KSRTC: ಫ್ರೀ ಬಸ್ಸಲ್ಲಿ ಪ್ರಯಾಣಿಸೋ ಮಹಿಳೆಯರು, ಪುರುಷರೆಲ್ಲರಿಗೂ ಭರ್ಜರಿ ಗುಡ್ ನ್ಯೂಸ್ – ರಾತ್ರೋ ರಾತ್ರಿ ಸರ್ಕಾರದಿಂದ ಹೊಸ ನಿರ್ಧಾರ ಪ್ರಕಟ

Karnataka news KSRTC provided 1200 extra buses for gowri Ganesh festival

KSRTC Buses: ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವಂತ ನೂತನ ಕಾಂಗ್ರೆಸ್ ಸರ್ಕಾರ(Congress government) ಜನಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದು, ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಅವರಿಗೆ ಒಂದೊಂದು ಸೌಲಭ್ಯಗಳನ್ನು ಕಲ್ಪಿಸುತ್ತಾ ಅವರೆಲ್ಲರ ಭಾವನೆಗಳಿಗೆ, ಅವರೆಲ್ಲರ ಆಸೆಗಳಿಗೆ ಸ್ಪಂದಿಸುತ್ತಿದೆ. ನುಡಿದಂತೆ ನಡೆಯುತ್ತಿರು ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತಾನು ಭರವಸೆ ನೀಡಿದಂತೆ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ಬಡ-ಬಗ್ಗರಿಗೆ ನೆರವಾಗಿದೆ. ಅಂತೆಯೇ ಸದ್ಯದಲ್ಲೇ ನಾಡಿನ ಜನ ಸಂಭ್ರಮಿಸೋ ಗೌರಿ – ಗಣೇಶ ಹಬ್ಬ ಬರಲಿದ್ದು, ಹಬ್ಬದ ಸಂಭ್ರಮಕ್ಕೆ ಸರ್ಕಾರ ಜನರಿಗೆ ಎಲ್ಲಾ ರೀತಿಯ ಸೌಲಭ್ಯ ರೀತಿಯಿಂದಲೂ ಸಹಕಾರಿಯಾಗುತ್ತಿದೆ.

ಹೆಚ್ಚಿನ ಜನರು ಬದುಕನ್ನು ಅರಸಿ ಬೆಂಗಳೂರಿನಂತಹ ಮಹಾನಗರಗಳಿಗೆ ಬಂದಿರುತ್ತಾರೆ. ಆದರೆ ಇದೀಗ ಹಬ್ಬದ ದಿನ ತಮ್ಮ ಮನೆಯಲ್ಲಿ ಗಣೇಶನನ್ನು ಕೂರಿಸಿ, ಗೌರಿಯನ್ನು ಪ್ರತಿಷ್ಠಾಪಿಸಿ ಮನೆಮಂದಿಯೊಂದಿಗೆ ಗೌರಿ ಗಣೇಶ(Gouri ganesh festival) ಹಬ್ಬವನ್ನು ಆಚರಿಸಲು ಉತ್ಸುಕರಾಗಿರುತ್ತಾರೆ. ಹೀಗಾಗಿ ಜನರು ತಮ್ಮ ಊರಿನತ್ತ ಪ್ರಯಾಣ ಬೆಳೆಸುತ್ತಾರೆಹ ಎಲ್ಲರೂ ಹೀಗೆ ಒಮ್ಮೆಲೆ ಪ್ರಯಾಣ ಬೆಳೆಸುವುದರಿಂದ ಬಸ್ ಗಳು ತುಂಬಾ ರಶ್ ಆಗಬಹುದು. ಅಲ್ಲದೆ ಸರ್ಕಾರದ ಶಕ್ತಿ ಯೋಜನೆ ಎಫೆಕ್ಟ್ ನಿಂದ ಮಹಿಳೆಯರೆಲ್ಲರೂ ಸರ್ಕಾರಿ ಬಸ್ ಮೂಲಕವೇ ತಮ್ಮ ಊರಿನಡೆಗೆ ಪ್ರಯಾಣ ಬೆಳೆಸುತ್ತಾರೆ. ಆದ್ದರಿಂದ ಎಲ್ಲಾ ಸರ್ಕಾರಿ ಬಸ್ ಗಳು( KSRTC buses) ತುಂಬಿ ತುಳುಕಬಹುದು. ಇದರಿಂದ ದೂರದ ಊರುಗಳ ಪ್ರಯಾಣಿಕರಿಗೆ ಭಾರೀ ಸಮಸ್ಯೆ ಆಗುತ್ತದೆ. ಇದಕ್ಕಾಗಿ ರಾಜ್ಯ ಸರ್ಕಾರವು ಗೌರಿ ಗಣೇಶ ಹಬ್ಬ ಆಚರಿಸಲು ತಮ್ಮ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಲಿರೋ ಎಲ್ಲಾ ಮಹಿಳೆ ಹಾಗೂ ಪುರುಷರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.

ಹೌದು, ಈ ಸಲದ ಗೌರಿ ಗಣೇಶ ಹಬ್ಬ ವಾರಾಂತ್ಯ ಮುಗಿದ ದಿನ ಆರಂಭವಾಗಲಿದೆ. ಅಂದರೆ ಸೋಮವಾರ ಹಾಗೂ ಮಂಗಳವಾರ. ಅಲ್ಲದೆ ಶನಿವಾರ ಭಾನುವಾರ ರಜೆ ಇರವುದರಿಂದ ಬೆಂಗಳೂರಿನಿಂದ ಹೆಚ್ಚಿನವರೂ ತಮ್ಮ ಊರುಗಳಿಗೆ ತೆರ ಸಹಜವಾಗಿ ಬಸ್ ರಶ್ ಆಗುತ್ತದೆ. ಇದಕ್ಕಾಗಿ ರಾಜ್ಯದಲ್ಲಿ ವಾರಾಂತ್ಯದ ದಿನಗಳು ಹಾಗೂ ಸೆ.18ರ ಗೌರಿ ಗಣೇಶ ಹಬ್ಬದ ಪ್ರಯುಕ್ತವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್‌ಟಿಸಿ) ಬರೋಬ್ಬರಿ 1,200 ಹೆಚ್ಚುವರಿ ವಿಶೇಷ ಬಸ್‌ಗಳನ್ನು ಸಂಚಾರ ಬಿಡುವ ಮೂಲಕ ಪ್ರಯಾಣಿಕರು ನೆಮ್ಮದಿಯಿಂದ ಪ್ರಯಾಣಿಸುವಂತೆ ಅನುಕೂಲ ಮಾಡಿಕೊಟ್ಟಿದೆ.

ಅಂದಹಾಗೆ ಈ ಕುರಿತು ಪ್ರಕಟಣೆ ಹೊರಡಿಸಿರುವ KSRT ನಿಗಮವು ‘ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಬರಲು ಸೆ.18ರಂದು ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು ಎಂದು ತಿಳಿಸಿದೆ. ಹೀಗಾಗಿ ವಾರಾಂತ್ಯ ದಿನಗಳಾದ ಸೆ.15 ಮತ್ತು ಸೆ.16 ಹಾಗೂ ಸೆ.18ರ ಗೌರಿ ಗಣೇಶ ಹಬ್ಬದ ಪ್ರಯುಕ್ತ ಕರಾರಸಾ ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸೆ.15 ರಿಂದ ಸೆ.17ರವರೆಗೆ ಬೆಂಗಳೂರಿನಿಂದ ಕೆಳಕಂಡ ಸ್ಥಳಗಳಿಗೆ 1,200 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ.

ಬೆಂಗಳೂರಿನಿಂದ ಯಾವೆಲ್ಲ ಊರಿಗೆ ಹೆಚ್ಚುವರಿ ಬಸ್‌ ವ್ಯವಸ್ಥೆ ಇದೆ? ಇಲ್ಲಿದೆ ಡೀಟೇಲ್ಸ್-
• ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ಹೆಚ್ಚುವರಿಯಾಗಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.
• ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ವಿಶೇಷ ಬಸ್ ಗಳು ತೆರಳುತ್ತವೆ.
• ತಮಿಳುನಾಡು ಮತ್ತು ಕೇರಳ ಕಡೆಗೆ ಅಂದರೆ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಕ್ಯಾಲಿಕಟ್ ಮುಂತಾದ ಸ್ಥಳಗಳಿಗೆ ಹೋಗುವ ಪ್ರತಿಷ್ಠಿತ ಸಾರಿಗೆ ಬಸ್ ಗಳು ಶಾಂತಿನಗರದಲ್ಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಹೊರಡಲಿವೆ.

ಬುಕ್ಕಿಂಗ್ ಸೌಲಭ್ಯಗಳು:
• ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
• ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಲಾಗಿರುವ ಟಿಕೇಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್‍ಅಪ್ ಪಾಯಿಂಟ್‍ನ ಹೆಸರನ್ನು ಗಮನಿಸುವಂತೆ ಕೋರಲಾಗಿದೆ.
• ಇ-ಟಿಕೇಟ್ ಬುಕಿಂಗ್‍ನ್ನು www.ksrtc.karnataka.gov.in ವೆಬ್ ಸೈಟ್ ಮುಖಾಂತರ ಮಾಡಬಹುದಾಗಿದೆ.
• ಸಾರ್ವಜನಿಕ ಪ್ರಯಾಣಿಕರು ಕರ್ನಾಟಕ ಹಾಗೂ ಅಂತರರಾಜ್ಯದಲ್ಲಿ ಇರುವ 691 ಗಣಕೀಕೃತ ಬುಕಿಂಗ್ ಕೌಂಟರ್‍ಗಳ ಮೂಲಕ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದಾಗಿದೆ.
• ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೇಟು ಕಾಯ್ದಿರಿಸಿದಲ್ಲಿ ಶೇಕಡ 5 ರಷ್ಟು ರಿಯಾಯಿತಿ ನೀಡಲಾಗುವುದು. ಜೊತೆಗೆ ಹೋಗುವ & ಬರುವ ಪ್ರಯಾಣದ ಟಿಕೇಟ್‍ನ್ನು ಒಟ್ಟಿಗೆ ಕಾಯ್ದಿರಿಸಿದಾಗ ವಾಪಸ್‌ ಬರುವ ಪ್ರಯಾಣ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುವುದು.
• ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೆರಿಯಲ್ಲಿ ಇರುವ ಪ್ರಮುಖ ನಗರಗಳಲ್ಲಿ ನಿಗಮದ ಮುಂಗಡ ಆಸನಗಳನ್ನು ಕಾಯ್ದಿರಿಸುವ ಕೌಂಟರ್‍ಗಳು ಇದ್ದು, ಇವುಗಳ ಮೂಲಕ ಸಹ ಮುಂಗಡವಾಗಿ ಆಸನಗಳನ್ನು ನಿಗಮದ ಸಾರಿಗೆಗಳಿಗೆ ಕಾಯ್ದಿರಿಸಬಹುದಾಗಿದೆ.

ಇದನ್ನೂ ಓದಿ: B S Yediyurappa: BJP-JDS ಮೈತ್ರಿ ಬಗ್ಗೆ ಏಕಾಏಕಿ ಯೂಟರ್ನ್ ಹೊಡೆದ ಯಡಿಯೂರಪ್ಪ !! ಮೈತ್ರಿ ಅಧಿಕೃತ ಘೋಷಣೆ ಮಾಡಿದ BSY ಈಗ ಹೀಗೆ ಹೇಳಿದ್ಯಾಕೆ ??

Leave A Reply

Your email address will not be published.