Varsha-varun love breakup: ಇನ್‌ಸ್ಟಾದಲ್ಲಿ ಹವಾ ಸೃಷ್ಟಿಸಿದ್ದ ಜೋಡಿ ಹಕ್ಕಿಗಳೀಗ ದೂರ ದೂರ !! ಅರೆ.. ಏನಾಯ್ತು ಇವರಿಗೆ, ವರ್ಷಾ ಕಾವೇರಿ- ವರುಣ್ ಸಂಬಂಧ ಕಾವೇರಿದ್ದು ಯಾಕೆ ?

Entertainment YouTube Star Varsha Kaveri Varun Aaradhya love breakup post goes viral

Share the Article

Varsha-Varun love breakup: ಸೋಷಿಯಲ್ ಮೀಡಿಯಾಗಳ ಹಾವಳಿಯಿಂದ ಯಾವುದೋ ಮೂಲೆಯಲ್ಲಿ ಕೂತು ಒಂದು ವಿಡಿಯೋ ಮಾಡಿ ಹಾಕಿದರೆ ಸಾಕು ಅದು ಟ್ರೆಂಡ್ ಆಗಿ ಫೇಮಸ್ ಆದವರು ತುಂಬಾ ಜನ ಇದ್ದಾರೆ. ಅಂತೆಯೇ ಅವರ ಪೈಕಿ ಇನ್ ಸ್ಟಾಗ್ರಾಮ್(Instagram) ಅಲ್ಲಿ ಹವಾ ಸೃಷ್ಟಿಸಿದ್ದ ಜೋಡಿ ಅಂದ್ರೆ ಅದು ವರ್ಷಾ ಕಾವೇರಿ ಮತ್ತು ವರುಣ್(Varsha-Varun love breakup) ಸಾಮಾಜಿಕ ಜಾಲತಾಣ ಬಳಸುವವರಿಗೆ ವರ್ಷಾ ಕಾವೇರಿ ಮತ್ತು ವರುಣ್ ಆರಾಧ್ಯ ಹೆಸರಿನ ಪರಿಚಯ ಇದ್ದೇ ಇರುತ್ತದೆ. ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಈ ಜೋಡಿ ರೀಲ್ಸ್​ ಮೂಲಕವೇ ಮನೆ ಮಾತಾಗಿದ್ದರು. ಅಲ್ಲದೆ, ಟ್ರೋಲಿಗರ ಫೇವರಿಟ್​ ಸಹ ಆಗಿದ್ದರು.​ ಆದರೆ, ಇಬ್ಬರ ಸಂಬಂಧದಲ್ಲಿ ಇದೀಗ ಬಿರುಕು ಮೂಡಿದ್ದು, ಬ್ರೇಕಪ್​ ಮಾಡಿಕೊಂಡಿರುವ ಬಗ್ಗೆ ಸ್ವತಃ ವರ್ಷ ಕಾವೇರಿ ಇನ್​ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ.

ಹೌದು, ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ರೀಲ್ಸ್‌ ಮೂಲಕವೇ ಸಾಕಷ್ಟು ಮಂದಿ ಗುರುತಿಸಿಕೊಂಡಿದ್ದಾರೆ. ಲಕ್ಷ ಲಕ್ಷ ಫಾಲೋವರ್ಸ್‌ ಪಡೆದುಕೊಂಡು ಜನಪ್ರಿಯತೆಯನ್ನೂ ಪಡೆದುಕೊಂಡಿದ್ದಾರೆ. ಅದರ ಆಧಾರದ ಮೇಲೆಯೇ ಕಿರುತೆರೆಯತ್ತಲೂ ಬಂದವರು ಸಾಕಷ್ಟು ಮಂದಿ. ಅದೇ ರೀತಿ ಇನ್‌ಸ್ಟಾಗ್ರಾಂನಲ್ಲಿ ವರುಣ್ ಮತ್ತು ವರ್ಷಾ ಜೋಡಿ‌ ಎಲ್ಲರ ಫೇವರಿಟ್. ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೇವೆ ಎಂದೂ ಹೇಳಿಕೊಂಡಿದ್ದರು ಇವರಿಬ್ಬರು. ಆದರೆ, ಆ ಪ್ರೇಮದ ಮಹಲು ಇದೀಗ ಕುಸಿದಿದೆ !! ಇಬ್ಬರೂ ಬೇರೆ ಬೇರೆ ಪೋಸ್ಟ್ ಹಾಕಿ ತಮ್ಮ ತಮ್ಮಿಬ್ಬರ ಅಗಲುವಿಕೆ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಇದು ಕೆಲವು ವರ್ಷಗಳಿಂದ ಈ ಜೋಡಿಯನ್ನು ನೋಡಿ ಮೆಚ್ಚಿದ್ದ ಹಲವರಿಗೆ ಕೊಂಚ ನೋವುಂಟು ಮಾಡಿರಬಹುದು. ಹಾಗಿದ್ರೆ ಇಬ್ಬರ ನಡುವೆ ಆದದ್ದೇನು? ವರ್ಷ ಹಾಗೂ ವರುಣ್ ಈ ಕುರಿತು ಹೇಳಿದ್ದೇನು ಗೊತ್ತಾ?

ವರ್ಷಾ ಕಾವೇರಿ ಹಾಕಿದ ಪೋಸ್ಟ್ ಏನು?
ಎಲ್ಲರಿಗೂ ನಮಸ್ಕಾರ, ತುಂಬಾ ದಿನದಿಂದ ನೀವೆಲ್ಲ ನನಗೆ ಕೇಳಿದ್ದಂತಹ ಸಾಮಾನ್ಯ ಪ್ರಶ್ನೆ ಏನೆಂದರೆ ನಿನಗೂ, ವರುಣ್‌ಗೂ ಏನಾಯಿತೆಂದು. ಆ ವಿಷಯದ ಬಗ್ಗೆ ನಾನು ಇವತ್ತು ಮಾತನಾಡಲು ಮುಂದೆ ಬಂದಿದ್ದೇನೆ. ನಿಮಗೆಲ್ಲ ಗೊತ್ತಿರುವ ವಿಷಯ ಆದರೆ ಗೊತ್ತಿಲ್ಲದ ವಿಷಯ ಏನೆಂದರೆ ಅವನು ಸಹ ನನ್ನ ಬಿಟ್ಟು ಬೇರೆ ಹುಡುಗಿಯ ಜೊತೆ ಪ್ರೀತಿಯನ್ನು ಇಟ್ಟುಕೊಂಡಿದ್ದ. ನನಗೆ ಆ ಹುಡುಗಿಯ ಹೆಸರು ಹೇಳಲು ಇಷ್ಟವಿಲ್ಲ. ಏಕೆಂದರೆ ಇನ್ನೊಬ್ಬರ ಮನೆಯ ಹೆಣ್ಣು ಮಕ್ಕಳ ಜೀವನವನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ. ಈ ವಿಷಯಕ್ಕಾಗಿ ಹಲವಾರು ಬಾರಿ ನನ್ನ- ವರುಣ್ ಮಧ್ಯೆ ಮನಸ್ತಾಪಗಳು ಆಗಿತ್ತು. ನಾನು ಎಷ್ಟೇ ಹೇಳಿದರೂ ಸಹ ಅವನು ಆ ಹುಡುಗಿಯನ್ನು ಬಿಡೋದಿಕ್ಕೆ ತಯಾರಿರಲಿಲ್ಲ. ಆದ್ದರಿಂದ ಅವನೇ ಹೇಳಿದ ಹಾಗೆ ನನಗೆ ನಿನ್ನನ್ನು ಪ್ರೀತಿಸಲು ಇಷ್ಟವಿಲ್ಲ ಎಂದು ತಿಳಿಸಿದ್ದ.

ನಾನು ಆ ಹುಡುಗಿಯ ಜೊತೆ ನನ್ನ ಜೀವನವನ್ನು ನಡೆಸಲು ನಿರ್ಧರಿಸುತ್ತೇನೆ ಎಂದು ಹೇಳಿದಾಗ ನನ್ನ ಮನಸ್ಸಿಗೆ ತುಂಬ ನೋವಾಯ್ತು. ಆದ್ದರಿಂದ ನಾನು ಕಳೆದ ಎರಡು ತಿಂಗಳಿಂದ ನನ್ನ, ವರುಣ್ ವಿಡಿಯೋಗಳನ್ನು ಅಪ್‌ಲೋಡ್ ಮಾಡ್ತಿಲ್ಲ. ನಮ್ಮನ್ನು ಪ್ರೀತಿಸುವ ಜನಗಳಿಗೆ ಹೇಳದಿದ್ರೆ ನನಗೆ ನಾನೇ ಮೋಸ ಮಾಡಿಕೊಳ್ತೀನಿ ಅಂತ ಮನಸ್ಸಿಗೆ ಅನಿಸಿದೆ. ಆದ್ದರಿಂದ ನಾನು ಇವತ್ತು ನಿಮ್ಮ ಮುಂದೆ ಈ ವಿಷಯವನ್ನು ಹೇಳಿಕೊಳ್ಳಲು ಇಷ್ಟಪಡ್ತಿದ್ದೀನಿ. ಇನ್ನು ಮುಂದೆ ನನ್ನ ವರುಣ್ ಮಧ್ಯೆ ಯಾವುದೇ ರೀತಿಯ ಪ್ರೀತಿ ಸಂಬಂಧ ಇರೋದಿಲ್ಲ. ಅವನು ಆ ಹುಡುಗಿ ಜೊತೆ ಖುಷಿಯಾಗಿರಲಿ. ನನ್ನನ್ನು ನಂಬಿಕೊಂಡು ನನ್ನ ಕುಟುಂಬ ಇದೆ, ನಾನು ಅವರಿಗಾಗಿ ಜೀವನವನ್ನು ನಡೆಸಬೇಕು, ಆದ್ದರಿಂದ ನಿಮಗೆ ಹೇಳಬೇಕು ಅನಿಸಿದ್ದನ್ನು ನಾನು ಹೇಳಿದ್ದೇನೆ, ಇನ್ನು ಮುಂದೆ ನನ್ನ ಜೀವನ ನನ್ನ ಇಷ್ಟದಂತೆ ನಡೆಯುತ್ತದೆ. ಅದನ್ನು ನೀವು ಅರ್ಥ ಮಾಡಿಕೊಳ್ಳಿರಿ ಎಂದು ನಾನು ಭಾವಿಸಿರುವೆ. ಇದು ಯಾವುದೇ ಫ್ರ್ಯಾಂಕ್ ಅಲ್ಲ, ಕಳೆದ 2 ತಿಂಗಳುಗಳಿಂದ ನಾನು ಇದನ್ನೂ ಫೇಸ್ ಮಾಡುತ್ತಿದ್ದೇನೆ ಎಂದು ನಟಿ ಸ್ಪಷ್ಟನೆ ನೀಡಿದ್ದಾರೆ.

ವರುಣ್ ಹಾಕಿದ ಪೋಸ್ಟ್ ನಲ್ಲಿ ಏನಿದೆ?
ಎಲ್ಲರಿಗೂ ನಮಸ್ಕಾರ ನೀವು ವರ್ಷಾ ಕಾವೇರಿ- ನನಗೆ ತೋರಿಸಿದ ಸಪೋರ್ಟ್‌ಗೆ ತುಂಬಾ ವಂದನೆಗಳು. ಪ್ರತಿಯೊಬ್ಬರಿಗೂ ಅವರದ್ದೇ ಆದ ಸಲಹೆ ಮತ್ತು ದೃಷ್ಟಿಕೋನವಿದೆ, ಹೀಗಾಗಿ ನಮ್ಮ ನಿರ್ಧಾರವನ್ನು ನೀವು ಒಪ್ಪಿಕೊಂಡು ನಮಗೆ ಸಪೋರ್ಟ್ ಮಾಡಬೇಕು. ವರ್ಷಾ- ನಾನು ಪರಸ್ಪರ ತೀರ್ಮಾನ ಮಾಡಿಕೊಂಡು ದೂರ ಆಗಿರುವುದು ಇದಕ್ಕೆ ನಮ್ಮ ಸ್ನೇಹಿತರು ಅಥವಾ ನಮ್ಮ ಕುಟುಂಬದವರು ಕಾರಣವಲ್ಲ. ಅವರನ್ನು ಈ ವಿಚಾರದಲ್ಲಿ ಎಳೆಯಬೇಡಿ. ಒಳ್ಳೆಯ ರೀತಿಯಲ್ಲಿ ಸಂಬಂಧ ಶುರು ಮಾಡಿ ಒಳ್ಳೆಯ ರೀತಿಯಲ್ಲಿ ಅಂತ್ಯವಾಡುತ್ತಿದ್ದೀವಿ. ವರ್ಷಾ ಕಾವೇರಿ ಮುಂದಿನ ಕೆಲಸಗಳಿಗೆ ಒಳ್ಳೆಯದಾಗಲಿ ಎಂದು ಹೇಳಲು ಇಷ್ಟ ಪಡುತ್ತೀನಿ. ಇಲ್ಲಿಯತನಕ ನೀವು ನೀಡಿದ ಪ್ರೋತ್ಸಾಹ ಮತ್ತು ಬೆಂಬಲ ಇನ್ನು ಮುಂದೆನೂ ಸದಾ ಇರಲಿ ಎಂದು ವರುಣ್ ಬರೆದುಕೊಂಡಿದ್ದಾರೆ. ಈ ಬೆನ್ನಲ್ಲೇ ನೆಟ್ಟಿಗರು ವರುಣ್‌ಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ವರುಣ್ ಅಕ್ಕ ಚೈತ್ರಾ ಹೇಳಿದ್ದೇನು?
ವರುಣ್ ಬ್ರೇಕಪ್ ಬಗ್ಗೆ ಸಹೋದರಿ ಚೈತ್ರಾ ಆರಾಧ್ಯಗೂ ಪ್ರಶ್ನೆ ಮಾಡಿದ್ದರು. ಹಾಗಾಗಿ ಅವರು ಕೂಡ ಸ್ಪಷ್ಟನೆ ನೀಡಿದ್ದಾರೆ. ಇಲ್ಲಿ ಯಾರೂ ಯಾರಿಗೂ ಸಪೋರ್ಟ್ ಮಾಡುತ್ತಿಲ್ಲ ಅವರಾಗಿಯೇ ನಿರ್ಧಾರ ತೆಗೆದುಕೊಂಡಿರುವುದು. ಈ ವಿಚಾರದಲ್ಲಿ ನಮ್ಮನ್ನು ದೂರಬೇಡಿ. ನಮ್ಮನ್ನು ಕೇಳಿ ಹೇಳಿ ಅವರಿಬ್ಬರು ಸಂಬಂಧ ಶುರು ಮಾಡಿಲ್ಲ ಅವರಿಬ್ಬರೇ ಸೃಷ್ಟಿಸಿ ಕೊಂಡಿರುವ ಪ್ರಪಂಚ ಮಾಡಿಕೊಂಡಿರುವ ದಾರಿ. ಅವರಿಬ್ಬರೂ ದೂರಾಗುತ್ತಿರುವು ಸರಿಯಲ್ಲ ಅದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ಆದರೆ ಭವಿಷ್ಯದಲ್ಲಿ ಅವರೇ ಒಟ್ಟಿಗಿದ್ದು ಪರಸ್ಪರ ಖುಷಿ ಮತ್ತು ನೋವು ಹಂಚಿಕೊಳ್ಳಬೇಕು. ಅವರಿಬ್ಬರ ಮೇಲೆ ಯಾರೂ ದ್ವೇಷ ಸಾಧಿಸಬೇಡಿ. ಪ್ರತಿಯೊಬ್ಬರಿಗೂ ಪರ್ಸನಲ್ ಸಮಸ್ಯೆ ಇರುತ್ತದೆ ಪರ್ಸನಲ್ ಜೀವನ ಇರುತ್ತದೆ. ನಮಗೂ ಜೀವನ ಇದೆ ಅದರ ಮೇಲೆ ಗಮನ ಕೊಟ್ಟು ಮುಂದೆ ಸಾಗೋಣ. ಈ ಸಮಯದಲ್ಲಿ ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಿರುವ ಪ್ರತಿಯೊಬ್ಬರಿಗೂ ವಂದನೆಗಳು ಎಂದು ಚೈತ್ರಾ ಬರೆದುಕೊಂಡಿದ್ದಾರೆ.

ನೆಟ್ಟಿಗರು ಹೇಳಿದ್ದೇನು?
ಇನ್ನು ಇಷ್ಟೊಂದು ಗಾಢವಾಗಿ ಪ್ರೀತಿಸುತ್ತಿದ್ದ ಜೋಡಿ ದಿಢೀರನೆ ಬ್ರೇಕ್ ಅಪ್ ಸುದ್ದಿ ಹರಿ ಬಿಟ್ಟಿದ್ದು ಸಾಕಷ್ಟು ಟ್ರೋಲ್ ಮತ್ತು ಮೀಮ್ಸ್ ಗಳಿಗೂ ಕಾರಣವಾಗಿದೆ. ಇನ್‌ಸ್ಟಾಗ್ರಾಂನಲ್ಲಿ ವರ್ಷಾ ಪೋಸ್ಟ್ ಹಾಕುತ್ತಿದ್ದಂತೆ ಗೂಗಲ್ ನಲ್ಲಿ ವರುಣ್ ವರ್ಷಾ ಎಂದು ಸರ್ಚ್ ಮಾಡಲು ಶುರು ಮಾಡಿದ್ದಾರೆ. ಈ ಬೆನ್ನಲ್ಲೇ ನೆಟ್ಟಿಗರು ವರುಣ್‌ಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ವರ್ಷಾ ಗಿಫ್ಟ್‌ ಮಾಡಿದ ಬೈಕ್‌ನಲ್ಲಿ, ಡುಡ್ಡಿನಲ್ಲಿ ಶೋಕೆ ಮಾಡ್ತಿದ್ದೀರಾ. ಅದನ್ನು ಅವರಿಗೆ ವಾಪಾಸ್‌ ಕೊಡಿ. ಪ್ರೀತಿಗೆ ಮೋಸ ಮಾಡಿ ಇನ್ನೋಬ್ಬರ ಹಿಂದೆ ಹೋಗಿದ್ದೀರಾ ಥೂ ಎಂದೆಲ್ಲಾ ಕಾಮೆಂಟ್‌ ಮಾಡಿದ್ದಾರೆ.

ವರುಣ್​ ಮತ್ತು ವರ್ಷಾ ಸಾಮಾಜಿಕ ಜಾಲತಾಣದಲ್ಲಿ ಪಡೆದಿದ್ದ ಖ್ಯಾತಿ ಅವರನ್ನು ಧಾರಾವಾಹಿಯೊಂದರ ಅತಿಥಿ ಪಾತ್ರದವರೆಗೂ ಕರೆದೊಯ್ದಿತ್ತು. ಇಬ್ಬರ ಮನೆಯವರೂ ಕೂಡ ಅವರ ಪ್ರೀತಿಯನ್ನು ಒಪ್ಪಿಕೊಂಡಿತ್ತು. ಆಗಾಗ ಕುಟುಂಬದ ಜತೆಗೂ ವಿಡಿಯೋಗಳನ್ನು ಮಾಡಿ ಪೋಸ್ಟ್​ ಮಾಡುತ್ತಿದ್ದರು. ಇದ್ದರೆ ಇವರ ರೀತಿ ಇರಬೇಕು ಅಂತಾ ಎಷ್ಟೋ ಮಂದಿ ಮಾತನಾಡಿಕೊಳ್ಳುವಂತೆ ಈ ಜೋಡಿ ಜಾಲತಾಣದಲ್ಲಿ ಮೋಡಿ ಮಾಡಿತ್ತು. ಆದರೆ, ಇದೀಗ ಇಬ್ಬರ ನಡುವೆ ಬ್ರೇಕಪ್​ ಆಗಿರುವುದು ಅವರ ಫಾಲೋವರ್ಸ್​ಗೆ ಶಾಕಿಂಗ್​ ಸಂಗತಿಯಾಗಿದೆ. ವರುಣ್​ ವಂಚನೆ ಮಾಡಿರುವುದಾಗಿ ವರ್ಷಾ ತಿಳಿಸಿದ್ದು, ಆಕೆಯ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್​ ಧೈರ್ಯ ತುಂಬುತ್ತಿದ್ದಾರೆ.

ಇದನ್ನೂ ಓದಿ: Bengalore accident: ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ- ಮಂಗಳೂರು ಯುವಕ ದಾರುಣ ಸಾವು

Leave A Reply