Home Interesting ಪುರುಷರೇ, ಇದೊಂದು ಗುಣ ನಿಮ್ಮಲ್ಲಿದೆಯಾ ? ಹಾಗಿದ್ರೆ ಯಾವ ಹುಡುಗಿಯೂ ನಿಮ್ಮನ್ನು ಮದುವೆ ಆಗಲು ಒಪ್ಪುವುದಿಲ್ಲ...

ಪುರುಷರೇ, ಇದೊಂದು ಗುಣ ನಿಮ್ಮಲ್ಲಿದೆಯಾ ? ಹಾಗಿದ್ರೆ ಯಾವ ಹುಡುಗಿಯೂ ನಿಮ್ಮನ್ನು ಮದುವೆ ಆಗಲು ಒಪ್ಪುವುದಿಲ್ಲ !!

Image source: Roaring Creation

Hindu neighbor gifts plot of land

Hindu neighbour gifts land to Muslim journalist

Chanakya Niti About Marriage: ಚಾಣಕ್ಯ ನೀತಿ ಶಾಸ್ತ್ರದಲ್ಲಿ ಮಾನವನ ಜೀವನಕ್ಕೆ ಸಂಬಂಧಿಸಿದಂತೆ ಹಲವು ಸಂಗತಿಗಳನ್ನು ಉಲ್ಲೇಖಿಸಿದ್ದಾರೆ. ಅಂತೆಯೇ ಮನುಷ್ಯನ ರೀತಿ, ವರ್ತನೆ , ಆಲೋಚನೆ ಮತ್ತು ಅಭ್ಯಾಸಗಳು ಅವನ ವ್ಯಕ್ತಿತ್ವವನ್ನು ರೂಪಿಸುತ್ತವೆ. ವ್ಯಕ್ತಿಯ ಕೆಲವು ವ್ಯಕ್ತಿತ್ವವು ಜನರನ್ನು ತನ್ನತ್ತ ಆಕರ್ಷಿಸುವಂತೆಯು, ದ್ವೇಷಿಸುವಂತೆಯೂ ಮಾಡುತ್ತದೆ.

ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಪುರುಷರ ಕೆಲವು ಕೆಟ್ಟ ಗುಣಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಆಚಾರ್ಯ ಚಾಣಕ್ಯರ ಪ್ರಕಾರ, ಪುರುಷರಲ್ಲಿರುವ ಕೆಲವು ಕೆಟ್ಟ ಗುಣಗಳನ್ನು ಹೆಣ್ಣು ಮಕ್ಕಳು ಇಷ್ಟ ಪಡುವುದಿಲ್ಲ. ಮಹಿಳೆಯರು ಅಂತಹ ಪುರುಷರನ್ನು ಇಷ್ಟ ಪಡುವುದಿಲ್ಲ ಮತ್ತು ತಮ್ಮ ಜೀವನದ ಭಾಗವಾಗಿಸಲು ಬಯಸುವುದಿಲ್ಲ ಎಂದು ಹೇಳಲಾಗುತ್ತದೆ.

ಪತ್ನಿಯ ದೃಷ್ಟಿಯಲ್ಲಿ ಉತ್ತಮ ಪತಿ ಹೇಗೆ ಸಾಬೀತುಪಡಿಸಬಹುದು ಎಂಬುದನ್ನು ಚಾಣಕ್ಯರು ಸವಿವರವಾಗಿ (Chanakya Niti About Marriage) ಹೇಳಿದ್ದಾರೆ. ಒಂದು ವೇಳೆ ಪತಿಯಲ್ಲಿ ಅವಗುಣಗಳಿದ್ದರೆ, ಪತ್ನಿ ತನ್ನ ಪತಿಯನ್ನು ಮನಸಿನಲ್ಲಿ ದ್ವೇಷಿಸಲು ಪ್ರಾರಂಭಿಸುತ್ತಾಳೆ ಎಂದು ಅವರು ಹೇಳಿದ್ದಾರೆ.

ಚಾಣಕ್ಯ ನೀತಿ ಪ್ರಕಾರ, ಮನುಷ್ಯನ ಗುಣ ಕೆಟ್ಟದಾಗಿದ್ದರೆ ಅಥವಾ ಅವನು ತನ್ನ ಹೆಂಡತಿಯನ್ನು ಹೊರತುಪಡಿಸಿ ಇತರ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರೆ, ಅಂತಹ ಗಂಡಂದಿರನ್ನು ಯಾವುದೇ ಮಹಿಳೆ ಇಷ್ಟಪಡುವುದಿಲ್ಲ. ಅವನ ಸ್ವಂತ ಹೆಂಡತಿ ಅವನಿಗೆ ಶತ್ರುವಾಗುತ್ತಾಳೆ. ಇನ್ನು ಪ್ರತಿಯೊಬ್ಬ ಹೆಂಡತಿಯೂ ತನ್ನ ಪತಿ ತನ್ನ ವೈವಾಹಿಕ ಜೀವನದಲ್ಲಿ ಪ್ರಾಮಾಣಿಕನಾಗಿರಬೇಕೆಂದು ಬಯಸುತ್ತಾಳೆ.

ಚಾಣಕ್ಯ ನೀತಿಯ ಪ್ರಕಾರ, ಮಹಿಳೆಯರು ತಮ್ಮ ಗಂಡನಿಗೆ ಎಲ್ಲವನ್ನೂ ಹೇಳಲು ಇಷ್ಟಪಡುತ್ತಾರೆ. ಒಂದು ವೇಳೆ ಪತಿ ಆಕೆಯ ಎಲ್ಲ ರಹಸ್ಯಗಳನ್ನು ಸ್ನೇಹಿತರ ಮುಂದೆ ಆಗಲಿ ಅಥವಾ ಇತರರ ಮುಂದೆಯಾಗಲಿ ಬಹಿರಂಗಪಡಿಸಿದರೆ, ಪತ್ನಿ ಅದನ್ನು ಕೇಳಲು ಇಷ್ಟಪಡುವುದಿಲ್ಲ ಮತ್ತು ಆತನನ್ನು ಮನಸ್ಸಿನಲ್ಲಿ ದ್ವೇಷಿಸಲು ಪ್ರಾರಂಭಿಸುತ್ತಾಳೆ.

ಆಚಾರ್ಯ ಚಾಣಕ್ಯರ ಪ್ರಕಾರ, ಪತಿ ಮದ್ಯಪಾನ ಮಾಡುತ್ತಿದ್ದರೆ ಅಥವಾ ಜೂಜಿನ ಅಭ್ಯಾಸವನ್ನು ಹೊಂದಿದ್ದರೆ, ಡ್ರಗ್ಸ್ ವ್ಯಸನಿಯಾಗಿದ್ದರೆ, ಅಂತಹ ಗಂಡಂದಿರು ಅವರ ಪತ್ನಿಗೆ ಎಂದಿಗೂ ಇಷ್ಟವಾಗುವುದಿಲ್ಲ. ಅವರಿಗೆ ಇಂತಹ ಮದುವೆಯು ಒಂದು ಹೊರೆಯಂತೆ ತೋರುತ್ತದೆ.

ಇನ್ನು ಪತಿಯಾದವನು ಪತ್ನಿಯನ್ನು ಗೌರವಿಸದೆ ಕಠೋರವಾಗಿ ಮಾತನಾಡುವ ಪುರುಷರನ್ನು ಮಹಿಳೆಯರು ಇಷ್ಟಪಡುವುದಿಲ್ಲ. ಅಂತಹ ಪುರುಷರೊಂದಿಗೆ ಮಹಿಳೆಯರು ಕ್ರಮೇಣ ಅಂತರ ಕಾಯ್ದುಕೊಳ್ಳುತ್ತಾರೆ.