ಮಕ್ಕಳನ್ನು ಕೊಂದೇ ಸಾವಿಗೆ ಶರಣಾದ್ರ ದಂಪತಿ!! ಬೆಚ್ಚಿಬೀಳಿಸಿದ ನಾಲ್ವರ ಸಾವಿನ ಪ್ರಕರಣ

 

 

ಮಕ್ಕಳಿಬ್ಬರನ್ನು ಕೊಂದು ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆಯೊಂದು ಕೇರಳದ ಕೊಚ್ಚಿ ಕಡಮಕ್ಕುಡಿ ಬಳಿಯಲ್ಲಿ ನಡೆದಿದೆ.

ಮೃತರನ್ನು ಮಿಜೋ ಜಾನಿ(39), ಶಿಲ್ಪಾ (32), ಆರಾನ್ (05), ಎಬೆಲ್ (07) ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೂ ಮುನ್ನ ದಂಪತಿ ಮಕ್ಕಳನ್ನು ಕೊಂದು ಸಾವಿಗೆ ಶರಣಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯ ಬಳಿಕ ಪೊಲೀಸ್ ಮೂಲಗಳು ತಿಳಿಸಿವೆ.

ಡಿಸೈನರ್ ಆಗಿದ್ದ ಮಿಜೋ ತನ್ನ ಮಡದಿ ಹಾಗೂ ಮಕ್ಕಳೊಂದಿಗೆ ಮನೆಯ ಮೊದಲ ಮಹಡಿಯಲ್ಲಿ ವಾಸ ಮಾಡಿಕೊಂಡಿದ್ದು, ಕೆಳ ಮಹಡಿಯಲ್ಲಿ ತಾಯಿ ಹಾಗೂ ಸಹೋದರ ವಾಸ್ತವ್ಯವಿದ್ದರು. ಮುಂಜಾನೆ ವೇಳೆ ಮಿಜೋ ಸಹೋದ್ಯೋಗಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

ತನಿಖೆಯ ಪ್ರಕಾರ ಮಿಜೋ ಕೆಲ ಸಮಯಗಳ ಹಿಂದಷ್ಟೇ ವಿದೇಶಕ್ಕೆ ತೆರಳಿದ್ದು, ವೀಸಾ ತೊಂದರೆಯಾದ ಹಿನ್ನೆಲೆಯಲ್ಲಿ ಊರಿಗೆ ವಾಪಸ್ಸಾಗಿದ್ದರು. ಆ ಬಳಿಕ ಮಾನಸಿಕವಾಗಿ ನೊಂದುಕೊಂಡಿದ್ದ ಮಿಜೋ ಹಣಕಾಸಿನ ತೊಂದರೆಗೆ ಒಳಪಟ್ಟು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ.

Leave A Reply

Your email address will not be published.