India-Bharat: ‘ಇಂಡಿಯಾ’ ವನ್ನು ‘ಭಾರತ’ ಮಾಡಲು ಬೇಕು ಸಾವಿರ ಸಾವಿರ ಕೊಟಿ – ಯಾಕೆ ಗೊತ್ತಾ? ಇಲ್ಲಿದೆ ನೋಡಿ ನೀವೇ ಅಚ್ಚರಿ ಪಡುವಂತ ವರದಿ

National news India vs bharat row 14000 crore cost to make republic of Bharat

India-Bharat: ಸದ್ಯ ದೇಶದ ರಾಜಕೀಯದಲ್ಲಿ ಭಾರೀ ಸದ್ಧುಮಾಡುತ್ತಿರುವ ಹೆಸರು ‘ಇಂಡಿಯಾ'(India)ಮತ್ತು ‘ಭಾರತ'(Bharata). ಹೌದು, ಪ್ರಧಾನಿ ನರೇಂದ್ರ ಮೋದಿ(Narendra modi)ನೇತೃತ್ವದ ಬಿಜೆಪಿ ಸರ್ಕಾರವು ದೇಶದ ಹೆಸರನ್ನೇ ಬದಲಾಯಿಲು ಹೊರಟಿದೆ ಎಂದ ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಯಾಗುತ್ತಿದೆ. ಆದರೆ ಒಂದು ವೇಳೆ ಇದು ನಿಜವಾದರೆ, ಹೌದೆಂದೇ ಆದರೆ ಇಂಡಿಯಾವನ್ನು ಭಾರತ ಮಾಡಲು ಎಷ್ಟು ಹಣ ಬೇಕು ಗೊತ್ತಾ? ಇದನ್ನೇನಾದರೂ ನೀವು ಕೇಳಿದ್ರೆ ಶಾಕ್ ಆಗ್ತೀರಾ.

ಹೌದು, ಇಂಡಿಯಾ(India-Bharat) ಹೆಸರನ್ನು ಭಾರತ ಎಂದು ಬದಲಾಯಿಸಲು ತಗಲುವ ಖರ್ಚನ್ನು ನೀವೇನಾದರೂ ಕೇಳಿದ್ರೆ ಹೌಹಾರಿ ಬಿಡುತ್ತೀರಾ. ಯಾಕೆಂದರೆ ದೇಶದ ಹೆಸರನ್ನು ಭಾರತ ಎಂದು ಮರುನಾಮಕರಣ ಮಾಡಲು ಸರ್ಕಾರ ನಿರ್ಧರಿಸಿದೆ ಎಂಬ ವದಂತಿಗಳ ಬೆನ್ನಲ್ಲದೇ ಈ ಹೆಸರು ಬದಲಾವಣೆಗೆ ಬರೋಬ್ಬರಿ 14 ಸಾವಿರ ಕೋಟಿ ರು. ವೆಚ್ಚವಾಗಲಿದೆ ಎಂದು ವರದಿಯೊಂದು ತಿಳಿಸಿದೆ.

ಯಾಕೆ ಇಷ್ಟೊಂದು ವೆಚ್ಚ ?!
ಭಾರತ ಸಣ್ಣ ದೇಶವಲ್ಲ. ಇದು ಹೆಚ್ಚಾಗಿ ಹಳ್ಳಿಗಳಿಂದ ಕೂಡಿದ ದೇಶ. ಹೀಗಾಗಿ ಗ್ರಾಮ ಮಟ್ಟದಿಂದ ಆರಂಭಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬದಲಾವಣೆಗೆ ಮಾಡಬೇಕಾಗುತ್ತದೆ. ಒಂದುವೇಳೆ ಹೆಸರು ಬದಲಾಯಿತು ಎಂದು ಇಟ್ಟುಕೊಳ್ಳಿ. ಆಗ ಈ ಪ್ರಮಾಣದಲ್ಲಿ ಖರ್ಚು ಉಂಟಾಗಲಿದೆ ಎನ್ನಲಾಗಿದೆ. ಜೊತೆಗೆ ಹೆಸರು ಬದಲಾವಣೆ ಮಾಡಬೇಕಾದ ಸಂದರ್ಭದಲ್ಲಿ ಗ್ರಾಮ ಮಟ್ಟದಿಂದ ಹಿಡಿದು ಅಂತಾರಾಷ್ಟ್ರೀಯವಾಗಿ ಹಲವು ವಿಭಾಗಗಳಲ್ಲಿ ಸಮನ್ವಯತೆ ಸಾಧಿಸಬೇಕು. ಇದಕ್ಕಾಗಿ ಸುಮಾರು 14 ಸಾವಿರ ಕೋಟಿ ರು. ತಗುಲಲಿದೆ ಎಂದು ಅಂದಾಜಿಸಲಾಗಿದೆ

ಹೇಗೆ ಇದನ್ನು ಅಂದಾಜಿಸಲಾಯಿತು?
ಇದು ವರೆಗೂ ಭಾರತದಲ್ಲಿ ಅನೇಕ ನಗರಗಳ, ಪಟ್ಟಣಗಳ ಹೆಸರನ್ನು ಬದಲಾವಣೆ ಮಾಡಲಾಗಿದೆ. ಅದರಲ್ಲೂ ಮೋದಿ ಆಡಳಿತದಲ್ಲೇ ಹೆಚ್ಚು ಅನ್ನಬಹುದು. ಹೀಗಾಗಿ ಇದುವರೆಗೂ ಭಾರತದಲ್ಲಿನ ನಗರಗಳ ಹೆಸರು ಬದಲಾವಣೆ, ವಿವಿಧ ದೇಶಗಳ ಹೆಸರು ಮತ್ತು ಅಲ್ಲಿನ ನಗರ ಬದಲಾವಣೆಗಳಿಗೆ ತಗುಲಿದ ವೆಚ್ಚವನ್ನು ಆಧಾರವಾಗಿಟ್ಟುಕೊಂಡು ಈ ಅಂದಾಜನ್ನು ಮಾಡಲಾಗಿದೆ ಎಂದು ವರದಿ ಹೇಳಿದೆ.

ಇದುವರೆಗೂ ಯಾವ ದೇಶಗಳು ಹೆಸರು ಬದಲಾಯಿಸಿವೆ?
ಶ್ರೀಲಂಕಾ(Shreelanka) ಸಹ 1972ರಲ್ಲಿ ತನ್ನ ಸಿಲೋನ್‌ ಹೆಸರನ್ನು ಬದಲಾವಣೆ ಮಾಡಿತ್ತು. 2018 ಸ್ವಿಜರ್‌ರ್ಲೆಂಡ್‌(Switzerland) ಸಹ ತನ್ನ ನಗರಗಳ ಹೆಸರನ್ನು ಬದಲಾವಣೆ ಮಾಡಿತ್ತು. ಇವುಗಳಿಗಾಗಿ ಆ ದೇಶದ ಜಿಡಿಪಿ(GDP)ಯ ಶೇ.6ರಷ್ಟುವೆಚ್ಚ ತಗುಲಿತ್ತು. ಅಲ್ಲದೆ ಬ್ರಿಟಿಷರ ವಸಾಹಾತುಶಾಹಿ ಮನೋಭಾವವನ್ನು ತೊಡೆದು ಹಾಕಲು ಭಾರತದಲ್ಲೂ ಹಲವು ನಗರಗಳ ಹೆಸರನ್ನು ಬದಲಾವಣೆ ಮಾಡಲಾಗಿತ್ತು.

ಇದನ್ನೂ ಓದಿ: Dharmastala temple: ಧರ್ಮಸ್ಥಳ ಪ್ರೈವೇಟ್ ದೇವಸ್ಥಾನವೇ ಅಥವಾ ಸಾರ್ವಜನಿಕವೇ ? – ಇಲ್ಲಿದೆ ನೋಡಿ ನೀವು ಬೆಚ್ಚಿ ಬೀಳೋ ವಿವರ !

Leave A Reply

Your email address will not be published.