Chaitra Kundapura Fraud Case: ಚೈತ್ರಾ ಕುಂದಾಪುರ ವಂಚನೆ ಪ್ರಕರಣ; ಸಾಲು ಮರದ ತಿಮ್ಮಕ್ಕರ ಸರಕಾರಿ ಕಾರು ಬಳಕೆ; ಸ್ಪಷ್ಟನೆ ನೀಡಿದ ದತ್ತು ಮಗ!!!
Chaitra kundapura fraud case saalumarada thimmakka car misusing clarification of adopted son umesh
Chaitra Kundapura Fraud Case: ಉದ್ಯಮಿಯೊಬ್ಬರಿಂದ ಹಣ ಪಡೆದು ವಂಚನೆ ಮಾಡಿರುವ ಪ್ರಕರಣದಲ್ಲಿ ಬಂಧಿಯಾಗಿರುವ ಚೈತ್ರಾ ಕುಂದಾಪುರ ಪ್ರಕರಣದಲ್ಲಿ( Chaitra Kundapura Fraud Case)ಇದೀಗ ಸಾಲು ಮರದ ತಿಮ್ಮಕ್ಕ ಅವರಿಗೆ ನೀಡಿದ್ದ ಸಚಿವ ದರ್ಜೆ ಸ್ಥಾನಮಾನ ದುರ್ಬಳಕೆ ಮಾಡಿರುವ ಆರೋಪವೊಂದು ಕೇಳಿ ಬಂದಿದೆ.
ಆದರೆ, ಈ ಆರೋಪ ನಿರಾಕರಿಸಿರುವ ಸಾಲುಮರದ ತಿಮ್ಮಕ್ಕ ಮತ್ತು ಅವರ ದತ್ತು ಪುತ್ರ ಉಮೇಶ್, ಚೈತ್ರಾ ಕುಂದಾಪುರ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಆರೋಪವನ್ನು ಸರಸಾಗಟವಾಗಿ ನಿರಾಕರಿಸಿರಿವ ಸಾಲುಮರದ ತಿಮ್ಮಕ್ಕ ಮತ್ತು ಅವರ ದತ್ತು ಪುತ್ರ ಉಮೇಶ್, ಚೈತ್ರಾ ಕುಂದಾಪುರ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ ಎಂದಿದ್ದಾರೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯನಂತೆ ನಟನೆ ಮಾಡಿದ ಆರೋಪಿ ಚನ್ನನಾಯ್ಕ್ ಬಳಸಿದ್ದ ಕಾರು ಸಾಲು ಮರದ ತಿಮ್ಮಕ್ಕ ಅವರಿಗೆ ಸೇರಿದ್ದು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಗೋವಿಂದ ಬಾಬು ಪೂಜಾರಿ ಅವರನ್ನು ನಂಬಿಸಲು ಆರೋಪಿಗಳು ಈ ಸರಕಾರಿ ಕಾರು ದುರ್ಬಳಕೆ ಮಾಡಿದ್ದರು ಎಂದು ಸಿಸಿಬಿ ಮೂಲ ತಿಳಿಸಿದೆ.
ಈ ಬಗ್ಗೆ ಸಾಲುಮರದ ತಿಮ್ಮಕ್ಕ ಅವರ ದತ್ತು ಮಗ ಹೇಳಿರುವ ಪ್ರಕಾರ, ಗಗನ್ ಕಡೂರು ಅವರ ಪರಿಚಯವಿದ್ದು, ಅವರು ಅಖಿಲ ಭಾರತ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ನ ಸದಸ್ಯ, ನಾನು ಟ್ರಸ್ಟ್ ಅಧ್ಯಕ್ಷ. ಅವರ ವಿವಾಹಕ್ಕೆ ಸಾಲುಮರದ ತಿಮ್ಮಕ್ಕ ಅವರೊಂದಿಗೆ ನಾನು ಹೋಗಿದ್ದು ನಿಜ. ಪರಿಚಯ ಇದ್ದ ಮಾತ್ರಕ್ಕೆ ನಮ್ಮ ಹೆಸರು ಪ್ರಕರಣದಲ್ಲಿ ಬಳಸುವುದು ಸರಿಯಲ್ಲ. ದೃಶ್ಯವಾಹಿನಿಯಲ್ಲಿ ಪ್ರಸಾರ ಮಾಡಿರುವ ಸುದ್ದಿ ಸತ್ಯಕ್ಕೆ ದೂರ ಎಂದು ಹೇಳಿದ್ದಾರೆ.
ಈ ವಂಚನೆ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆ ಆಗಬೇಕಿದೆ. ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿರುವ ಕೆಲವರು, ಅವರೇನಾದರೂ ಸಾಲು ಮರದ ತಿಮಕ್ಕನವರ ಹೆಸರು ಹೇಳಿ, ಕಾರು ದುರ್ಬಳಕೆ ಮಾಡಿದ್ದಾರಾ ಎಂಬ ಕುರಿತು ಹೇಳಿದ್ದರೆ ಸಾಕ್ಷಿ ನೀಡಲಿ ಎಂಬ ಮಾತನ್ನು ಹೇಳಿದ್ದಾರೆ.
ಇದನ್ನೂ ಓದಿ : UNESCO :ಬೆಳ್ಳಂಬೆಳಿಗ್ಗೆಯೇ ಕನ್ನಡಿಗರಿಗೆ ಸಿಹಿ ಸುದ್ಧಿ ಕೊಟ್ಟ ಯುನೆಸ್ಕೊ- ವಿಶ್ವಪಾರಂಪರಿಕ ಪಟ್ಟಿಗೆ ಕರ್ನಾಟಕದ ಈ ದೇವಾಲಯಗಳು ಸೇರ್ಪಡೆ