Dakshina Kannada :ಉದಯಕಾಲ ಅಂಕಣಕಾರ ದಿಲೀಪ್ ಕುಮಾರ್ ಸಂಪಡ್ಕ ಇವರಿಗೆ ರಾಜ್ಯ ಶಿಕ್ಷಣ ರತ್ನ ಪ್ರಶಸ್ತಿ
Dakshina Kannada news State Education Ratna Award to Udayakaala Columnist Dilip Kumar sampadka
Dakshina Kannada: ದಕ್ಷಿಣ ಕನ್ನಡ ಜಿಲ್ಲೆಯ( Dakshina Kannada) ಕಡಬ ತಾಲೂಕಿನ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಓಂತ್ರಡ್ಕದಲ್ಲಿ ಆಂಗ್ಲ ಭಾಷ ಪದವೀಧರ ಶಿಕ್ಷಕರಾಗಿ ಕರ‍್ಯನಿರ್ವಹಿಸುತ್ತಿರುವ ಶೈಕ್ಷಣಿಕ ಚಿಂತಕ, ಉದಯಕಾಲದ ಅಂಕಣಕಾರ ದಿಲೀಪ್ ಕುಮಾರ್ ಸಂಪಡ್ಕ ಇವರಿಗೆ ಕರ್ನಾಟಕ ರಕ್ಷಣಾ ವೇದಿಕೆಯ(ಹೆಚ್ ಶಿವರಾಮೇಗೌಡ ಸಾರಥ್ಯದ) ಶೈಕ್ಷಣಿಕ ವಿಭಾಗದ ರಾಜ್ಯ ಘಟಕವು ನೀಡುವ ೨೦೨೩ನೇ ಸಾಲಿನ ರಾಜ್ಯಮಟ್ಟದ ಕರ್ನಾಟಕ ರಕ್ಷಣಾ ರಾಜ್ಯ ಶಿಕ್ಷಣ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇವರು ಓಂತ್ರಡ್ಕ ಶಾಲೆಯಲ್ಲಿ ೦೭ ವರ್ಷಗಳಿಂದ ಪದವೀಧರ ಪ್ರಾಥಮಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಸುಮಾರು ಒಂಭತ್ತು ವರ್ಷಗಳ ಕಾಲ ಬೆಂಗಳೂರಿನ ಪ್ರತಿಷ್ಠಿತ ಸಿ.ಬಿ.ಎಸ್.ಸಿ ಶಾಲೆಗಳಲ್ಲಿ ಶೈಕ್ಷಣಿಕ ಕೋ-ಆರ್ಡಿನೇಟರ್, ಪ್ರಾಂಶುಪಾಲರಾಗಿ ಸಹ ಕಾರ್ಯನಿರ್ವಹಿಸಿರುತ್ತಾರೆ. ಒಟ್ಟು ೧೬ ವರ್ಷಗಳ ಸೇವಾನುಭವನ್ನು ಹೊಂದಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಹಲವು ತರಬೇತಿಗಳಿಗೆ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಶಿಕ್ಷಕರಿಗೆ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ.
ಕಲಿಕಾ ಚೇತರಿಕೆಯ ೮ನೇ ತರಗತಿಯ ಇಂಗ್ಲೀಷ್ ಕಲಿಕಾ ಹಾಳೆ ತಯಾರಿಕೆಯ ಸಂಪನ್ಮೂಲ ತಂಡದಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿರುತ್ತಾರೆ. ಇವರ ಹಲವು ಲೇಖನಗಳು ರಾಜ್ಯದ ಹಲವು ಪತ್ರಿಕೆಗಳಲ್ಲಿ, ರಾಷ್ಟಿçÃಯ ಮತ್ತು ಅಂತರಾಷ್ಷೀಯ ನಿಯತಕಾಲಿಕೆಗಳಲ್ಲಿ ಕೂಡ ಪ್ರಕಟಗೊಂಡಿದೆ. ಈ ಹಿಂದೆ ಇವರು ಬರೆದಿರುವ ಲೇಖನವನ್ನು ಮೆಚ್ಚಿ ಅಂದಿನ ಶಿಕ್ಷಣ ಸಚಿವರಾಗಿದ್ದ ಶ್ರೀ ಸುರೇಶ್ ಕುಮಾರ್‌ರವರು ಇವರಿಗೆ ದೂರವಾಣಿ ಕರೆ ಮಾಡಿ ಅಂಭಿನಂದಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಇದರ ಜೊತೆ ರಾಷ್ಡಿçÃಯ ಮಟ್ಟದಲ್ಲಿ ಶೈಕ್ಷಣಿಕ ಆಡಳಿತ ಸುಧಾರಣೆಗೆ ಭಾರತೀಯ ಶಿಕ್ಷಣ ಸೇವೆ (ಐಇಎಸ್) ಯನ್ನು ಆರಂಭಿಸಬೇಕು ಮತ್ತು ಈ ಪರೀಕ್ಷೆಯನ್ನು ನಡೆಸುವ ನಿಯಮಗಳ ಬಗ್ಗೆ ಇವರು ಸಿದ್ದಪಡಿಸಿದ ಪ್ರಸ್ತಾವನೆಗೆ ಪ್ರಧಾನ ಮಂತ್ರಿಗಳಿAದ ಸ್ಪಂದನೆ ಕೂಡ ದೊರೆತಿರುವುದು ಇವರ ಶೈಕ್ಷಣಿಕ ಚಿಂತನೆಗೆ ಸಾಕ್ಷಿಯಾಗಿದೆ. ಇವರು ರಾಷ್ಟಿçÃಯ ಮತ್ತು ಅಂತರಾಷ್ಷೀಯ ಸಮ್ಮೆಳನಗಳಲ್ಲಿ ಕೂಡ ತಮ್ಮ ಸಂಶೋಧನಾ ಲೇಖನಗಳನ್ನು ಮಂಡಿಸಿರುತ್ತಾರೆ.
ಕೆಲವು ಪದವಿ ಮಟ್ಟದ ಪಠ್ಯಪುಸ್ತಕಗಳಿಗೆ ಪಾಠಗಳನ್ನು ಬರೆದಿರುವ ಅನುಭವ ಇವರಿಗಿದೆ. ಕುವೆಂಪು ವಿಶ್ವವಿದ್ಯಾನಿಲಂಯದಿಂದ ಎಂ.ಎ ಅರ್ಥಶಾಸ್ತçದಲ್ಲಿ ಎಳನೆಯ ರ‍್ಯಾಂಕ್ ಗಳಿಸಿರುವ ಇವರು ಅಳಗಪ್ಪ ವಿಶ್ವವಿದ್ಯಾನಿಲಯಿಂದ ಎಂ.ಎ (ಇಂಗ್ಲೀಷ್), ಕುವೆಂಪು ವಿಶ್ವವಿದ್ಯಾನಿಲಯಿಂದ ಎಂ.ಎ (ಇತಿಹಾಸ), ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಿಂದ ಎಂ.ಇಡಿ (ಶಿಕ್ಷಣ)ಮತ್ತು ಮೈಸ್ ನಿಂದ ಡಿ.ಸಿ.ಎ ಪದವಿಗಳನ್ನು ಪಡೆದಿರುತ್ತಾರೆ. ಇವರು ರಂಗಭೂಮಿ ಕಲಾವಿದರಾಗಿ, ಹಲವಾರು ರಂಗಪ್ರದರ್ಶನಗಳಲ್ಲಿ ಸಹ ಹೆಸರು ಮಾಡಿದ್ದಾರೆ. ವಿವಿಧ ಶಿಕ್ಷಕ ಸಂಘಟನೆಗಳ ಮೂಲಕ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ದಿಲೀಪ್ ಕುಮಾರ್‌ರವರ ಶಿಕ್ಷಣ, ಸಂಘಟನೆ ಹಾಗೂ ಸಮಾಜ ಸೇವೆೆಯನ್ನು ಪರಿಗಣಿಸಿ ಭಾನುವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ನ ಅಕ್ಕಮಹಾದೇವಿ ವೇದಿಕೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ.ಎಚ್. ರಾಮೇಗೌಡ್ರರು, ಶೈಕ್ಷಣಿಕ ವಿಭಾಗದ ರಾಜ್ಯಾಧ್ಯಕ್ಷ ಸುರೇಂದ್ರ ನಾಡ ಮತ್ತು ಶೈಕ್ಷಣಿಕ ವಿಭಾಗದ ಕಾರ್ಯದರ್ಶಿ ಡಾ.ಮಲಕಪ್ಪ ಮಹೇಶ್ ಇವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇವರು ಪತ್ನಿ ವೆಂಕಟಮ್ಮರವರು ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಿಯಾಗಿ ಸೇವೆ ಸಲ್ಲಿಸುತ್ತಿದ್ದು ೨೦೧೨ನೇ ಸಾಲಿನ ಕೆ.ಇ.ಎಸ್ ಅಧಿಕಾರಿಯಾಗಿರುತ್ತಾರೆ.
ಚಂದನ್ ಕುಮಾರ್ ಎಸ್ ಮತ್ತು ಸಿದ್ದಾರ್ಥ್ ಎಸ್ ಎಂಬ ಮಕ್ಕಳಿದ್ದಾರೆ. ರಾಜ್ಯ ಮತ್ತು ಜಿಲ್ಲೆಯ ಹಲವು ಸಂಘ, ಸಂಸ್ಥೆಗಳೂ ಸೇರಿದಂತೆ ಶಿಕ್ಷಕರು, ಸಂಘಟನೆಗಳು ಇವರನ್ನು ಅಭಿನಂದಿಸಿವೆ.
ಇದನ್ನೂ ಓದಿ: 2nd PUC Result: ದ್ವಿತೀಯ ‘PUC’ ಪೂರಕ ಪರೀಕ್ಷೆ-2 ಫಲಿತಾಂಶ ಇಂದು ಪ್ರಕಟ; ಈ ರೀತಿ ನಿಮ್ಮ ರಿಸಲ್ಟ್ ಚೆಕ್ ಮಾಡಿ!!!