Bangluru bandh: ಬೆಂಗಳೂರು ಬಂದ್ ಎಫೆಕ್ಟ್- ಇಂತವರು ರಸ್ತೆಗೆ ಬಂದ್ರೆ ಬೀಳುತ್ತೆ ಮೊಟ್ಟೆ ಏಟು !! ಸಂಘಟನೆಗಳಿಂದ ಖಡಕ್ ಎಚ್ಚರಿಕೆ

Bengaluru news Bengaluru bandh on September 11 what's open and closed here is detail

Bengaluru bandh: ರಾಜ್ಯ ಸರ್ಕಾರ ಜಾರಿಗೊಳಿಸಿರುವಂತಹ ಶಕ್ತಿ ಯೋಜನೆ(Shakthi joyane) ಯಿಂದ ತುಂಬ ನಷ್ಟವನ್ನು ಅನುಭವಿಸಿರುವ ರಾಜ್ಯದ ಟ್ಯಾಕ್ಸಿ ಹಾಗೂ ಆಟೋ ಚಾಲಕರು ಖಾಸಗಿ ವಾಹನ ಸಂಗಟನೆಗಳ ಮೂಲಕ ನಾಳೆ (ಸೆ.11) ಬೆಂಗಳೂರಿನ ಬಂದಿಗೆ(Bengaluru bandh) ಕರೆ ನೀಡಿದ್ದಾರೆ. ಈ ವೇಳೆ ಯಲ್ಲೋ ಬೋರ್ಡ್ ಕಾರು ಚಾಲಕರಿಗೆ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.

ಹೌದು, ಫ್ರೀ ಬಸ್(Free buss) ಹಿನ್ನೆಲೆಯಲ್ಲಿ ಮಹಿಳೆಯರು ಸರ್ಕಾರಿ ಬಸ್ ಗಳನ್ನೇ ಅವಲಂಬಿಸಿದ್ದಾರೆ. ಇದರಿಂದ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಭಾರೀ ನಷ್ಟ ಆಗಿರುವುದು ಸತ್ಯ. ಹೀಗಾಗಿ ಸರ್ಕಾರದ ಶಕ್ತಿ ಯೋಜನೆ ವಿರುದ್ಧ ರೊಚ್ಚಿಗೆದ್ದು, ಸಮರ ಸಾರಿರುವ ಖಾಸಗಿ ವಾಹನ ಸಂಘಟನೆಗಳು ನಾಳೆ ಬೆಂಗಳೂರು ಬಂದ್ ಗೆ ಕರೆಕೊಟ್ಟಿದ್ದಾರೆ. ಆದರೆ ಈ ವೇಳೆ ಒಂದು ಎಚ್ಚರಿಕೆಯ ಸಂದೇಶವನ್ನೂ ರವಾನಿಸಿರುವ ಅವರು ನಾಳೆ ಯಲ್ಲೋ ಬೋರ್ಡ್ ಕಾರುಗಳೇನಾದರೂ ರಸ್ತೆಗಿಳಿದರೆ ಮೊಟ್ಟೆಯಲ್ಲಿ ಹೊಡೆಯುತ್ತೇವೆ ಎಂದು ಹೇಳಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪರ, ವಿರೋಧ ಚರ್ಚೆ ಶುರುವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕೆಲವು ಚಾಲಕರು ಬಂದ್ ಮಾಡಿದ್ರೂ ಅದನ್ನು ವಿರೋಧಿಸಿ ಯಾರಾದರೂ ಯಲ್ಲೋ ಬೋರ್ಡ್ ಅವರು ರಸ್ತೆಗಿಳಿದು ಬಾಡಿಗೆ ಹೊಡೆದರೆ, ಕದ್ದು ಮುಚ್ಟಿ ಡ್ಯುಟಿ ಮಾಡಿದ್ರೆ ತೊಂದರೆಗೆ ಒಳಗಾಗ್ತೀರಾ. ಮೊಟ್ಪೆಯ ಏಟು ಬೀಳುತ್ತೆ. ಒಂದು ವೇಳೆ ನಮ್ಮ ಮಾತು ಮೀರಿಯೂ ಬಂದರೆ ಅದರ ಪರಿಣಾಮ ನೀವು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಬಂದ್ ನ ರೂಪುರೇಷೆ ಹೇಗೆ?
• ಭಾನುವಾರ ಮಧ್ಯ ರಾತ್ರಿಯಿಂದಲೇ‌ ಸ್ತಬ್ದವಾಗಲಿದೆ ಖಾಸಗಿ ಸಾರಿಗೆ ಓಡಾಟ.
• ಸೋಮವಾರ ಮಧ್ಯರಾತ್ರಿವರೆಗೆ ಅದೇ ರೀತಿ ಪರಿಸ್ಥಿತಿ ಕಾಪಾಡುವಂತೆ ಒಕ್ಕೂಟ ಮನವಿ.
• ಏರ್ಪೋಟ್ ಟ್ಯಾಕ್ಸಿ ಸಂಪೂರ್ಣ ಸ್ಥಗಿತ ಗೊಳಿಸುವುದು.
ನಗರದೊಳಗೆ ಬೃಹತ್ ಮೆರವಣಿಗೆಗೆ ಪ್ಲ್ಯಾನ್.
• ಮೆರವಣಿಗೆ ಬಳಿಕ ಫ್ರೀಡಂ ಪಾರ್ಕ್ ನಲ್ಲಿ ಶಕ್ತಿ ಪ್ರದರ್ಶನ.
• ಪ್ರತಿಭಟನೆ, ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ಬೇರೆ ಜಿಲ್ಲೆಗಳ ಚಾಲಕರಿಗೂ ಮನವಿ

https://fb.watch/mYZSqwASEz/?mibextid=2Rb1fB

ಇದನ್ನೂ ಓದಿ: Koppa: ಕೊಪ್ಪ ಕಾಡಲ್ಲಿ ಮುಸ್ಲಿಂ ಯುವಕರ ಜೊತೆ ಹಿಂದೂ ವಿದ್ಯಾರ್ಥಿನಿ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ನೈತಿಕ ಪೋಲಿಸ್ ಗಿರಿಗೆ ಮನನೊಂದು ಕಾಲೇಜಲ್ಲೇ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

Leave A Reply

Your email address will not be published.