch is now selling idli

Chandrayaan-3 technician : ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಚಂದ್ರಯಾನ-3(Chandrayan-3) ಯಶಸ್ವಿಯಾಗಿ ಉಡಾವಣೆ ಮಾಡಿ, ಅದರಲ್ಲಿನ ನೌಕೆಗಳನ್ನು ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿಸಿ ಇಡೀ ವಿಶ್ವವೇ ಬೆರಗಾಗುವಂತಹ ಸಾಧನೆಯನ್ನು ಮಾಡಿದೆ. ಈ ಸಾಧನೆಯ ಹಿಂದೆ ಸಾವಿರಾರು ವಿಜ್ಞಾನಿಗಳ ಅವಿರತ ಪರಿಶ್ರಮವಿದೆ. ಇದರೊಂದಿಗೆ ಅನೇಕ ತಂತ್ರಜ್ಞರು, ಅನೇಕ ರೀತಿಯಾಗಿ ಬೇರೆ ಬೇರೆ ಹಂತದಲ್ಲಿ ಶ್ರಮಿಸಿದ ನೂರಾರು ಸಹಾಯಕರ ಪ್ರಯತ್ನವಿದೆ. ಇವರೆಲ್ಲರನ್ನು ದೇಶ ಅತ್ಯಂತ ಪ್ರೀತಿಯಿಂದ, ಗೌರವದಿಂದ ನೋಡುತ್ತಿದೆ. ಆದರೆ ವಿಪರ್ಯಾಸ ಎಂಬಂತೆ ಈ ಚಂದ್ರಯಾನ-3 ಯಶಸ್ಸಿನ ಹಿಂದಿರುವ ಇಂಜಿನಿಯರ್ (Chandrayaan-3 technician )ಒಬ್ಬರು ಜೀವನ ನಡೆಸಲು ಸದ್ಯ ಬೀದಿಬದಿಯ ವ್ಯಾಪಾರಕ್ಕೆ ಇಳಿದಿದ್ದಾರೆ. ಈ ವಿಚಾರ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.

ಹೌದು, ಚಂದ್ರಯಾನ-3 ಯಶಸ್ವಿಯಾದಾಗ ಭಾರತವನ್ನು ಇಡೀ ವಿಶ್ವ ಕೊಂಡಾಡಿತು. ಇದಕ್ಕೆ ಕಾರಣರಾದ ಪ್ರತಿಯೊಬ್ಬ ವಿಜ್ಞಾನಿ, ಇಂಜಿನಿಯರ್, ಸಹಾಯಕರನ್ನು ಭಾರತ, ಭಾರತೀಯರು ಕೊಂಡಾಡಿದರು. ಆದರೆ ಕೇಳಲು, ನೋಡಲು ಅಚ್ಚರಿಯಾಗುವಂತ ವಿಚಾರ ಅಂದ್ರೆ ಉಡಾವಣಾ ಕೇಂದ್ರದ ನಿರ್ಮಾಣದಲ್ಲಿ ಚಂದ್ರಯಾನ-3 ಲಾಂಚ್‌ಪ್ಯಾಡ್ ನಿರ್ಮಿಸಲು ಕೆಲಸ ಮಾಡಿದ ತಂತ್ರಜ್ಞ ದೀಪಕ್ ಕುಮಾರ್ ಉಪ್ರಾರಿಯಾ, ಜಾರ್ಖಂಡ್‌ ರಾಜಧಾನಿ ರಾಂಚಿಯ ರಸ್ತೆಬದಿಯಲ್ಲಿ ಇಡ್ಲಿಗಳನ್ನು ಮಾರುತ್ತಿದ್ದಾರೆ ಎಂಬ ಸುದ್ದಿಯೊಂದು ಎಲ್ಲೆಡೆ ಚರ್ಚೆಯಾಗುತ್ತಿದೆ.

ಅಂದಹಾಗೆ BBC ವರದಿಯ ಪ್ರಕಾರ, ಚಂದ್ರಯಾನ-3ರ ಲಾಂಚ್‌ಪ್ಯಾಡ್ ನಿರ್ಮಿಸಲು ಕೆಲಸ ಮಾಡಿದ್ದ HEC (ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್)ನ ಇಂಜಿನಿಯರ್‌ ದೀಪಕ್ ಕುಮಾರ್ ಉಪ್ರಾರಿಯಾ ಅವರು ಜೀವನ ನಿರ್ವಹಣೆಗಾಗಿ ರಾಂಚಿಯ ರಸ್ತೆಬದಿಯ ಅಂಗಡಿಯಲ್ಲಿ ಇಡ್ಲಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಉಪ್ರಾರಿಯಾ ಅವರು ರಾಂಚಿಯ ಧುರ್ವಾ ಪ್ರದೇಶದಲ್ಲಿನ ಹಳೆಯ ವಿಧಾನಸಭಾ ಕಟ್ಟಡದ ಎದುರು ಅಂಗಡಿಯನ್ನು ಹೊಂದಿದ್ದಾರೆ. ಚಂದ್ರಯಾನ-3ಗಾಗಿ ಫೋಲ್ಡಿಂಗ್ ಪ್ಲಾಟ್‌ಫಾರ್ಮ್ ಮತ್ತು ಸ್ಲೈಡಿಂಗ್ ಡೋರ್‌ ತಯಾರಿಸಲು ನೆರವಾಗಿದ್ದ ಇವರು HECಯ ಉದ್ಯೋಗಿ. ಆದರೆ ಅವರಿಗೆ ಕಳೆದ 18 ತಿಂಗಳಿನಿಂದ ಸಂಬಳವನ್ನು ಪಾವತಿಸದ ಕಾರಣ ಕುಟುಂಬದ ನಿರ್ವಹಣೆಗೆ ಅವರು ರಸ್ತೆ ಬದಿಯಲ್ಲಿ ಅಂಗಡಿಯನ್ನು ತೆರೆದಿದ್ದಾರೆ. ರಾಂಚಿಯ HEC ನೌಕರರು ತಮ್ಮ 18 ತಿಂಗಳ ಸಂಬಳದ ಬಾಕಿಯನ್ನು ವಿರೋಧಿಸಿ ತಮ್ಮ ಧ್ವನಿಯನ್ನು ಎತ್ತಿದರು. ಸಂಬಳ ಸಿಗದವರಲ್ಲಿ ದೀಪಕ್ ಕೂಡ ಸೇರಿದ್ದಾರೆ ಎನ್ನಲಾದ ಸುದ್ದಿ ತುಂಬಾ ವೈರಲ್ ಆಗಿದೆ

ಈ ಕುರಿತಾಗಿ ಮಾತನಾಡಿದ ಅವರು ಕೆಲವು ದಿನಗಳಿಂದ ಮನೆಯ ಅಗತ್ಯಗಳನ್ನು ಪೂರೈಸಲು ಇಡ್ಲಿಗಳನ್ನು ಮಾರಾಟ ಮಾಡುತ್ತಿದ್ದೇನೆ, ಬೆಳಿಗ್ಗೆ ಇಡ್ಲಿಗಳನ್ನು ಮಾರಾಟ ಮಾಡುತ್ತಿದ್ದೇನೆ ಮತ್ತು ಮಧ್ಯಾಹ್ನ ಕಚೇರಿಗೆ ಹೋಗುತ್ತಿದ್ದೇನೆ ಎಂದು ಉಪ್ರಾರಿಯಾ ಮಾಧ್ಯಮಗಳಿಗೆ ತಿಳಿಸಿದರು. ಕೆಲ ದಿನಗಳಿಂದ ಸಂಬಂಧಿಕರು, ಕ್ರೆಡಿಟ್ ಕಾರ್ಡ್ ಗಳಿಂದ ಸಾಲ ಮಾಡಿ ಜೀವನ ಸಾಗಿಸಲು ಪರದಾಡುತ್ತಿದ್ದರಿಂದ ಇಡ್ಲಿ ಮಾರಾಟ ಮಾಡುತ್ತಿದ್ದೇನೆ.ಇದುವರೆಗೆ ನಾಲ್ಕು ಲಕ್ಷ ರೂಪಾಯಿ ಸಾಲ ಮಾಡಿದ್ದೇನೆ. ಯಾರಿಗೂ ಹಣ ಹಿಂತಿರುಗಿಸದ ಕಾರಣ ಈಗ ಜನರು ಸಾಲ ನೀಡುವುದನ್ನು ನಿಲ್ಲಿಸಿದ್ದಾರೆ. ನಂತರ ನಾನು ನನ್ನ ಹೆಂಡತಿಯ ಆಭರಣಗಳನ್ನು ಅಡಮಾನವಿಟ್ಟು ಕೆಲವು ದಿನ ಮನೆ ನಡೆಸಿದ್ದೇನೆ. ನನ್ನ ಹೆಂಡತಿ ಒಳ್ಳೆಯ ಇಡ್ಲಿ ಮಾಡುತ್ತಾಳೆ. ಅದನ್ನು ಮಾರಾಟ ಮಾಡುವುದರಿಂದ ನನಗೆ ಪ್ರತಿದಿನ 300 ರಿಂದ 400 ರೂಪಾಯಿ ಸಿಗುತ್ತವೆ. ನಾನು 50-100 ರೂಪಾಯಿ ಲಾಭ ಗಳಿಸುತ್ತೇನೆ. ಈ ಹಣದಲ್ಲಿ ನಾನು ನನ್ನ ಮನೆ ನಡೆಸುತ್ತಿದ್ದೇನೆ” ಎಂದೂ ಅವರು ಹೇಳಿದ್ದಾರೆ.

ಬಿಬಿಸಿ ಪ್ರಕಾರ, ಉಪ್ರಾರಿಯಾ ಅವರು ಮಧ್ಯಪ್ರದೇಶದ ಹರ್ದಾ ಜಿಲ್ಲೆಯವರು. 2012ರಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಬಿಟ್ಟು 8,000 ಸಂಬಳಕ್ಕೆ ಎಚ್‌ಇಸಿಗೆ ಸೇರಿದ್ದರು. ಸರ್ಕಾರಿ ಕಂಪನಿಯಾದ ಕಾರಣ ಅವರು ತಮ್ಮ ಭವಿಷ್ಯ ಉಜ್ವಲವಾಗಲಿದೆ ಎಂದು ಭಾವಿಸಿದ್ದರು. ಆದರೆ ಪರಿಸ್ಥಿತಿ ಇದೀಗ ಬೇರೆಯೇ ಆಗಿದೆ.

https://x.com/Cow__Momma/status/1703453373310042379?t=XhCLcx-4WS8F8eQQOcnPIg&s=08

ವರದಿ ಅಲ್ಲಗಳೆದ ಸರ್ಕಾರ:
ದೀಪಕ್ ಕುಮಾರ್ ಉಪ್ರಾರಿಯಾ, ಜಾರ್ಖಂಡ್‌ ರಾಜಧಾನಿ ರಾಂಚಿಯ ರಸ್ತೆಬದಿಯಲ್ಲಿ ಇಡ್ಲಿಗಳನ್ನು ಮಾರುತ್ತಿದ್ದಾರೆ ಎಂಬ ಸುದ್ದಿಯೊಂದು ಎಲ್ಲೆಡೆ ಚರ್ಚೆಯಾಗುತ್ತಿದ್ದಂತೆ ಸರ್ಕಾರವು ಈ ವರದಿಯನ್ನು ಅಲ್ಲಗಳೆದಿದೆ. ಅಲ್ಲದೆ HEC ಚಂದ್ರಯಾನ-3 ಗಾಗಿ ಯಾವುದೇ ಘಟಕವನ್ನು ಮಾಡಿಲ್ಲ ಮತ್ತು 2003 ಮತ್ತು 2010 ರ ನಡುವೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಗೆ ಕೆಲವು ಮೂಲಸೌಕರ್ಯಗಳನ್ನು ಮಾತ್ರ ಒದಗಿಸಿದೆ ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ (PIB) ಫ್ಯಾಕ್ಟ್-ಚೆಕ್ ಯುನಿಟ್ ಹೇಳಿದೆ.

https://x.com/PIBFactCheck/status/1703794825722831032?t=4Q6Xymhf9r0p11oP4AhOkg&s=08

ಇದನ್ನೂ ಓದಿ: Yashvanthpura-Karatagi Express: ಪ್ರಸಿದ್ಧ ‘ಯಶವಂತಪುರ -ಕಾರಟಗಿ ಎಕ್ಸ್ ಪ್ರೆಸ್’ ರೈಲು ಮಾರ್ಗದಲ್ಲಿ ಮಹತ್ವದ ಬದಲಾವಣೆ !! ಇಲ್ಲಿದೆ ನೋಡಿ ಡೀಟೇಲ್ಸ್

Leave A Reply

Your email address will not be published.