Koppa: ಕೊಪ್ಪ ಕಾಡಿನಲ್ಲಿ ಮೂವರು ಮುಸ್ಲಿಂ ಯುವಕರ ಜೊತೆ ಹಿಂದೂ ವಿದ್ಯಾರ್ಥಿನಿ – ಘಟನೆಗೆ ಸಿಕ್ತು ಬಿಗ್ ಟ್ವಿಸ್ಟ್- SP ಹೇಳಿದ್ದೇನು?

Chikkamagaluru news college girl from kalasa with three Muslim boys in forest near koppa

Koppa: ಇತ್ತೀಚೆಗಷ್ಟೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಕಳಸದ(Kalasa) ಹಾಸ್ಟೆಲ್ ನಲ್ಲಿ ಇದ್ದು ಕಾಲೇಜು ಓದುತ್ತಿದ್ದ ಹಿಂದೂ ಹುಡುಗಿ ಮೂವರು ಮುಸ್ಲಿಂ ಹುಡುಗರೊಂದಿಗೆ ಕೊಪ್ಪದ(Koppa) ಕಾಡಿನಲ್ಲಿ ಪತ್ತೆಯಾಗಿ ಹಿಗ್ಗಾಮುಗ್ಗ ಥಳಿತವಾಗಿದೆ ಎಂಬ ವಿಚಾರವೊಂದ ಸಾಕಷ್ಟು ವೈರಲ್ ಆಗಿತ್ತು. ಆದರೀಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಚಿಕ್ಕಮಗಳೂರು SP(Chikkamagalure SP) ಸ್ಪಷ್ಟೀಕರಣ ನೀಡಿದ್ದಾರೆ

ಹೌದು, ಕಳೆದ ಎರಡು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಫೋಟೋ‌ ಸಹಿತ ವೈರಲ್ ಆಗುತ್ತಿರುವ ಕಳಸ ಕಾಲೇಜಿನ ಓರ್ವ ಹಿಂದು ಯುವತಿ ಹಾಗೂ ಮೂವರು ಮುಸ್ಲಿಂ ಯುವಕರು ಕೊಪ್ಪ ಕಾಡಿನಲ್ಲಿ ಸಿಕ್ಕರು. ದೆಹಲಿ(Delhi) ರಿಜಿಸ್ಟ್ರೇಶನ್ ಹೊಂದಿರುವ ಸ್ವಿಫ್ಟ್ ಕಾರೊಂದರಲ್ಲಿ ಯುವತಿ ಹಾಗೂ ಮೂವರು ಯುವಕರು ಬಂದಿದ್ದರು. ಬಳಿಕ ಚೆನ್ನಾಗಿ ಥಳಿಸಲಾಯಿತು ಎನ್ನಲಾಗಿತ್ತು. ಸದ್ಯ ಈ ಸ್ಟೋರಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಕುರಿತು ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಏನಂದ್ರು ಚಿಕ್ಕಮಗಳೂರು SP?
ವೈರಲ್ ಆದ ಫೋಟೋ ಕೆಲದಿನಗಳ ಹಿಂದಿನ ಘಟನೆಯದ್ದಾಗಿದ್ದು, ಯಾವುದೇ ರೀತಿಯ ಅಸಂಬದ್ಧ ಚಟುವಟಿಕೆಗಳು ಕಂಡುಬಂದಿಲ್ಲ. ನಮ್ಮ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ. ಘಟನೆ ನಡೆದು ವಾರ ಸಮೀಪಿಸಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕೆಲ ಕಿಡಿಗೇಡಿಗಳು ಹಬ್ಬಿಸಿದ್ದಾರೆ. ಎಂದು ಹೇಳಿದ್ದಾರೆ.

 

ಏನಿದು ಘಟನೆ?

ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲ್ಲೂಕಿನ ಮಲೆನಾಡು ವ್ಯಾಪ್ತಿಯ ಕಪಿಲಕಟ್ಟೆ ಕುದುರೆಗುಂಡಿ ಗ್ರಾಮದ ಜಲಪಾತದ ಕಡೆ ಕೆಲವು ಹುಡುಗರು ಹಾಗೂ ಹುಡುಗಿಯರು ಪ್ರವಾಸಕ್ಕೆಂದು ಹೋದ ವಿಚಾರಕ್ಕೆ ಸಂಬಂಧಿಸಿದಂತೆ ಊರಿನ ಗ್ರಾಮಸ್ಥರು ಎಲ್ಲರಿಗೂ ಎಚ್ಚರಿಕೆ ನೀಡಿ, ತಿಳಿಗೊಳಿಸಿ ವಾಪಸ್ ಕಳುಹಿಸಿದ್ದರು. ಸುದ್ದಿ ತಿಳಿದ ಕೂಡಲೇ ಸ್ಥಳೀಯ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಅಲ್ಲಿ ಸೇರಿದ್ದ ಎಲ್ಲರಿಗೂ ಎಚ್ಚರಿಕೆ, ಸೂಕ್ತ ತಿಳುವಳಿಕೆ ಹಾಗೂ ಬುದ್ಧಿವಾದ ಹೇಳಿ ಯಾರೂ ಕೂಡ ಕಾನೂನಿಗೆ ವಿರುದ್ದವಾಗಿ ನಡೆದುಕೊಳ್ಳದಂತೆ ತಿಳಿಸಿ ಸೂಕ್ತ ಕ್ರಮ ಕೈಗೊಂಡಿರುತ್ತಾರೆ. ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಈ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿ ಕೊಡದಂತೆ ಸಾರ್ವಜನಿಕರಲ್ಲಿ ಪೋಲಿಸರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Kalladka prabhakar bhat: ಸೌಜನ್ಯ ಪ್ರಕರಣದ ಕುರಿತು ಕೊನೆಗೂ ಮೌನ ಮುರಿದ ಕಲ್ಲಡ್ಕ ಪ್ರಭಾಕರ್ ಭಟ್- ರೊಚ್ಚಿಗೆದ್ದ ಹಿಂದೂ ಹುಲಿ ಕೊನೆಗೂ ಹೇಳಿದ್ದೇನು ?

Leave A Reply

Your email address will not be published.