Home News Prerana Baby Shower: ಧ್ರುವ ಸರ್ಜಾ ಪತ್ನಿ ಪ್ರೇರಣಾ ಸೀಮಂತ ಎಲ್ಲಿ ಮಾಡಿದ್ರೂ ಗೊತ್ತಾ?!...

Prerana Baby Shower: ಧ್ರುವ ಸರ್ಜಾ ಪತ್ನಿ ಪ್ರೇರಣಾ ಸೀಮಂತ ಎಲ್ಲಿ ಮಾಡಿದ್ರೂ ಗೊತ್ತಾ?! ವೀಡಿಯೋ ವೈರಲ್

Prerana Baby Shower

Hindu neighbor gifts plot of land

Hindu neighbour gifts land to Muslim journalist

Prerana Baby Shower: ಸ್ಯಾಂಡಲ್ವುಡ್ ಖ್ಯಾತ ನಟ ಧ್ರುವ ಸರ್ಜಾ (Dhruva Sarja) ಅವರ ಮನೆಯಲ್ಲಿ ಖುಷಿಯ ವಾತಾವರಣ ನಿರ್ಮಾಣವಾಗಿದೆ. ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ತುಂಬು ಗರ್ಭಿಣಿಯಾಗಿದ್ದು, ಧ್ರುವ ಸರ್ಜಾ ಮತ್ತು ಪ್ರೇರಣಾ (Prerana) ಅವರು ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

Prerana Baby Shower

Prerana Baby Shower

ಅಣ್ಣನ ಸಮಾಧಿ ಬಳಿ ಪತ್ನಿಗೆ ಸೀಮಂತ ಶಾಸ್ತ್ರ ಮಾಡಿದ ಧ್ರುವ ಸರ್ಜಾ ಮನೆಯಲ್ಲಿ ಸಂಭ್ರಮದ ವಾತಾವರಣ ಕಳೆ ಕಟ್ಟಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಇರುವ ಫಾರ್ಮ್‌ ಹೌಸ್‌ನಲ್ಲಿ ಸೀಮಂತ ಶಾಸ್ತ್ರ ಮಾಡಿದ್ದಾರೆ. ಹೀಗಾಗಿ, ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ತಮ್ಮ ಪಾಲಿಗೆ ತುಂಬ ಸ್ಪೆಷಲ್ ಎಂದು ಧ್ರುವ ಸರ್ಜಾ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Prerana Baby Shower

Prerana Baby Shower

ಚಿರಂಜೀವಿ ಅವರ ಸಮಾಧಿ ಇರುವ ಫಾರ್ಮ್ ಹೌಸ್ನಲ್ಲೇ ಸೀಮಂತ ಕಾರ್ಯ ನಡೆದಿದ್ದು, ಧ್ರುವ ಸರ್ಜಾ ಪತ್ನಿ ಪ್ರೇರಣಾ ಅವರ ಸೀಮಂತ ಶಾಸ್ತ್ರ (Prerana Baby Shower) ದಲ್ಲಿ ಕುಟುಂಬದವರು ಹಾಗೂ ಆಪ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಶುಭ ಗಳಿಗೆಯ ವಿಡಿಯೋವನ್ನು ಧ್ರುವ ಸರ್ಜಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಜೋಡಿಗೆ ಶುಭ ಕೋರಿದ್ದಾರೆ.

Prerana Baby Shower

 

ಇದನ್ನೂ ಓದಿ : Job Openings: ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಅತಿಥಿ ಶಿಕ್ಷಕರ ನೇಮಕ! 2618 ಖಾಲಿ ಹುದ್ದೆ-