Electricity Bill: 5 ಸಾವಿರ ಬರುತ್ತಿದ್ದ ಕರೆಂಟ್ ಬಿಲ್ ಈಗ 10 ಲಕ್ಷವಂತೆ! ಬೆರಗಾದ ಗ್ರಾಹಕನಿಂದ ಸರ್ಕಾರಕ್ಕೆ ವಿಚಿತ್ರ ಪ್ರಶ್ನೆ

Chikkamagaluru news man got 10 lakh rupees electricity bill man against mescom in Chikkamagaluru

Share the Article

Electricity Bill: ಮೆಸ್ಕಾಂ ಅಧಿಕಾರಿಗಳ ಎಡವಟ್ಟಿಗೆ ಗ್ರಾಹಕ ಕಂಗಾಲಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದೆ. ಹೌದು, ಕಡೂರು ಪಟ್ಟಣದ ಉಳುಕಿನಕಲ್ಲು ಸಮೀಪದ ಡಾಗಾ ಕಾಂಪ್ಲೆಕ್ಸ್​ನಲ್ಲಿನ ಮೋಹಿತ್ ಏಜೆನ್ಸಿಗೆ ಆಗಸ್ಟ್ ತಿಂಗಳ ವಿದ್ಯುತ್ ಬಿಲ್ ( Electricity Bill) 10,26,054 ರೂಪಾಯಿ ಬಂದಿದೆ.

ಕಡೂರು ಪಟ್ಟಣದ ಮೋಹಿತ್ ಎಂಬುವವರಿಗೆ ಪ್ರತಿ ತಿಂಗಳು 5 ಸಾವಿರದವರೆಗೆ ವಿದ್ಯುತ್ ಬಿಲ್ ಬರುತ್ತಿತ್ತು(Electricity Bill). ಆದರೆ ಈ ಬಾರಿಯ ಆಗಸ್ಟ್ ತಿಂಗಳ ಬಿಲ್ ಬರೋಬ್ಬರಿ 10 ಲಕ್ಷ ಬಂದಿದೆ. ವಿದ್ಯುತ್ ಬಿಲ್ ನೋಡಿ ಮೋಹಿತ್ ಶಾಕ್ ಆಗಿದ್ದು, ಸದ್ಯ ಈ ಬಗ್ಗೆ ಮೆಸ್ಕಾಂ(Mescom) ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.

ಮಾಹಿತಿ ಪ್ರಕಾರ, ಪ್ರತಿ ತಿಂಗಳು ವಿದ್ಯುತ್ ಬಿಲ್ ಅಂದಾಜು 4,000 ಸಾವಿರದಿಂದ 4,500 ರೂಗಳು ಮಾತ್ರ ಬರುತ್ತಿತ್ತು. ಆಗಸ್ಟ್ ತಿಂಗಳ ಬಿಲ್ ಏಕಾಏಕಿ 10 ಲಕ್ಷ ಬಂದಿದೆ. ಬಿಲ್ ಅವಧಿ 1/8/2023 ರಿಂದ 1/9/23ರವರೆಗೆ ಎಂದು ನಮೂದಿಸಲಾಗಿದೆ.

ಬಿಲ್ ನಂ.259 ಆಗಿದ್ದು 8,35,737 ಬಿಲ್ ಎಫ್‍ಪಿಪಿಎಸಿ (1.16) ಟ್ಯಾಕ್ಸ್ 0.9% (75,216.33 ರೂಗಳು) ಒಟ್ಟು 10,260,54 ರೂ ಬಿಲ್ ಅನ್ನು ನೀಡಲಾಗಿದೆ. ಈ ಹಿಂದೆ ವಿದ್ಯುತ್ ಬಿಲ್ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತಾ ಬಂದಿದ್ದೇವೆ. ಯಾವ ತಿಂಗಳು ಕೂಡ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿಲ್ಲ. ಆದರೆ, ಈ ತಿಂಗಳು 10 ಲಕ್ಷ ಬಿಲ್ ನೋಡಿ ಕಡೂರು ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.

ಸದ್ಯ ಮೆಸ್ಕಾಂ ಅಧಿಕಾರಿಗಳು ಈ ಸಮಸ್ಯೆ ಸರಿ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ಮೆಸ್ಕಾಂ ಸಿಬ್ಬಂದಿ ಹೇಳಿ 4 ದಿನವಾದರೂ ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಅಂಗಡಿ ಮಾಲೀಕ ಡಾಗಾ ಮೆಸ್ಕಾಂ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅದಲ್ಲದೆ ಇದಕ್ಕೆ ಗೃಹಜ್ಯೋತಿ ಯೋಜನೆಯ ಕುಮ್ಮಕ್ಕು ಇದೆಯಾ ಎಂದು ಪ್ರಶ್ನೆ ಮಾಡಿದ್ದಾನೆ.

ಇದನ್ನೂ ಓದಿ: ಮೆಡಿಕಲ್’ಗಳಲ್ಲಿ ಮೆಡಿಸಿನ್ ಕೊಳ್ಳುವವರೇ ಎಚ್ಚರ !! ಈ ಎರಡು ಔಷಧಿಗಳ ಮಾರಾಟದಲ್ಲಿ ನಡೆಯುತ್ತಿದೆ ಭಾರೀ ಗೋಲ್ ಮಾಲ್

Leave A Reply