ದಕ್ಷಿಣ ಕನ್ನಡ: ಗಣೇಶೋತ್ಸವ ಪ್ರಯುಕ್ತ ಅದೃಷ್ಟ ಚೀಟಿ!! ಗೆದ್ದವರಿಗೆ ‘ಒಂದು ಕೇಸ್ ಬಿಯರ್’ -ಹೀಗೊಂದು ವೈರಲ್ ತೀವ್ರ ಖಂಡನೆ

 

ದಕ್ಷಿಣ ಕನ್ನಡ:ಗಣೇಶೋತ್ಸವ ಪ್ರಯುಕ್ತ ಎಲ್ಲಾ ಕಡೆಗಳಲ್ಲೂ ಆಟೋಟ ಸ್ಪರ್ಧೆ, ಓಕುಳಿ ಆಟ, ನೃತ್ಯ ಮನೋರಂಜನಾ ಕಾರ್ಯಕ್ರಮ, ಸಾರ್ವಜನಿಕ ಅನ್ನದಾನ ಹೀಗೇ ಭಿನ್ನ-ವಿಭಿನ್ನ ವ್ಯವಸ್ಥೆಗಳು, ಕಾರ್ಯಕ್ರಮಗಳು ರಂಗೇರಿದ ಮಧ್ಯೆ ಇಲ್ಲೊಂದು ವಿಚಾರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯ ಗಡಿಭಾಗದ ಸುಳ್ಯದಲ್ಲಿ ಗಣೇಶೋತ್ಸವ ಪ್ರಯುಕ್ತ ಲಕ್ಕಿದೀಪ್ (ಅದೃಷ್ಟ ಚೀಟಿ) ಹಾಕಲಾಗಿದ್ದು, ಬಹುಮಾನವಾಗಿ ಮದ್ಯ (ಅಲ್ಕೋಹಾಲ್) ಇರಿಸಿರುವ ವಿಚಾರ ಚರ್ಚೆಗೆ ಕಾರಣವಾಗಿದೆ.

Viral Video : ಹುಳುಕು ಹಲ್ಲನ್ನು ಹುಡುಕಿ ಹುಡುಕಿ ಕೀಳುತ್ತೆ ಈ ಗಿಳಿ !! ಕೆಲವೇ ನಿಮಿಷಗಳಲ್ಲಿ 9 ಕೋಟಿ ವೀಕ್ಷಣೆ ಕಂಡ…

ಅದೃಷ್ಟ ಚೀಟಿಯ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ವಿಚಾರ ಬಹಿರಂಗವಾಗಿದ್ದು ತೀವ್ರ ಖಂಡನೆ ವ್ಯಕ್ತವಾಗಿದೆ.

ಚೀಟಿಯಲ್ಲಿ ಗಣೇಶೋತ್ಸವ ಪ್ರಯುಕ್ತ ಎಂದು ಬರೆಯಲಾಗಿದ್ದು, ಪ್ರಥಮ ಬಹುಮಾನವಾಗಿ ಬ್ಲ್ಯಾಕ್ & ವೈಟ್ ಹಾಗೂ ದ್ವಿತೀಯ ಬಹುಮಾನವಾಗಿ ಒಂದು ಕೇಸ್ ಬಿಯರ್ ಎಂದು ಬರೆಯಲಾಗಿತ್ತು. ಡ್ರಾ ದಿನಾಂಕ 19/09/23 ಎಂದು ನಮೂದಿಸಿದ್ದು ಡ್ರಾ ಆಗಿದೆಯೇ ಹಾಗೂ ಅದರ ಕರ್ತೃ ಯಾರು ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

Leave A Reply

Your email address will not be published.