Home National Chaitra Kundapura Fraud Case: ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಅಭಿನವ ಹಾಲಶ್ರೀ ಕಾರು ಚಾಲಕ...

Chaitra Kundapura Fraud Case: ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಅಭಿನವ ಹಾಲಶ್ರೀ ಕಾರು ಚಾಲಕ ವಶಕ್ಕೆ!!! ಕುತೂಹಲ ಮೂಡಿಸಿದ ತನಿಖೆ ಪ್ರಗತಿ!!!

Chaitra Kundapura Fraud Case

Hindu neighbor gifts plot of land

Hindu neighbour gifts land to Muslim journalist

Chaitra Kundapura Fraud Case :ಉಡುಪಿ ಜಿಲ್ಲೆ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬುವವರಿಗೆ (Chaitra Kundapura Fraud Case)ಬೈಂದೂರು ಬಿಜೆಪಿ ಟಿಕೆಟ್ ಕೊಡಿಸುವ ಭರವಸೆ ನೀಡಿ ಸುಮಾರು ಏಳು ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪದ ಹಿನ್ನೆಲೆ ಚೈತ್ರಾ ಕುಂದಾಪುರ ಅವರನ್ನು ಪೊಲೀಸರು ಬಂಧಿಸಿದ್ದು ಗೊತ್ತಿರುವ ಸಂಗತಿ.

ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಅಭಿನವ ಹಾಲವೀರಪ್ಪಜ್ಜರವರು ಉದ್ಯಮಿ ಗೋವಿಂದ್ ಬಾಬು ಅವರ ಕಡೆಯಿಂದ ₹1.50 ಕೋಟಿ ಹಣವನ್ನು ಪಡೆದಿರುವ ವಂಚನೆ ಕೇಸ್ನಲ್ಲಿರುವ ಮತ್ತೊಬ್ಬ ಆರೋಪಿ ಎನ್ನಲಾಗುತ್ತಿದೆ. ಹಿಂದೂ ಸಂಘಟನೆಯ ನಾಯಕಿ ಚೈತ್ರಾ ಕುಂದಾಪುರ ಅವರ ಬಂಧನದ ಬಳಿಕ ಅನೇಕ ರೋಚಕ ಮಾಹಿತಿಗಳು ಹೊರ ಬೀಳುತ್ತಿದೆ.ಬಿಜೆಪಿ (BJP)ಎಂಎಲ್ಎ ಟಿಕೆಟ್ ಕೊಡಿಸಲು ಹಣ ಪಡೆದ ಪ್ರಕರಣದಲ್ಲಿ ಆರೋಪಿಯಾಗಿರುವ ತಾಲೂಕಿನ ಹಿರೇಹಡಗಲಿ ಗ್ರಾಮದ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಠದ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ(ಹಾಲಶ್ರೀ) ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ.

ಅಭಿನವ ಹಾಲವೀರಪ್ಪಜ್ಜ ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ಉದ್ಯಮಿ ಗೋವಿಂದ್ ಬಾಬು ಅವರ ಕಡೆಯಿಂದ ₹1.50 ಕೋಟಿ ಹಣವನ್ನು ಪಡೆದಿರುವ ವಂಚನೆ ಕೇಸ್ನಲ್ಲಿ ಇವರು ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಶ್ರೀಗಳು ಬಂಧನದ ಭೀತಿಯಲ್ಲಿದ್ದಾರೆ. ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ. ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಮೂರನೇ (ಎ 3) ಆರೋಪಿಯಾಗಿದ್ದು, ಸದ್ಯ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀಗಳ ಕಾರು ಚಾಲಕನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಸ್ವಾಮೀಜಿ ಇತ್ತೀಚೆಗೆ ಖರೀದಿ ಮಾಡಿದ ಇನ್ನೋವಾ ಕಾರು, 8 ಎಕರೆ ಜಮೀನು, ನಿವೇಶನ ಹಾಗೂ ಹೊಸ ಪೆಟ್ರೋಲ್ ಬಂಕ್ಗಳ ಕಡೆಗೆ ಎಲ್ಲರ ಚಿತ್ತ ಸೆಳೆದಿದೆ. ಈ ವಂಚನೆ ಪ್ರಕರಣದಲ್ಲಿ ಶಾಮೀಲಾಗಿ ಇವೆಲ್ಲವನ್ನೂ ಖರೀದಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ, ತಲೆಮರೆಸಿಕೊಂಡಿದ್ದು, ಹೀಗಾಗಿ, ಕಾರು ಚಾಲಕನ ವಿಚಾರಣೆ ನಡೆಸಿದಲ್ಲಿ ಶ್ರೀಗಳ ಕುರಿತು ಏನಾದರೂ ಸುಳಿವು ಸಿಗುವ ನಿರೀಕ್ಷೆಯಲ್ಲಿ ಸಿಸಿಬಿ ಕಚೇರಿಗೆ ಚಾಲಕನನ್ನು ಸಿಸಿಬಿ ಕಚೇರಿಗೆ ಕರೆ ತರಲಾಗಿದ್ದು, ಹೆಚ್ಚಿನ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಹೊರ ಬೀಳಬೇಕಾಗಿದೆ.

ಇದನ್ನೂ ಓದಿ: ಬುಲೆರೋ ಪಿಕಪ್‌ ವಾಹನ ಅಪಘಾತ! 60ಕ್ಕೂ ಅಧಿಕ ಕರುಗಳ ರಕ್ಷಣೆ, ಕೈಕಾಲು ಕಟ್ಟಿ, ಬಾಯಿಗೆ ಟೆಕ್ಸೋ ಬಿಗಿದ ಕರುಗಳ ಸ್ಥಿತಿ ಕರುಣಾಜನಕ ಸ್ಥಿತಿಯಲ್ಲಿ ಪತ್ತೆ!!