Home Karnataka State Politics Updates JDS Party: BJP ಜೊತೆ ಮೈತ್ರಿ ಬೆನ್ನಲ್ಲೇ JDS ಹೆಸರು ಬದಲಾವಣೆ ?! ಏನಿದು ಹೊಸ...

JDS Party: BJP ಜೊತೆ ಮೈತ್ರಿ ಬೆನ್ನಲ್ಲೇ JDS ಹೆಸರು ಬದಲಾವಣೆ ?! ಏನಿದು ಹೊಸ ಸಮಾಚಾರ ?!

Hindu neighbor gifts plot of land

Hindu neighbour gifts land to Muslim journalist

JDS Party: ರಾಜ್ಯ ರಾಜಕೀಯದಲ್ಲಿ ಬಿಜೆಪಿ(BJP) ಹಾಗೂ ಜೆಡಿಎಸ್(JDS party) ಪಕ್ಷಗಳು ಭಾರೀ ಸದ್ಧುಮಾಡುತ್ತಿವೆ. ಸದಾ ಕಚ್ಚಾಡುತ್ತಿದ್ದ ಎರಡೂ ಪಕ್ಷಗಳು ಇದೀಗ ಬಾಯಿ, ಬಾಯಿ ಎನ್ನುತ್ತಾ ಮೈತ್ರಿ ಮಾಡಿಕೊಂಡು ಲೋಕ ಸಮರದಲ್ಲಿ ಸೆಣೆಸಲು ಅಣಿಯಾಗಿವೆ. ಆದರೆ ಈ ನಡುವೆ ಬಿಜೆಪಿ ಜೊತೆ ಮೈತ್ರಿ ಹಿನ್ನೆಲೆಯಲ್ಲಿ JDS ಪಕ್ಷದ ಹೆಸರಿನಲ್ಲಿ ಬದಲಾವಣೆ ಆಗಿದ್ದು ಈ ಕುರಿತು ಹೊಸ ಸುದ್ದಿಯೊಂದು ಸದ್ಧುಮಾಡುತ್ತಿದೆ.

ಲೋಕಸಭಾ ಚುನಾವಣೆಗೆ(Parliament election) ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವ ಕುರಿತು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಹಾಗೂ ಜೆಡಿಎಸ್ ವರಿಷ್ಠರು ಅಧಿಕೃತ ಘೋಷಣೆ ಮಾಡಿದ್ದಾರೆ. ಕೆಲವು ಬಿಜೆಪಿ ನಾಯಕರು ಇನ್ನೂ ಮಾತುಕತೆ ನಡೆಯುತ್ತಿದೆ ಅನ್ನುತ್ತಿದ್ದಾರೆ. ಆದರೆ ಸದ್ಯದ ಮಟ್ಟಿಗೆ ಈ ಎರಡೂ ಪಕ್ಷಗಳ ಮೈತ್ರಿ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ಆದರೀಗ ಈ ನಡುವೆ ಜೆಡಿಎಸ್‌ ವಿರುದ್ದ ರಾಜ್ಯ ಕಾಂಗ್ರೆಸ್‌ ಕಿಡಿಕಾರಿದ್ದು, ಹೊಸ ಹೆಸರು ನಾಮಕರಣ ಮಾಡಿದೆ.

ಹೌದು, ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌, ಚುನಾವಣೆಯಲ್ಲಿ ಸೋತರೆ ಪಕ್ಷ ವಿಸರ್ಜಿಸುತ್ತೇನೆ ಎಂದಿದ್ದರು, ಆದರೆ ಈಗ “ಜಾತ್ಯಾತೀತತೆ”ಯನ್ನು ವಿಸರ್ಜಿಸಲು ಹೊರಟಿದ್ದಾರೆ.
ಜನತಾ ದಳ ಎಂಬ ಹೆಸರನ್ನು “ಕಮಲ ದಳ” ಎಂದು ಬದಲಿಸಿಕೊಂಡರೆ ಒಳಿತು ಎಂದು ಕಾಂಗ್ರೆಸ್‌ ಸಲಹೆ ನೀಡಿದೆ. ಇತ್ತ ರಾಜ್ಯ ಬಿಜೆಪಿಯು ಜೆಡಿಎಸ್ ಪಕ್ಷವನ್ನು ಫ್ಯಾಮಿಲಿ ಪಾರ್ಟಿ ಟೀಕಿಸುತ್ತಿತ್ತು, ಈಗ ಅದೇ ಫ್ಯಾಮಿಲಿಗೆ ನಾಲ್ಕು ಸೀಟು ಬಿಟ್ಟು ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡು ಅಲ್ಲವೇ ಎಂದು ವಿರುದ್ದ ತೀವ್ರ ವಾಗ್ದಾಳಿ ನಡೆಸಿದೆ.

ಅಲ್ಲದೆ ಬಿಜೆಪಿ ಜೆಡಿಎಸ್‌ ಮೈತ್ರಿ ಹೇಗಿದೆ ಎಂದರೆ ನಡು ನೀರಲ್ಲಿ ಮುಳಗುತ್ತಿರುವ ಇಬ್ಬರು ಒಬ್ಬರನ್ನೊಬ್ಬರು ಕೈ ಹಿಡಿದು ಆಸರೆ ಪಡೆಯುವಂತಿದೆ. ಪರಸ್ಪರ ಕೈ ಹಿಡಿದು ಇಬ್ಬರೂ ಮುಳುಗಿ ತಳ ಸೇರುವುದು ಖಂಡಿತ. ಮುಳುಗುವವರು ಹುಲ್ಲು ಕಡ್ಡಿಯ ಆಸರೆಯನ್ನಾದರೂ ಪಡೆಯಬೇಕು, ಅದು ಬಿಟ್ಟು ಮತ್ತೊಬ್ಬ ಮುಳುಗುತ್ತಿರುವವರ ಆಸರೆ ಪಡೆದರೆ ಬದುಕಲು ಸಾಧ್ಯವೇ?!’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: Prajwal Revanna: ಸಂಸದ ಸ್ಥಾನ ರದ್ಧು ಬಳಿಕವೂ ಪ್ರಜ್ವಲ್ ರೇವಣ್ಣನಿಗೆ ಮತ್ತೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್ !! ಅರೆ.. ಮತ್ತೆ ಗೌಡರ ಮೊಮ್ಮಗ ಮಾಡಿದ್ದೇನು?