Home National Crime: ಅಂಗಡಿಯಲ್ಲಿ ಟೀ ಕುಡಿಯುವಾಗಲೇ ಯುವಕನ ಭೀಕರ ಕೊಲೆ! ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಹತ್ಯೆ!!!

Crime: ಅಂಗಡಿಯಲ್ಲಿ ಟೀ ಕುಡಿಯುವಾಗಲೇ ಯುವಕನ ಭೀಕರ ಕೊಲೆ! ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಹತ್ಯೆ!!!

Mandya

Hindu neighbor gifts plot of land

Hindu neighbour gifts land to Muslim journalist

Mandya: ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯಲ್ಲಿ ನಡು ರಸ್ತೆಯಲ್ಲಿ ಯುವಕನೋರ್ವನನ್ನು ಅಟ್ಟಾಡಿಸಿಕೊಂಡು ಕೊಚ್ಚಿ ಕೊಲೆ ಮಾಡಿದ ಘಟನೆಯೊಂದು ನಡೆದಿದೆ. ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಯುವಕನ ಮೇಲೆ ಅಟ್ಯಾಕ್‌ ಮಾಡಿದ್ದಾರೆ.

ಅಕ್ಷಯ್‌ ಅಲಿಯಾಸ್‌ ಗಂಟ್ಲು (22) ದುಷ್ಕರ್ಮಿಗಳಿಂದ ಹತ್ಯೆಯಾದ ಯುವಕ.

ಅಂಗಡಿಯಲ್ಲಿ ಟೀ ಕುಡಿಯುತ್ತಿರುವ ಸಂದರ್ಭದಲ್ಲಿ ಅಟ್ಯಾಕ್‌ ಮಾಡಲು ಯತ್ನಿಸಿದ್ದಾಗ, ಅಕ್ಷಯ್‌ ತನ್ನ ಪ್ರಾಣ ಉಳಿಸಲು ಅಲ್ಲಿಂದ ಓಡಿದ್ದಾನೆ. ಆದರೂ ಬೆನ್ನತ್ತಿ ದಾಳಿ ಮಾಡಿದ್ದಾರೆ ದುಷ್ಕರ್ಮಿಗಳು. ನೂರು ಮೀಟರ್‌ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಹಳೇ ದ್ವೇಷಕ್ಕೆ ಯುವಕನ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಮಂಡ್ಯದ ಪಶ್ಚಿಮ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಂತಕರಿಗಾಗಿ ಶೋಧ ಕಾರ್ಯ ನಡೆದಿದೆ. ಮಂಡ್ಯದ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ದ.ಕ. : ಡೆಂಗ್ಯೂ ಜ್ವರಕ್ಕೆ ಯುವತಿ ಬಲಿ