C M Siddaramaiah: ತನ್ನಂತೆಯೇ ಶಾಲೆ ಬಿಟ್ಟು ಕುರಿ ಕಾಯುತ್ತಿದ್ದ ಬಾಲಕ – ವಿಚಾರ ತಿಳಿದ ಸಿಎಂ ಸಿದ್ದರಾಮಯ್ಯ ಮಾಡಿದ್ದೇನು ಗೊತ್ತಾ?

C M Siddaramaiah: ಸಿದ್ದರಾಮಯ್ಯನವರು(C M Siddaramaiah)ಎಷ್ಟು ಬಡತನದಿಂದ ಬಂದವರು ಎಂದು ನಮಗೆಲ್ಲರಿಗೂ ಗೊತ್ತೇ ಇದೆ. ಅವರು ಕುರುಬ ಸಮಾಜದವರಾದ ಕಾರಣ ಕುರಿಯನ್ನು ಕಾಯುತ್ತ ಜೀವನವನ್ನು ಸಾಗಿಸುತ್ತಿದ್ದರು. ಬಾಲ್ಯದಲ್ಲಿ ಇದೇ ಕಾಯಕವನ್ನು ನೆರೆವೇರಿಸುತ್ತಿದ್ದ ಅವರು ಮುಂದೆಯೂ ಇದೇ ರೀತಿ ಕುರಿಯನ್ನು ಕಾಯುತ್ತಿದ್ದರೆ ಇಂದು ರಾಜ್ಯದ ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ ಮೆರೆಯುತ್ತಿರಲಿಲ್ಲ. ಪ್ರಬಲ ನಾಯಕನಾಗಿ ಕಂಗೊಳಿಸುತ್ತಿರಲಿಲ್ಲ. ಆದರೆ ಅದೃಷ್ಟ ಚೆನ್ನಾಗಿತ್ತು, ಯಾರದೋ ಸಹಾಯದಿಂದ ತಾನು ಶಾಲೆಗೆ ಕಲಿತು ಇಂದು ನಿಮ್ಮೆಲ್ಲರ ಮುಂದೆ ಮುಖ್ಯಮಂತ್ರಿ ಆಗಿ ನಿಂತಿದ್ದಾರೆ. ಈ ವಿಚಾರವನ್ನು ಸ್ವತಃ ಸಿಎಂ ಸಿದ್ದರಾಮಯ್ಯನವವರೇ ಹಲವು ಕಾರ್ಯಕ್ರಮಗಳಲ್ಲಿ ಹೇಳಿದ್ದಾರೆ. ಆದರೆ ಇಂದು ತನ್ನಂತೆ ಯಾರಾದರೂ ಈ ರೀತಿ ಕುರಿ ಕಾಯುತ್ತಾ ಶಾಲೆಯಿಂದ ವಂಚಿತರಾದರೆ ಸಿಎಂ ಸಿದ್ದರಾಮಯ್ಯನವರು ಸುಮ್ಮನಿರುತ್ತಾರೆಯೇ? ಅದು ಕೂಡ ಒಬ್ಬ ರಾಜ್ಯದ ಮುಖ್ಯಮಂತ್ರಿ ಆಗಿ. ಅಂತೆಯೇ ಇಂದು ಈ ವಿಚಾಯವಾಗಿ ಒಂದು ವಿಶೇಷವಾದ ಘಟನೆ ನಡೆದಿದೆ.

ಹೌದು, ಸಿದ್ದರಾಮಯ್ಯನವರು ತನ್ನಂತೆಯೇ ಸದ್ಯ ಬಾಲ್ಯದಲ್ಲಿ ಶಾಲೆ ಬಿಟ್ಟು ಸದ್ಯ ಕುರಿ ಕಾಯುತ್ತಿರುವಂತಹ ಒಬ್ಬ ಬಾಲಕನ ಬಗ್ಗೆ ತಿಳಿದು, ವಿಚಾರ ಗೊತ್ತಾದ 24 ಗಂಟೆ ಒಳಗಡೆ ಆತನನ್ನು ಶಾಲೆಗೆ ಸೇರಿಸುವಂತಹ ಮಹತ್ಕಾರ್ಯವನ್ನು ಮಾಡಿದ್ದಾರೆ. ಚಿತ್ರದುರ್ಗ(Chitradurga) ಚಳ್ಳಕೆರೆ ತಾಲೂಕಿನ ಬಸಾಪುರ ಗ್ರಾಮದಲ್ಲಿ ಇಂತಹ ಒಂದು ವಿಶೇಷವಾದ ಪ್ರಸಂಗಕ್ಕೆ ಮುಖ್ಯಮಂತ್ರಿಗಳು ಸಾಕ್ಷಿಯಾಗಿದ್ದಾರೆ. ಸದ್ಯ ಸಿಎಂ ಸಿದ್ದರಾಮಯ್ಯನವರ ನಡೆಗೆ ಭಾರೀ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಇಂದು 6ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಶಿಕ್ಷಣ ಮೂಲಭೂತ ಹಕ್ಕು ಎಂದು ಸಂವಿಧಾನದಲ್ಲಿ ಉಲ್ಲೇಖ ಮಾಡಿದ್ದರೂ ಇನ್ನೂ ಶಾಲೆಯಿಂದ ಹೊರಗುಳಿಯುವ ಸಾವಿರಾರು ಮಕ್ಕಳು ಪ್ರತಿವರ್ಷ ಪತ್ತೆಯಾಗುತ್ತಿದ್ದಾರೆ. ಇಂದು ಈ ಕುರಿತು ಸಿದ್ದರಾಮಯ್ಯ ಮಾಡಿದ ಕಾರ್ಯ ಎಲ್ಲಾ ರಾಜಕಾರಣಿಗಳಿಗೆ ಮಾದರಿಯಾಗುವಂತದ್ದು.

ಅಂದಹಾಗೆ ಮಹೇಂದ್ರ ಎನ್ನುವವರು ನಿನ್ನೆ ತಾನೆ “ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಸಾಪುರ ಗ್ರಾಮದ ಮಂಜಣ್ಣ ಎಂಬುವರ ಪುತ್ರ ಯೋಗೇಶ್ ವಯಸ್ಸು (11) 2 ವರ್ಷದಿಂದ ಕುರಿ ಕಾಯುತ್ತ ಇದ್ದಾನೆ. ನಾಗರಿಕ ಜನಗಳ ಮದ್ಯ ಸ್ವಂತ ಮಗನನ್ನೇ ಅನಾಗರಿಕ ಮಾಡಲು ಹೊರಟಿರುವುದು ನೋವಿನ ಸಂಗತಿ’ ಎಂದು ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ ಟ್ಬೀಟ್‌ ಮಾಡಿದಗ್ದರು. ಈ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾದ ಮುಖ್ಯಮಂತ್ರಿ ಸಾಮಾಜಿಕ ಜಾಲತಾಣದ ನಿರ್ವಹಣೆ ಸಿಬ್ಬಂದಿ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ, ಬಾಲಕನನ್ನು ಗುರುತಿಸಿ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಕಳೆದ 2 ವರ್ಷದಿಂದ ಯೋಗೀಶ್ ಶಾಲೆಗೆ ಹೋಗದೆ ಕುರಿಕಾಯಲು ತೆರಳುತ್ತಿದ್ದ ಎನ್ನಲಾಗಿದೆ. ಈ ಕುರಿತಾಗಿ ಸಿಎಂ ಆಫ್ ಕರ್ನಾಟಕ ಎಕ್ಸ್ ಖಾತೆಗೆ ಟ್ಯಾಗ್‍ ಮಾಡಲಾಗಿತ್ತು. ಈ ಕುರಿತು ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ, ತಮ್ಮ ಅಲ್ಲದೆ ಬಡತನದ ಕಾರಣಕ್ಕೆ ಶಿಕ್ಷಣದಿಂದ ವಂಚಿತನಾಗಿದ್ದ ಯೋಗೇಶ್‌ ಈಗ ಇತರ ಮಕ್ಕಳಂತೆ ಶಾಲೆಯಲ್ಲಿ ಕಲಿಯುತ್ತಾ, ನಲಿಯುತ್ತಾ ಉಜ್ವಲ ಭವಿಷ್ಯದೆಡೆಗೆ ಹೆಜ್ಜೆ ಹಾಕುತ್ತಿದ್ದಾನೆ. ಬಾಲ್ಯದಲ್ಲಿ ನಾನು ಕೂಡ ಯೋಗೇಶ್‌ನಂತೆ ಶಾಲೆಯಿಂದ ವಂಚಿತನಾಗಿದ್ದೆ. ರಾಜಪ್ಪ ಮೇಸ್ಟ್ರು ನನ್ನನ್ನು ನೇರವಾಗಿ 5ನೇ ತರಗತಿಗೆ ದಾಖಲಾತಿ ಮಾಡಿ ಶಿಕ್ಷಣ ಸಿಗುವಂತೆ ಮಾಡಿದ್ದರಿಂದ ಇಂದು ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ ಎಂದು ತಮ್ಮ ಬಾಲ್ಯವನ್ನು ಮೆಲುಕು ಹಾಕಿದ್ದಾರೆ. ಮರಳಿ ಶಿಕ್ಷಣದತ್ತ ಮುಖ ಮಾಡಿರುವ ಈ ಬಾಲಕನ ಭವಿಷ್ಯವೂ ಉಜ್ವಲವಾಗಲಿ ಎಂಬ ಹಾರೈಕೆ ನನ್ನದು. ಇಂತಹ ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳು ನಿಮಗೂ ಕಂಡು ಬಂದರೆ ನಮ್ಮ ಕಚೇರಿಯ @osd_cmkarnataka ಟ್ವಿಟರ್ ಖಾತೆಯನ್ನು ಸಂಪರ್ಕಿಸಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Leave A Reply

Your email address will not be published.