Bengaluru: RSS ಕಾರ್ಯಕರ್ತರೆಂದು ಹೇಳಿ ಗೋಮಾಂಸದ ಜೊತೆಗೆ ವ್ಯಕ್ತಿ ಕಿಡ್ನಾಪ್‌! ಇಲ್ಲಿದೆ ಪ್ರಕರಣದ ಅಸಲಿ ಕಹಾನಿ!!

Bengaluru news Adugodi police arrested four accused who kidnapped beef exporter in Bangalore

Bengaluru: ತಾನೋರ್ವ ಆರ್‌ಎಸ್‌ಎಸ್‌ (RSS) ಕಾರ್ಯಕರ್ತ ಎಂದು ಹೇಳಿಕೊಂಡು ಗೋಮಾಂಸ (Beef) ಸಾಗಣೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಕಿಡ್ನಾಪ್‌ ಮಾಡಿರುವ ಘಟನೆಯೊದು ಬೆಂಗಳೂರಿನಲ್ಲಿ (Bengaluru)ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ, ಈ ಘಟನೆ ಸೆ.10ರಂದು ನಡೆದಿದೆ.

 

Bengaluru

ಮಹಮ್ಮದ್‌ ಎಂಬಾತ ಮೂವರು ಯುವಕರನ್ನು ಬಿಟ್ಟು ಗೋಮಾಂಸವನ್ನು ಸಾಗಣೆ ಮಾಡುತ್ತಿದ್ದ ಜಾವೀದ್‌ ಎಂಬಾತನನ್ನು ಕಿಡ್ನಾಪ್‌ ಮಾಡಿದ್ದು, ನಂತರ ಈ ಕುರಿತು ದೂರೊಂದು ಪೊಲೀಸ್‌ ಠಾಣೆಯಲ್ಲಿ ದಾಖಲಾದ ನಂತರ ನಿಜ ಘಟನೆ ಹೊರಬಂದಿದೆ.

ಸೆ.10 ರಂದು ಈ ಘಟನೆ ನಡೆದಿದೆ. ಜಾವೀದ್‌ ಎನ್ನುವಾತ ವಾಹನವೊಂದರಲ್ಲಿ ಗೋಮಾಂಸ ತುಂಬಿಸಿಕೊಂಡು ಮಹಮ್ಮದ್‌ ಎನ್ನುವಾತನ ಅಂಗಡಿಗೆ ರಾಮನಗರದಿಂದ ಬೆಂಗಳೂರಿನ ತಿಲಕನಗರಕ್ಕೆ ಬರುತ್ತಿದ್ದಾಗ, ಅಂಗಡಿ ಮಾಲೀಕ ಮೂವರು ಯುವಕರನ್ನು ಕಳುಹಿಸಿ ಜಾವೀದ್‌ನನ್ನು ಕಿಡ್ನಾಪ್‌ ಮಾಡಿಸಿದ್ದ ಎಂದು ಟಿವಿ9 ಮಾಧ್ಯಮವೊಂದು ಪ್ರಕಟ ಮಾಡಿದೆ. ಇದರಂತೆ ಜಾವೀದ್‌ನನ್ನು ಅಡ್ಡಗಟ್ಟಿದ ಯುವಕರು ನಾವು ಆರ್‌ಎಸ್‌ಎಸ್‌ ಕಾರ್ಯಕರ್ತರು ಎಂದು ಹೇಳಿ, ಗಾಡಿ ಸಮೇತ ಜಾವೀದ್‌ನನ್ನು ಕಿಡ್ನ್ಯಾಪ್‌ ಮಾಡಿದ್ದಾರೆ.

ಜಾವೀದ್‌ ಬಿಡುಗಡೆ ಒಂದು ಲಕ್ಷ ಹಣದ ಬೇಡಿಕೆ ಇಟ್ಟ ಇವರು ಕೊನೆಗೆ ಹತ್ತು ಸಾವಿರ ಪಡೆದು ಬಿಟ್ಟಿದ್ದಾರೆ. ನಂತರ ಜಾವೀದ್‌ ನನ್ನ ಗಾಡಿ ಕೊಡಿ ಎಂದು ಕಿಡ್ನಾಪ್‌ ಮಾಡಿದವರನ್ನು ಕೇಳಿದ್ದಾನೆ. ಅದರಂತೆ ಗಾಡಿ ಪಡೆಯಲೆಂದು ಹೋದ ಜಾವೀದ್‌ಗೆ ಅದರಲ್ಲಿ ಕೇವಲ ಗಾಡಿ ಕಂಡಿತೇ ಹೊರತು, ಗೋಮಾಂಸ ಕಂಡಿರಲಿಲ್ಲ. ಈ ಕುರಿತು ಆತ ನಂತರ ಆಡುಗೋಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದ. ನಂತರ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರಿಗೆ ಆರ್‌ಎಸ್‌ಎಸ್‌ ಹೆಸರಿನಲ್ಲಿ ಗೋಮಾಂಸ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.

ಅಂಗಡಿ ಮಾಲೀಕ ಮಹಮ್ಮದ್‌ ಎಂಬಾತನೇ ಈ ಎಲ್ಲಾ ಕಿಡ್ನಾಪ್‌ ಮಾಡಿಸಿದ್ದಾಗಿ ತಿಳಿದು ಬಂದಿದೆ. ಜಾವೀದ್‌ ಡೆಲಿವರಿ ಮಾಡಬೇಕಿದ್ದ ಗೋಮಾಂಸ ಅಂಗಡಿ ಮಾಲೀಕನೇ ಈ ರೀತಿ ಮಾಡಿದ್ದು ಎನ್ನುವುದು ಅನಂತರ ತಿಳಿದು ಬಂದಿದೆ ಎಂದು ಟಿವಿ9 ಮಾಧ್ಯಮವೊಂದು ಪ್ರಕಟ ಮಾಡಿದೆ. ಕಿಡ್ನಾಪ್‌ ಬಳಿಕ ಗೋಮಾಂಸ ತನ್ನ ಅಂಗಡಿಗೆ ತರಿಸಿಕೊಂಡು, ನಂತರ ಮಾಂಸ ಎಲ್ಲಿ ಎಂದು ಪುಂಗಿ ಬಿಟ್ಟಿದ್ದ. ಈ ಎಲ್ಲಾ ಘಟನೆ ಪೊಲೀಸ್‌ ತನಿಖೆ ವೇಳೆ ಬೆಳಕಿಗೆ ಬಂದಿದೆ. ಅಂಗಡಿ ಮಾಲೀಕ ಮಹಮ್ಮದ್‌ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Karnataka Rain: ಕರಾವಳಿ ಜಿಲ್ಲೆಗಳಲ್ಲಿ ಬಿರುಸಾಗಿ ಸುರಿಯಲಿದ್ದಾನೆ ಇಂದು (ಸೆ.20) ಮಳೆರಾಯ! ಗುಡುಗು, ಬಿರುಗಾಳಿ ಸಹಿತ ಮಳೆ!!

Leave A Reply

Your email address will not be published.