Fake News: ಸ್ನಾನ ಮಾಡುವಾಗ ಇನ್ನು ‘ಹಸ್ತಮೈಥುನ’ ಮಾಡುವ ಹಾಗಿಲ್ಲ – ಹುಡುಗರ ತಲೆ ಕೆಡಿಸಿದ ಹಳೆ ನೋಟಿಸ್ !! ಏನಿದು ಶಾಕಿಂಗ್ ನ್ಯೂಸ್
Viral news Fake notice prohibiting IIT Roorkee students from masturbating in shower goes viral
Fake News: ದಿನಂಪ್ರತಿ ಅದೆಷ್ಟೋ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ(Social Media)ಹರಿದಾಡುತ್ತಿರುತ್ತದೆ. ಅವುಗಳಲ್ಲಿ ಕೆಲವು ವಿಚಾರಗಳು ಜನರನ್ನು ಅಚ್ಚರಿಗೆ ತಳ್ಳಿದರೆ, ಮತ್ತೆ ಕೆಲವು ಸುಳ್ಳು ಸುದ್ದಿಗಳು (Fake News)ವೈರಲ್ ಆಗಿ ಜನರ ತಲೆಗೆ ಹುಳ ಬಿಟ್ಟಂತೆ ಆಗುತ್ತದೆ. ಇದೀಗ, ಯುವಕರ ತಲೆ ಕೆಡಿಸುವ ಸುದ್ದಿಯೊಂದು ವೈರಲ್ ಆಗಿದೆ. ಇದರ ಅಸಲಿಯತ್ತೇನು ಎಂದು ತಿಳಿಯಲು ಯುವಜನತೆ ಮುಂದಾಗಿದ್ದಾರೆ. ಸ್ನಾನ ಮಾಡುವಾಗ ಇನ್ನು ‘ಹಸ್ತಮೈಥುನ’ ಮಾಡುವ ಹಾಗಿಲ್ಲ ಎಂಬ ಹಳೆ ನೋಟಿಸ್ ಹುಡುಗರನ್ನು ಗೊಂದಲಕ್ಕೀಡು ಮಾಡಿದೆ.
ಐಟಿ ರೂರ್ಕಿಗೆ ಎಂಬ ವ್ಯಕ್ತಿ ಸೇರಿದೆ ಎನ್ನಲಾದ ನಕಲಿ ನೋಟಿಸ್ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿ ಜನರನ್ನು ಅಚ್ಚರಿಗೆ ನೂಕಿದೆ. 2019ನೆಯ ಇಸವಿಯ ಈ ನೋಟಿಸ್ನಲ್ಲಿ ವಿದ್ಯಾರ್ಥಿಗಳು ಶವರ್ ನಲ್ಲಿ ಹಸ್ತಮೈಥುನ ಮಾಡಿಕೊಳ್ಳುವುದನ್ನು ನಿಷೇಧ ಹೇರಲಾಗಿದೆ. ಶವರ್ ಗಳಲ್ಲಿ ಹಸ್ತ ಮೈಥುನ ಮಾಡಿಕೊಳ್ಳುವುದು ಹಾಸ್ಟೆಲ್ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ನೋಟಿಸ್ನಲ್ಲಿ ಹೇಳಲಾಗಿದೆ. ಈ ರೀತಿ ಹಸ್ತ ಮೈಥುನ ಮಾಡಿಕೊಳ್ಳುವ ಪರಿಣಾಮ ಚರಂಡಿಯಲ್ಲಿ ಹೆಚ್ಚಿನ ಪ್ರಮಾಣದ ವೀರ್ಯ ಶೇಖರಣೆಯಾಗುತ್ತಿದ್ದು, ಇವುಗಳ ನಿರ್ವಹಣೆ ಮಾಡಲು ಸಾವಿರಾರು ರೂಪಾಯಿ ಖರ್ಚು ಹಾಸ್ಟೆಲ್ ಮೇಲೆ ಬೀಳುತ್ತಿದೆ ಎಂದು ನಕಲಿ ನೋಟಿಸ್ನಲ್ಲಿ ತಿಳಿಸಲಾಗಿದ್ದು, ಇದನ್ನು ಕಂಡು ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ.
ಇದು ಸಾಲದೆಂಬಂತೆ ವಿದ್ಯಾರ್ಥಿಗಳು ಇನ್ನೂ ಮುಂದೆ ತಮ್ಮ ಕೋಣೆಯಲ್ಲಿಯೇ ಹಸ್ತಮೈಥುನ ಮಾಡಿಕೊಳ್ಳಬೇಕೆಂದು ಮೀಡಿಯಂ ಮಿಠಾಯಿ ಎಂಬ ಹೆಸರಿನ ಎಕ್ಸ್ ಖಾತೆಯು ಈ ಪೋಸ್ಟ್ ಅನ್ನು ಶೇರ್ ಮಾಡಿದೆ. ಅಷ್ಟಕ್ಕೂ ಈ ವಿಚಾರ ನಿಜವೇ ಎಂಬ ಪ್ರಶ್ನೆ ಹೆಚ್ಚಿನವರನ್ನು ಕಾಡಿದ್ದು, ಆದರೆ ಅಸಲಿಗೆ ಇದೊಂದು ನಕಲಿ ನೋಟಿಸ್ ಪ್ರತಿ ಎಂಬ ವಿಚಾರ ಬಯಲಾಗಿದೆ. ಈ ನಕಲಿ ನೋಟಿಸ್ನಲ್ಲಿ ಹಾಸ್ಟೆಲ್ ಮುಖ್ಯ ವಾರ್ಡನ್ ಅಶುತೋಷ್ ಚಮೋಲಿ ನಕಲಿ ಸಹಿ ಕಂಡುಬರುತ್ತಿದೆ. ಏನೇ ಆದರೂ ಈ ನಕಲಿ ಸುದ್ದಿ ನೆಟ್ಟಿಗರನ್ನು ಚಿಂತೆಗೀಡು ಮಾಡಿದ್ದು ಸುಳ್ಳಲ್ಲ.
ಇದನ್ನೂ ಓದಿ: Assam: ಬರೀ ‘ಇಂಡಿಯಾ’ಅಲ್ಲ, ರಾಹುಲ್ ಗಾಂಧಿ ಹೆಸರಲ್ಲೂ ಬದಲಾವಣೆ ?! ಏನಿದು ಶಾಕಿಂಗ್ ನ್ಯೂಸ್ ?