Koppa: ಕೊಪ್ಪ ಕಾಡಲ್ಲಿ ಮುಸ್ಲಿಂ ಯುವಕರ ಜೊತೆ ಹಿಂದೂ ವಿದ್ಯಾರ್ಥಿನಿ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ನೈತಿಕ ಪೋಲಿಸ್ ಗಿರಿಗೆ ಮನನೊಂದು ಕಾಲೇಜಲ್ಲೇ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

Chikkamagaluru news college girl from kalasa with three Muslim boys in forest near koppa case big twist

Koppa: ಚಿಕ್ಕಮಗಳೂರು ಕೊಪ್ಪ ಹಾಸ್ಟೆಲ್ ನಲ್ಲಿ ಇದ್ದು ಕಾಲೇಜು ಓದುತ್ತಿದ್ದ ಹಿಂದೂ ಹುಡುಗಿಯೊಬ್ಬಳು ಮೂವರು ಮುಸ್ಲಿಂ ಹುಡುಗರೊಂದಿಗೆ ಕೊಪ್ಪದ(Koppa) ಕಾಡಿನಲ್ಲಿ ಪತ್ತೆಯಾದ ವಿಚಾರವೊಂದು ಸಾಕಷ್ಟು ವೈರಲ್ ಆಗಿತ್ತು. ಈ ಬೆನ್ನಲ್ಲೇ ಈ ವಿಚಾರವಾಗಿ ಚಿಕ್ಕಮಗಳೂರು SP ಕೂಡ ಸ್ಪಷ್ಟೀಕರಣ ನೀಡಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದಿದ್ದರು. ಆದರೀಗ ವಿದ್ಯಾರ್ಥಿನಿ ಆತ್ಮಹತ್ಯೆಗೆ ‌ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೌದು, ಕಳೆದ ಎರಡು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಫೋಟೋ‌ ಸಹಿತ ವೈರಲ್ ಆಗುತ್ತಿರುವ ಕಳಸ ಕಾಲೇಜಿನ ಓರ್ವ ಹಿಂದು ಯುವತಿ ಹಾಗೂ ಮೂವರು ಮುಸ್ಲಿಂ ಯುವಕರು ಕೊಪ್ಪ ಕಾಡಿನಲ್ಲಿ ಸಿಕ್ಕರು. ದೆಹಲಿ ರಿಜಿಸ್ಟ್ರೇಶನ್ ಹೊಂದಿರುವ ಸ್ವಿಫ್ಟ್ ಕಾರೊಂದರಲ್ಲಿ ಯುವತಿ ಹಾಗೂ ಮೂವರು ಯುವಕರು ಬಂದಿದ್ದರು. ಏನು ಸಮಸ್ಯೆ ಆಗಿಲ್ಲ ಎಂದು SP ಹೇಳಿದ್ದರು. ಆದರೀಗ ಇಲ್ಲಿ ನೈತಿಕ ಪೋಲೀಸ್ ಗಿರಿ ನಡೆದಿದೆ ಎನ್ನಲಾಗಿದ್ದು ಆ ನೈತಿಕ ಪೊಲೀಸ್ ಗಿರಿ ಪ್ರಕರಣವನ್ನು ಪೋಲಿಸರೇ ಮುಚ್ಚಿಟ್ಟಿದ್ದರು ಎನ್ನವಾಗಿತ್ತು. ಸದ್ಯ ಅದು ಸದ್ಯ ಬಟಾಬಯಲಾಗಿದೆ.

ಅಂದಹಾಗೆ ಮುಸ್ಲಿಂ ಯುವಕರ ಜೊತೆ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿನಿಯನ್ನು ತಡೆದು ಹಿಂದೂ ಪರ ಸಂಘಟನೆಗಳು ಹಲ್ಲೆಗೆ ಯತ್ನಿಸಿದ್ದವು. ಯುವತಿಯ ಫೋಟೋ ಕೂಡ ವೈರಲ್ ಆಗಿತ್ತು. ಇದರ ಈ ಬೆನ್ನಲ್ಲೇ ಆ ವಿದ್ಯಾರ್ಥಿನಿ ಆತ್ಮಹತ್ಯೆಗೆ ‌ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಫೋಟೋಸ್ ವೈರಲ್ ಆದ ಬೆನ್ನಲ್ಲೇ ಅವಮಾನ ತಾಳಲಾರದೆ ವಿದ್ಯಾರ್ಥಿನಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಕೊಪ್ಪ ಸರ್ಕಾರಿ ಪಿಯು ಕಾಲೇಜಿನಲ್ಲಿ ನಿನ್ನೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಭಾನುಮತಿಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು‌ ತಿಳಿದು ಬಂದಿದೆ. ಇನ್ನು ಇತ್ತ ಕೊಪ್ಪ ಪೊಲೀಸ್ ಠಾಣೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಫೋಟೋ ವೈರಲ್ ಆಗಿದ್ದ ವೇಳೆ ಪೋಲಿಸರೇ ನೈಜ‌ ಘಟನೆಯನ್ನು ತಳ್ಳಿಹಾಕಿದ್ದರು ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಮೈಸೂರು ವಿಶ್ವವಿದ್ಯಾಲಯ: ವಿಭಾಗ ಮುಖ್ಯಸ್ಥರ ಮಾನಸಿಕ ಹಿಂಸೆ – ಕುಲಸಚಿವರ ಕಛೇರಿ ಎದುರಲ್ಲೆ ವಿದ್ಯಾರ್ಥಿ ಆತ್ಮಹತ್ಯೆ ಯತ್ನ ?!

Leave A Reply

Your email address will not be published.