KSET-2023: ಕೆಇಎಯಿಂದ ಮಹತ್ವದ ಅಧಿಸೂಚನೆ ಬಿಡುಗಡೆ! ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2023 ದಿನಾಂಕ ಪ್ರಕಟ!!!

KSET-2023 exam date revealed here is the full detail latest news

ಕೆಸೆಟ್‌ (KSET-2023) ಪರೀಕ್ಷೆಗೆಯ ಕುರಿತು ಅಭ್ಯರ್ಥಗಳಿಗೆ ಗುಡ್‌ನ್ಯೂಸ್‌ವೊಂದು ದೊರಕಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚನೆ ಪ್ರಕಟಮಾಡಿದ್ದು, ನವೆಂಬರ್‌ 26ರಂದು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2023 ನಡೆಸುವುದಾಗಿ ಪ್ರಕಟನೆ ಮಾಡಲಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಪರೀಕ್ಷೆ ವಿವರ ಈ ರೀತಿ ಇದೆ
ಮೊದಲ ಪತ್ರಿಕೆ-I: ಸಾಮಾನ್ಯ ಪತ್ರಿಕೆಯು ಬೋಧನೆ ಮತ್ತು ಬುದ್ಧಿ ಸಾಮರ್ಥ್ಯ
ಎರಡನೇ ಪತ್ರಿಕೆ-II: ವಿಷಯ ಪತ್ರಿಕೆ

ಪ್ರಮುಖ ದಿನಾಂಕಗಳು
ಆನ್ ಲೈನ್ ಮೂಲಕ ಪರೀಕ್ಷೆಗೆ ಅರ್ಜಿ ಸಲ್ಲಿಕೆ ದಿನಾಂಕ 11-09-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್​​ 30

ಪರೀಕ್ಷಾ ಶುಲ್ಕ: ಸಾಮಾನ್ಯ ವರ್ಗ, ಪ್ರವರ್ಗ-2ಎ, 2ಬಿ, 3ಎ, 3ಬಿ ಅವರಿಗೆ 1000 ಸಾವಿರ ರೂ.
ಪ್ರವರ್ಗ-1, ಎಸ್ಸಿ, ಎಸ್ಟಿ, ಪಿಡಬ್ಲೂಡಿ, ಲಿಂಗ ಅಲ್ಪಸಂಖ್ಯಾತರಿಗೆ 700 ರೂ. ಶುಲ್ಕ ನಿಗದಿ ಮಾಡಲಾಗಿದೆ.
ಇ-ಪೋಸ್ಟ್ ಆಫೀಸ್​ನಲ್ಲಿ ಶುಲ್ಕ ಪಾವತಿಸಲು 03- 10-2023 ಕೊನೆಯ ದಿನವಾಗಿದೆ. ಅಲ್ಲದೇ ಕೇವಲ ಗಣಕೀಕೃತ ಅಂಚೆ ಕಚೇರಿಯ ಶಾಖೆಗಳಲ್ಲಿ ಮಾತ್ರ ಅರ್ಜಿ ಶುಲ್ಕ ಪಾವತಿಸುವಂತೆ ತಿಳಿಸಿದೆ.

ಅರ್ಹ ಅಭ್ಯರ್ಥಿಗಳು https://kea.kar.nic.in ಜಾಲತಾಣಕ್ಕೆ ಭೇಟಿ ನೀಡಿ.

Leave A Reply

Your email address will not be published.