Home News Kerala: ಕುಡಿದು ದೇಗುಲದ ಗೋಡೆ ಮೇಲೆ ಮೂತ್ರ ವಿಸರ್ಜಿಸಿದ ಕಿಡಿಗೇಡಿಗಳು – ಪ್ರಶ್ನಿಸಿದ ಬಾಲಕನನ್ನೇ ಆಕ್ಸಿಡೆಂಟ್...

Kerala: ಕುಡಿದು ದೇಗುಲದ ಗೋಡೆ ಮೇಲೆ ಮೂತ್ರ ವಿಸರ್ಜಿಸಿದ ಕಿಡಿಗೇಡಿಗಳು – ಪ್ರಶ್ನಿಸಿದ ಬಾಲಕನನ್ನೇ ಆಕ್ಸಿಡೆಂಟ್ ಮಾಡಿ ಕೊಂದು ಬಿಟ್ಟರು !! ವೈರಲ್ ಆಯ್ತು ಮನಕಲುಕುವ ವಿಡಿಯೋ !

Hindu neighbor gifts plot of land

Hindu neighbour gifts land to Muslim journalist

Kerala: ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ದೇವಸ್ಥಾನದ ಗೋಡೆಯ‌ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು, ಈ ಕೃತ್ಯದ ಬಗ್ಗೆ ಬಾಲಕನೊರ್ವ ಪ್ರಶ್ನೆ ಮಾಡಿದ್ದು, ಪ್ರಶ್ನಿಸಿದ ಬಾಲಕನನ್ನೇ ಆಕ್ಸಿಡೆಂಟ್ ಮಾಡಿ ಕೊಲೆ ಮಾಡಿದ ಘಟನೆ ಕೆರಳದ (Kerala) ಪುಳಿಂಕೋಡ್ ದೇವಸ್ಥಾನದ ಬಳಿ ಸಂಜೆ 5 ಗಂಟೆಗೆ ನಡೆದಿದೆ. ಮೃತ ಬಾಲಕನನ್ನು ಅದಿಶೇಖರ್ (15) ಎಂದು ಗುರುತಿಸಲಾಗಿದೆ. ಅದಿಶೇಖರ್ ಅರುಣ್ ಕುಮಾರ್ ಹಾಗೂ ದೀಪಾ ಮಗನಾಗಿದ್ದು, ಕತ್ತಕ್ಕಡ ಚಿನ್ಮಯ ಮಿನ್ ಸ್ಕೂಲ್‌ನಲ್ಲಿ 10ನೇ ತರಗತಿ ಓದುತ್ತಿದ್ದನು.

ಸಂಬಂಧಿಕನೇ ಈತನನ್ನು ಕೊಲೆ ಮಾಡಿರುವುದು ಬಯಲಾಗಿದೆ.
ಮೃತ ಬಾಲಕ ಅದಿಶೇಖರ್ ಕೊಲೆ ಆರೋಪಿ ಪ್ರಿಯರಂಜನ್‌ ಎಂಬಾತನಾಗಿದ್ದು, ಈತ ಬಾಲಕನ ದೂರದ ಸಂಬಂಧಿಯಾಗುತ್ತಾನೆ. ಪ್ರಿಯರಂಜನ್ ಕಂಠಪೂರ್ತಿ ಕುಡಿದು ದೇವಸ್ಥಾನದ ಬಳಿ ಕುಳಿತಿದ್ದನು. ಅಲ್ಲದೆ ದೇಗುಲದ ಆವರಣದ ಗೋಡೆಗೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದನ್ನು ನೋಡಿದ ಅದಿಶೇಖರ್ ಪ್ರಶ್ನೆ ಮಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಪ್ರಿಯರಂಜನ್ ಸೇಡು ತೀರಿಸಿಕೊಳ್ಳುವ ಹೊಂಚು ಹಾಕಿದ್ದಾನೆ. ಈ ಹೊಂಚಿಗೆ ಬಾಲಕ ಬಲಿಯಾಗಿದ್ದಾನೆ.

ಹೌದು, ಅದಿಶೇಖರ್ ಸೈಕಲ್‌ನಲ್ಲಿ ಹೋಗುತ್ತಿದ್ದ ವೇಳೆ ರಸ್ತೆಬದಿಯಲ್ಲಿ ಪಾರ್ಕ್ ಮಾಡಿದ್ದ ಕಾರು ಏಕಾಏಕಿ ಸೈಕಲ್‌ಗೆ ಗುದ್ದಿದೆ. ಪರಿಣಾಮ ಬಾಲಕ ಕೆಳಗೆ ಬಿದ್ದಿದ್ದಾನೆ. ಅಪಘಾತದಲ್ಲಿ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಪೊಲೀಸರು ಆದಿಶೇಖರ್‌ನ ದೂರದ ಸಂಬಂಧಿ ಪೂವಾಚಲ ಮೂಲದ ಪ್ರಿಯರಂಜನ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಓಣಂ ರಜೆಗೆಂದು ಮನೆಗೆ ಬಂದಿದ್ದ ಪ್ರಿಯರಂಜನ್ ಬಾಲಕ ಕೊಲೆಯಾದ ಬೆನ್ನಲ್ಲೇ ನಾಪತ್ತೆಯಾಗಿರುವುದು ಪೊಲೀಸರ ಅನುಮಾನವನ್ನು ಹೆಚ್ಚಿಸಿತ್ತು.

ಸದ್ಯ ಘಟನೆ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಬಾಲಕನ ಸಂಬಂಧಿಕರ ಕಾರು ಗುದ್ದಿರುವುದಾಗಿ ತಿಳಿದುಬಂದಿದೆ. ಆರೋಪಿ ಪ್ರಿಯರಾಜನ್ ಬಾಲಕನನ್ನು ಕೊಲೆ ಮಾಡುವ ಉದ್ದೇಶದಿಂದಲೇ ಈ ಕೃತ್ಯ ಎಸಗಿರುವುದು ಬಯಲಾಗಿದೆ. ಆದರೆ, ಘಟನೆ ನಡೆದು ವಾರ ಕಳೆದರೂ ಪೊಲೀಸರು ಪ್ರಿಯರಾಜ್‌ನನ್ನು ಬಂಧಿಸಿರಲಿಲ್ಲ. ಹೀಗಾಗಿ ಆರೋಪಿಗೆ ನಿರೀಕ್ಷಣಾ ಜಾಮೀನು ಪಡೆಯಲು ಕೆಲ ಉನ್ನತ ಅಧಿಕಾರಿಗಳು ಸೌಲಭ್ಯ ಕಲ್ಪಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.