Home Interesting Deadliest Song: ಈ ಹಾಡು ಹಾಡಿದರೆ ಸಾಯ್ತಾರೆ! 12 ಮಂದಿಯನ್ನು ಬಲಿ ಪಡೆದ ಹಾಡು! ಹೇಗೆ...

Deadliest Song: ಈ ಹಾಡು ಹಾಡಿದರೆ ಸಾಯ್ತಾರೆ! 12 ಮಂದಿಯನ್ನು ಬಲಿ ಪಡೆದ ಹಾಡು! ಹೇಗೆ ಅನ್ನೋದೇ ರೋಚಕ!

Image source Credit: Singersroom.com

Hindu neighbor gifts plot of land

Hindu neighbour gifts land to Muslim journalist

Deadliest Song: ಇಂಪಾದ ಹಾಡು ಕೇಳಿದರೆ ಮನದ ನೋವೆಲ್ಲ ಮಾಯ ಆಗೋದು ಸಹಜ.ಆದರೆ, ಹಾಡನ್ನು ಹಾಡಿ ಸಾಯೋರು( Deadliest Song)ಕೂಡ ಇದ್ದಾರೆ ಎಂದರೆ ನಿಮಗೆ ಅಚ್ಚರಿ ಎನಿಸಬಹುದು. ಆಶ್ಚರ್ಯ ಎಂದೆನಿಸಿದರೂ ನಿಜ!! ಈ ಹಾಡನ್ನು ಹಾಡಿದವರೆಲ್ಲ ಜವರಾಯನ ಮನೆಗೆ ಹೋಗುತ್ತಾರೆ. ಅರೇ, ಇದೇನಿದು ವಿಚಿತ್ರ ಅಂತೀರಾ?

ಕೆಲವರಿಗೆ ಹಾಡನ್ನು ಕೇಳುವುದರಲ್ಲಿ ಏನೋ ಖುಷಿ!! ಮತ್ತೆ ಕೆಲವರಿಗೆ ಹಾಡು ಹಾಡೋದು ಎಂದರೆ ಸಂಭ್ರಮ. ಇನ್ನು ಎಷ್ಟೋ ಮಂದಿಗೆ ಅದೆಷ್ಟೇ ನೋವಿದ್ದರೂ ನಮ್ಮ ನೆಚ್ಚಿನ ಸಂಗೀತಕ್ಕೆ ಕಿವಿಯಾದರೆ ಸಿಗುವ ನೆಮ್ಮದಿಯೇ ಬೇರೆ. ಆದ್ರೆ, ಇಲ್ಲೊಂದು ಕಡೆ ಒಂದು ಹಾಡನ್ನು ಹಾಡಿದರೆ ಸಾಯುತ್ತರಂತೆ. ಈಗಾಗಲೇ 12 ಮಂದಿ ಹಾಡನ್ನು ಹಾಡಿ ಪ್ರಾಣ ಕಳೆದುಕೊಂಡಿದ್ದಾರಂತೆ.

ಒಂದು ಹಾಡು ಮಾರಣಾಂತಿಕವಾಗಬಹುದು ಎಂದು ನೀವು ಊಹಿಸಲು ಕೂಡ ಸಾಧ್ಯವಿಲ್ಲ. ಈ ಹಾಡು ಗಾಯಕ ಫ್ರಾಂಕ್ ಸಿನಾತ್ರಾ ಅವರ ಮೈ ವೇ ಸಾಂಗ್ ಆಗಿದ್ದು, ಫ್ರಾಂಕ್ ಸಿನಾತ್ರಾ ಒಬ್ಬ ಅಮೇರಿಕನ್ ಗಾಯಕ ಮತ್ತು ಅವನ ಹಾಡು ಮೈ ವೇ ಅನ್ನು ಬಹಳ ಪ್ರಸಿದ್ಧ ಹಾಡು ಎಂದು ಪರಿಗಣಿಸಲಾಗಿದೆ. ಫಿಲಿಫೈನ್ಸ್ ಲೈವ್ ವೇದಿಕೆಯಲ್ಲಿ ಈ ಹಾಡನ್ನು ಹಾಡುವವರನ್ನು ಕೊಲ್ಲಲಾಗುತ್ತದೆ. ಈ ಹಾಡನ್ನು ಹಾಡಿದ ತಕ್ಷಣ ಗಾಯಕನನ್ನು ಹತ್ಯೆ ಮಾಡಲಾಗುತ್ತದೆ. ಈ ಹಾಡನ್ನು ಹಾಡುವ ದೇಶದಲ್ಲಿ ಅನೇಕ ಕ್ಯಾರಿಯೋಕೆ ಬಾರ್‌ಗಳಿದ್ದು, ಅಲ್ಲಿನ ಜನರು ಹೆಚ್ಚಾಗಿ ಕುಡಿದ ಮತ್ತಿನಲ್ಲಿರುತ್ತಾರೆ. ಅವರ ಬಳಿ ಆಯುಧಗಳು ಕೂಡ ಇರುತ್ತವೆ. ಡ್ರಗ್ಸ್, ಸಂಗೀತ ಮತ್ತು ಬಂದೂಕುಗಳು ಜನರನ್ನು ಕೊಲ್ಲುವಂತೆ ಪ್ರೇರೆಪಿಸುತ್ತವಂತೆ.

ನೀವು ಫಿಲಿಪೈನ್ಸ್‌ನಲ್ಲಿದ್ದರೆ, ಬೇರೆ ಯಾವುದೇ ಹಾಡನ್ನು ಬೇಕಾದರೂ ಹಾಡಿ. ಆದರೆ ಅಪ್ಪಿ ತಪ್ಪಿಯೂ ಈ ಹಾಡನ್ನು ಮಾತ್ರ ಗುನುಗಬೇಡಿ. ಹಾಗೆಂದು, ಈ ಹಾಡನ್ನು ಫಿಲಿಪೈನ್ಸ್‌ನಲ್ಲಿ ನಿಷೇಧ ಮಾಡಿಲ್ಲವಂತೆ. ಆದರೆ ಇಲ್ಲಿ ಯಾರೂ ಈ ಹಾಡನ್ನು ಹಾಡುವುದಿಲ್ಲ. 1998 ರ ಬಳಿಕ ಜನರು ಈ ಹಾಡನ್ನು ಹಾಡುವುದನ್ನು ನಿಲ್ಲಿಸಿದ್ದು, ಅನೇಕ ಕ್ಯಾರಿಯೋಕೆ ಬಾರ್‌ಗಳಿಂದ ಈ ಹಾಡನ್ನು ನಿಷೇಧ ಮಾಡಿದ್ದಾರಂತೆ.ಡೈಲಿ ಸ್ಟಾರ್ ಪ್ರಕಾರ, ಶ್ರೀ ಬ್ಯಾಲೆನ್ ಎಂಬ ಪಾಡ್‌ಕ್ಯಾಸ್ಟರ್ ಸಾಹಿತ್ಯವು ಜನರನ್ನು ಹಿಂಸೆಗೆ ಪ್ರಚೋದನೆ ನೀಡುತ್ತದೆ ಎನ್ನಲಾಗಿದೆ. ಸಾಹಿತ್ಯವು ಮಾನವನಾಗುವುದರ ಅರ್ಥವನ್ನು ವಿವರಣೆ ನೀಡುತ್ತದೆ. ಈ ವಿಷಯಗಳನ್ನು ಕೇಳುವುದರಿಂದ ಮಾತ್ರ ಜನರು ಹಿಂಸೆಗೆ ಪ್ರಚೋದನೆ ನೀಡುತ್ತಾರೆ.