Bigg Boss OTT: ಬಿಗ್ ಬಾಸ್ ಸೀಸನ್-10ರ ಆರಂಭಕ್ಕೆ ಡೇಟ್ ಫಿಕ್ಸ್ ?! ಈ ಬಾರಿ ಶೋ ನಡೆಸೋದು ಇವ್ರೆನಾ?

Entertainment Bigg Boss Kannada season 10 start date and ott and Bigg Boss Kannada host complete details

Bigg Boss OTT: ಕಲರ್ಸ್ ಕನ್ನಡ ವಾಹಿನಿ ಮನರಂಜನೆಯ ರಸದೌತಣ ಬಡಿಸುವ ಕಾರ್ಯಕ್ರಮಗಳ ಮೂಲಕ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿದೆ. ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada season 10) ಕಾರ್ಯಕ್ರಮ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮೂಲಕ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಲು ಬಿಗ್ ಬಾಸ್ ತಂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಇತ್ತೀಚೆಗೆ ಕಾರ್ಯಕ್ರಮದ ತಯಾರಕರು ಸೀಸನ್ 10 ರ ಮೊದಲ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ. ಬಿಗ್ ಬಾಸ್ 10 ಈಗಾಗಲೇ ಇದರ ಭರ್ಜರಿ ಟೀಸರ್ ಜೊತೆಗೆ ಎಂಟ್ರಿ ಕೊಡಲು ಸಜ್ಜಾಗಿದ್ದು, ಹೀಗಾಗಿ, ಈ ಬಾರಿ ಏನೆಲ್ಲ ವಿಶೇಷತೆ ಇರಲಿದೆ ಅಲ್ಲದೇ ದೊಡ್ಮನೆ ಆಟಕ್ಕೆ (Bigg Boss OTT) ಯಾರೆಲ್ಲ ಭಾಗವಹಿಸಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. ಪ್ರೋಮೋದಲ್ಲಿ ಬಿಗ್ ಬಾಸ್ ಧ್ವನಿಯೊಂದಿಗೆ ನಗರದಾದ್ಯಂತ ಸಿಸಿಟಿವಿ ಕ್ಯಾಮೆರಾಗಳಿದ್ದು, “ನಮಸ್ತೆ ಕರ್ನಾಟಕ! ನೀವೆಲ್ಲರೂ ಹೇಗಿದ್ದೀರಿ? ನೀವು ನನ್ನನ್ನು ಮಿಸ್ ಮಾಡಿಕೊಂಡ್ರಾ? ಎನ್ನುವ ಮೂಲಕ ಟೀಸರ್ ಆರಂಭವಾಗಿದೆ. ಪ್ರತಿ ಬಾರಿಯಂತೆ ನಟ ಕಿಚ್ಚ ಸುದೀಪ್ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ಪ್ರೀಮಿಯರ್ ದಿನದಂದು ಸ್ಪರ್ಧಿಗಳ ಪಟ್ಟಿಯನ್ನು ಪ್ರಕಟ ಮಾಡಲಾಗುತ್ತದೆ.

ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada season 10) VOOT ಸೆಲೆಕ್ಟ್ನಲ್ಲಿ 247 ರಲ್ಲಿ ನೇರ ಪ್ರಸಾರದ ಮೂಲಕ ನೋಡಬಹುದಾಗಿದೆ. 247 ಲೈವ್ ಹೊರತುಪಡಿಸಿ ಕಾರ್ಯಕ್ರಮದ ಮುಖ್ಯ ಸಂಚಿಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿದೆ. TV Ginta Modalu ಮುಖ್ಯ ಸಂಚಿಕೆಯನ್ನು ಟಿವಿಯಲ್ಲಿ ಪ್ರಸಾರ ಮಾಡುವ ಮೊದಲು ಅದನ್ನು Voot ಸೆಲೆಕ್ಟ್ನಲ್ಲಿ ಮಾತ್ರ ಸ್ಟ್ರೀಮ್ ಮಾಡಲಾಗುತ್ತದೆ.

ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada season 10) ಶೀಘ್ರದಲ್ಲೇ ಶುರುವಾಗಿದ್ದು, ಇಲ್ಲಿಯವರೆಗೆ ಕಾರ್ಯಕ್ರಮದ ಆಯೋಜಕರು ಕಾರ್ಯಕ್ರಮದ ಪ್ರೀಮಿಯರ್ ಡೇಟ್ ಅನ್ನು ರಿವಿಲ್ ಮಾಡಿರಲಿಲ್ಲ. ಆದರೆ ಬಿಗ್ ಬಾಸ್ ಕನ್ನಡ ಸೀಸನ್ 10 ಇದೇ ತಿಂಗಳ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಪ್ರಾರಂಭವಾಗೋದು ಬಹುತೇಕ ಪಕ್ಕಾ ಎನ್ನಲಾಗಿದೆ.

ಇದನ್ನೂ ಓದಿ: ಕರಾವಳಿಗರೇ ನಿಮಗೊಂದು ಗುಡ್ ನ್ಯೂಸ್- ಇನ್ಮುಂದೆ ಇಲ್ಲಿಗೆಲ್ಲಾ ನೀವು ರೈಲಲ್ಲೇ ಓಡಾಡಬಹುದು – ಇಲ್ಲಿದೆ ನೋಡಿ ಡೀಟೇಲ್ಸ್ !!

Leave A Reply

Your email address will not be published.