Priyank kharge: RSS ಶಾಖೆಗಳು ಒಂದೊಂದಾಗಿ ಬಂದ್ !! ಕೊನೆಗೂ RSS ಗೆ ಬಿಗ್ ಶಾಕ್ ಕೊಟ್ಟ ಕಾಂಗ್ರೆಸ್ ಸರ್ಕಾರ

Priyakn kharge: ಕಳೆದ ವಿಧಾನಸಭಾ ಚುನಾವಣೆಯಲ್ಲಿ(Karnataka assembly election)ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿರುವಂತಹ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತ ಶುರುಮಾಡಿದ ಬಳಿಕ ಬಿಜೆಪಿಗೆ(BJP) ಒಂದೊಂದೇ ಶಾಕ್ ನೀಡುತ್ತಿದೆ. ಈ ಬೆನ್ನಲ್ಲೇ ಬಿಜೆಪಿಯ ಒಂದು ಅಂಗದಂತಿರುವ ಆರ್ ಎಸ್ ಎಸ್(RSS) ಗೂ ಕೂಡ ಶಾಕ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಹೌದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸರ್ಕಾರಿ ಕಚೇರಿ, ಪೊಲೀಸ್ ಠಾಣೆ, ಶಾಲಾ-ಕಾಲೇಜು, ವಿಶ್ವವಿದ್ಯಾಲಯ ಹೀಗೆ ಎಲ್ಲವನ್ನು ಆರೆಸ್ಸೆಸ್ ಶಾಖೆಗಳನ್ನಾಗಿ ಮಾಡಿಕೊಂಡಿದ್ದರು. ನಿಯಮಬಾಹಿರ ಕೆಲಸ ಮಾಡಲು ಬಳಸಿಕೊಳ್ಳುತ್ತಿದ್ದರು. ಆದರೆ ನಾವು ಅಧಿಕಾರಕ್ಕೆ ಬಂದ ಬಳಿಕ ಅಂತಹ ಕೇಂದ್ರಗಳನ್ನು ಒಂದೊಂದಾಗಿ ಬಂದ್ ಮಾಡುತ್ತಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ(Priyank kharge) ಹೇಳಿದ್ದು, ಈ ಮೂಲಕ ಬಿಜೆಪಿ ಮತ್ತು RSS ಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ದೊಡ್ಡ ಆಘಾತ ನೀಡಿದೆ.

ಅಂದಹಾಗೆ ಕಲಬುರಗಿ ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು ‘ಅದು ಯಾವ ಕಚೇರಿಯೋ ಅದಾಗಿಯೇ ಇದ್ದರೆ ಚೆನ್ನ. ಹಾಗಾಗಿ ಕಠಿಣ ಹೆಜ್ಜೆ ಇಟ್ಟಿದ್ದೇವೆ. ಆರೆಸ್ಸೆಸ್ ಶಾಖೆಗಳಾಗಿದ್ದ ಸರ್ಕಾರಿ ಕಚೇರಿಗಳು ಸಂಪೂರ್ಣ ಮುಕ್ತಗೊಂಡಿವೆ. ಜನಪರ ಕೆಲಸ, ಸಂವಿಧಾನ ಪರ ಕಾರ್ಯ ಮಾಡುತ್ತಿವೆ ಎಂದರು. ಆರೆಸ್ಸೆಸ್ ತತ್ವ ನಂಬಿ ಯಾರೂ ಉದ್ಧಾರ ಆಗಿಲ್ಲ. ಆಗಿದ್ದರೆ ಹೇಳಿ? ಅದರ ತತ್ವ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ’ ಎಂದು ಹೇಳಿದರು.

ಇಷ್ಟೇ ಅಲ್ಲದೆ ಆರ್‌ಎಸ್‌ಎಸ್ ಸಿದ್ಧಾಂತದಿಂದ ಯಾರು ಉದ್ಧಾರ ಆಗಿದ್ದಾರೆ ಎಂದು ಪ್ರಶ್ನಿಸಿದ ಅವರು ಆರ್‌ಎಸ್‌ಎಸ್ ತತ್ವದ ಬಗ್ಗೆ ಮಾತಾಡೋದಕ್ಕೆ ಹೆದರಿಕೆಯೂ ಇಲ್ಲ. ಕೇಂದ್ರೀಯ ವಿವಿ, ಜೆಎನ್‌ಯು ವಿವಿ ಆಗುತ್ತಿದೆ ಎನ್ನುತ್ತಾರೆ. ಆದರೆ ಅದೇ ಜೆಎನ್‌ಯುನಿಂದ ನಿಮ್ಮ ಅರ್ಥ ಮಂತ್ರಿ ನಿರ್ಮಲಾ ಸೀತಾರಾಮನ್ ಹೊರ ಬಂದಿಲ್ಲವೇ. ತಪ್ಪು ಯಾರೇ ಮಾಡಿದರೂ ತಪ್ಪೇ. ವಿವಿ ಶೈಕ್ಷಣಿಕ ಕೇಂದ್ರವಾಗಬೇಕು ಹೊರತು ರಾಜಕೀಯ ಅಡ್ಡೆಯಾಗಬಾರದು ಎಂದು ಪರೋಕ್ಷವಾಗಿ ಬಿಜೆಪಿಯನ್ನು ತಿವಿದಿದ್ದಾರೆ.

Leave A Reply

Your email address will not be published.