Gruha jyoti scheme registration : ಗೃಹಜ್ಯೋತಿಗೆ ಅರ್ಜಿ ಹಾಕಿದ್ರೂ ಬಿಲ್ ಬಂದಿದೆಯಾ? ಅರ್ಜಿ ಹಾಕೋ ವಿಚಾರದಲ್ಲಿ ಗೊಂದಲ ಇದಿಯಾ? ಹಾಗಿದ್ರೆ ಎಲ್ಲದಕ್ಕೂ ಇಲ್ಲಿದೆ ನೋಡಿ ಪರಿಹಾರ

GruhaJyoti scheme update Congress guarantee schemes Karnataka 2023 gruhayothi yojana frequently asked questions

 

Gruhajyoti scheme : ಕರ್ನಾಟಕ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳಲ್ಲಿ ಒಂದು ‘ಗೃಹಜ್ಯೋತಿ'(Gruhajyoti scheme) ಯೋಜನೆ. ಈಗಾಗಲೇ ಸರ್ಕಾರ ಈ ಯೋಜನೆಗೆ ಚಾಲನೆ ನೀಡಿದ್ದು, ಚನರು ಉಚಿತ ವಿದ್ಯುತ್ ಅನ್ನು ಪಡೆಯುತ್ತಿದ್ದಾರೆ. ಅಲ್ಲದೆ ಕೆಲವರು ಯೋಜನೆಯ ಫಲಾನುಭವಿಯಾಗಲು ಇದೀಗ ಅರ್ಜಿಗಳನ್ನು ಸಲ್ಲಿಕೆ ಮಾಡುತ್ತಿದ್ದಾರೆ. ಅಂದಹಾಗೆ ಹಲವರಿಗೆ ಈ ಯೋಜನೆ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಅವುಗಳಿಗೆಲ್ಲಾ ಪರಿಹಾರ ಇಲ್ಲಿದೆ ನೋಡಿ.

ಹೌದು, ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್‌(Free current)ಬಳಕೆ ಮಾಡಿಕೊಳ್ಳುವ ಸೌಲಭ್ಯ ಜಾರಿಯಾಗಿ ಎರಡು ತಿಂಗಳೇ ಕಳೆದಿದೆ. ಕರ್ನಾಟಕದಲ್ಲಿ ಬಹುತೇಕ 1.20 ಕೋಟಿ ಗೂ ಅಧಿಕ ಗ್ರಾಹಕರು ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಅಲ್ಲದೆ ಹಲವರಿಗೆ ಈ ನೋಂದಣಿ ಕುರಿತು ಇರುವ ಗೊಂದಲ, ಅನುಮಾನಗಳಿಗೆ ಪರಿಹಾರ, ಉತ್ತರಗಳನ್ನು ಇಲ್ಲಿ ನೀಡಲಾಗಿದೆ.

ನೋಂದಣಿಗೆ ಕೊನೆಯ ದಿನಾಂಕ ನಿಗದಿಪಡಿಸಲಾಗಿದೆಯೇ?
ಗೃಹಜ್ಯೋತಿ ಯೋಜನೆಯಡಿ ನೋಂದಣಿಗೆ ಜೂನ್‌ 18ರಿಂದಲೇ ಅವಕಾಶ ಮಾಡಿಕೊಟ್ಟಿದೆ. ಇದು ಈಗಲೂ ಮುಂದುವರಿದಿದೆ. ನೋಂದಣಿಗೆ ಯಾವುದೇ ಅಂತಿಮ ದಿನಾಂಕ ಸದ್ಯಕ್ಕಂತೂ ಇಲ್ಲ. ಈಗಲೂ ನೊಂದಣಿ ಮಾಡಿಸಿಕೊಳ್ಳಲು ಅವಕಾಶವಿದೆ. ನೋಂದಣಿ ಮಾಡಿಸಿಕೊಂಡ ತಿಂಗಳಿನಿಂದ ಗೃಹ ಜ್ಯೋತಿ ಸೌಲಭ್ಯಕ್ಕೆ ನೀವು ಅರ್ಹರಾಗುತ್ತೀರಿ.

*ನೋಂದಣಿಯಲ್ಲಿ ಎದುರಾಗುವ ಸಾಮಾನ್ಯ ಸಮಸ್ಯೆಗಳು ಯಾವುವು? ಪರಿಹಾರ  ಹೇಗೆ?
ಮುಖ್ಯವಾಗಿ ಗೃಹಜ್ಯೋತಿ ನೋಂದಣಿಗೆ ಬೇಕಾಗಿರುವುದು ಎರಡೇ ದಾಖಲೆ. ಒಂದು ಆಧಾರ್‌ ಕಾರ್ಡ್‌(Adhar card) ಹಾಗೂ ವಿದ್ಯುತ್‌ ಬಿಲ್‌ನಲ್ಲಿರುವ ಆರ್‌ ಆರ್‌ ಸಂಖ್ಯೆ. ಆಧಾರ್‌ ಕಾರ್ಡ್‌ ಅಪ್ಡೇಟ್‌ ಇರಬೇಕಾಗುತ್ತದೆ. ಆಧಾರ್‌ ಕಾರ್ಡ್‌ ಅಪ್ಡೇಟ್‌ ಇಲ್ಲದೇ ಇದ್ದರೂ ನೋಂದಣಿ ಪ್ರಕ್ರಿಯೆ ಆಗುವುದಿಲ್ಲ. ಅದನ್ನು ಮಾಡಿಸಿಕೊಳ್ಳಿ. ಉಳಿದಂತೆ ಆರ್‌ಆರ್‌ ಸಂಖ್ಯೆ ನಿಮ್ಮದೇ ಅಥವಾ ಬಾಡಿಗೆ ಮನೆಯಲ್ಲಿದ್ದರೆ ನೀವು ವಾಸವಿರುವ ಮನೆಯದ್ದೇ ಎಂದು ಖಚಿತಪಡಿಸಿಕೊಳ್ಳಿ. ಈ ಎರಡೂ ಸಮರ್ಪಕವಾಗಿದ್ದರೆ ಸೇವಾ ಸಿಂಧು ಪೋರ್ಟಲ್‌ನಲ್ಲಿ https://sevasindhugs1.karnataka.gov.in ಬಳಸಿ ನೋಂದಣಿ ಮಾಡಿಸಬಹುದು. ಇಲ್ಲದೇ ಇದ್ದರೆ ಬೆಂಗಳೂರು ಒನ್‌, ಗ್ರಾಮಪಂಚಾಯಿತಿ, ನಾಡಕಚೇರಿಗಳು ಹಾಗೂ ವಿದ್ಯುತ್‌ ಕಚೇರಿಗಳಲ್ಲೂ ನೋಂದಣಿ ಮಾಡಿಸಿಕೊಳ್ಳಬಹುದು.

ನೋಂದಣಿ ಹೇಗೆ ಮಾಡುವುದು?
ಗೃಹ ಜ್ಯೋತಿ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಮನೆಯಲ್ಲಿಯೇ ಕುಳಿತು ಸೇವಾ ಸಿಂಧು ಪೋರ್ಟಲ್‌ ಮೂಲಕ ನೋಂದಾಯಿಸಿಕೊಳ್ಳಬಹುದು. ಇಲ್ಲವೇ ಹತ್ತಿರದ ವಿದ್ಯುತ್‌ ಕಚೇರಿಗಳಿಗೆ ಇಲ್ಲವೇ ಬ್ರೌಸಿಂಗ್‌ ಕೇಂದ್ರಗಳಿಗೂ ತೆರಳಿ ನೋಂದಣಿ ಮಾಡಿಸಿಕೊಳ್ಳಬಹುದು.

ನಾನು ನೋಂದಣಿ ಮಾಡಿಕೊಂಡಿದ್ದರೂ ಹೆಚ್ಚು ಬಿಲ್ ಬಂದಿದೆ. ಏನು ಮಾಡಬೇಕು?
ಗೃಹಜ್ಯೋತಿಯಡಿಯಲ್ಲಿ ನೀವು ವಿದ್ಯುತ್‌ ಬಳಸುವ ಪ್ರಮಾಣ ಆಧರಿಸಿ ಬಿಲ್‌ ನಿಗದಿಯಾಗುತ್ತದೆ. ಅಂದರೆ 2022-23 ರ ಸರಾಸರಿ ವಿದ್ಯುತ್‌ ಬಳಕೆ + ಶೇಕಡ 10 ಹೆಚ್ಚಳ (ಎರಡು ಸೇರಿಸಿದರೆ ಒಟ್ಟು 200 ಯೂನಿಟ್‌ಗಳಿಗಿಂತ ಒಳಗಿರಬೇಕು) ಸರಾಸರಿ ಬಳಕೆಯ ಆಧಾರದ ಮೇಲೆ ಲಾಭವನ್ನು ಲೆಕ್ಕ ಹಾಕಲಾಗುತ್ತದೆ. ಗೃಹ ಜ್ಯೋತಿ ಯೋಜನೆಯಡಿ ನೀಡಿರುವ ಮಿತಿಯನ್ನು ಮೀರಿದರೆ ಪೂರ್ತಿ ಬಳಕೆ ಮಾಡಿದ್ದಕ್ಕೆ ಬಿಲ್‌ ಪಾವತಿಸಬೇಕಾಗುತ್ತದೆ. ಈ ಕುರಿತು ಗೊಂದಲಗಳಿದ್ದರೆ ಆಯಾ ಎಸ್ಕಾಂಗಳ ಉಪವಿಭಾಗೀಯ ಕಚೇರಿ ಇಲ್ಲವೇ ಸ್ಥಳೀಯವಾಗಿ ಇರುವ ವಿದ್ಯುತ್‌ ಕಚೇರಿಗೆ ಭೇಟಿ ನೀಡಬಹುದು. ಅವರು ಅಲ್ಲಿ ನೀವು ಬಳಸಿರುವ ವಿದ್ಯುತ್‌ ಪ್ರಮಾಣ, ಬಿಲ್‌ ಪ್ರಮಾಣ, ಗೃಹ ಜ್ಯೋತಿ ಮಾನದಂಡ ಹಾಗೂ ಇತರೆ ಮಾಹಿತಿಯನ್ನು ನೀಡಲಿದ್ದಾರೆ. ತಪ್ಪುಗಳಾಗಿದ್ದರೆ ಸರಿಪಡಿಸಿಕೊಳ್ಳಲೂ ಅವಕಾಶ ಮಾಡಿಕೊಡಲಿದ್ದಾರೆ. ಈ ಕುರಿತು ಗೊಂದಲವಿದ್ದರೆ 1912 ಗೆ ಕರೆ ಮಾಡಬಹುದು.

ನನ್ನ ಮನೆಗೆ ಸೋಲಾರ್ ಹೀಟರ್, ಸೋಲಾರ್ ಆನ್‌ಗ್ರಿಡ್ ಪವರ್ ಇದೆ. ನಾನು ಗೃಹಜ್ಯೋತಿಗೆ ಅರ್ಜಿ ಸಲ್ಲಿಸಬಹುದೇ?
ಗೃಹಜ್ಯೋತಿ ಯೋಜನೆ ಜಾರಿಯಾದ ನಂತರ ಸೋಲಾರ್‌ ಯೋಜನೆಗೆ ನೀಡುತ್ತಿದ್ದ ಸಹಾಯಧನವನ್ನು ನಿಲ್ಲಿಸಲಾಗಿದೆ. ಇದರಿಂದ ಸೋಲಾರ್‌ ಹಾಗೂ ಗೃಹಜ್ಯೋತಿ ಎರಡೂ ಸೌಲಭ್ಯ ಬಳಸುವ ಗೊಂದಲವಿಲ್ಲ. ಸೋಲಾರ್‌ ಬಳಕೆ ಮಾಡುತ್ತಿದ್ದರೂ ಗೃಹಜ್ಯೋತಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಬಾಡಿಗೆ ಮನೆಯಲ್ಲಿ ವಾಸವಿರುವವರಿಗೆ ಗೃಹಜ್ಯೋತಿ ಸೌಲಭ್ಯ ಸಿಗುತ್ತದೆಯೇ? ಹೇಗೆ ಪಡೆದುಕೊಳ್ಳಬೇಕು?
ಬಾಡಿಗೆ ಮನೆಯಲ್ಲಿ ವಾಸವಾಗಿರುವವರಿಗೂ ಗೃಹಜ್ಯೋತಿ ಬಳಸಲು ಅವಕಾಶವಿದೆ. ಪ್ರತ್ಯೇಕ ಮೀಟರ್‌ ಇರಲೇಬೇಕು. ಬಹುತೇಕ ಬಾಡಿಗೆ ಮನೆಗಳಲ್ಲಿ ಪ್ರತ್ಯೇಕ ಮೀಟರ್‌ ಇರುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಆರ್‌ಆರ್‌ ಸಂಖ್ಯೆ ಆಧರಿಸಿ ನೋಂದಣಿ ಮಾಡಬೇಕಾಗುತ್ತದೆ. ಅದರಲ್ಲಿ ಬಾಡಿಗೆ ಮನೆ ಎಂದು ಕೇಳುವ ಜತೆಗೆ ಮಾಲೀಕರ ಹೆಸರನ್ನೂ ನಮೂದಿಸಬೇಕಾಗುತ್ತದೆ ಮನೆಯನ್ನು ಬದಲಾವಣೆ ಮಾಡಿಕೊಂಡು ಬೇರೆ ಬಾಡಿಗೆ ಮನೆಗೆ ಹೋದಾಗ ಹೊಸದಾಗಿಯೇ ಅಲ್ಲಿನ ಆರ್‌ಆರ್‌ ನಂಬರ್‌ ಬಳಸಿ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ಈ ಕುರಿತು ಗೊಂದಲಗಳಿದ್ದರೆ ಹತ್ತಿರದ ವಿದ್ಯುತ್‌ ಕಚೇರಿ ಸಂಪರ್ಕಿಸಿ ವಿವರ ಪಡೆದುಕೊಳ್ಳಬಹುದು.

* ಅರ್ಜಿ ಸಲ್ಲಿಸಿದ ಬಳಿಕ ಸ್ಟೇಟಸ್ ತಿಳಿಯಿರಿ
ಹಂತ 1: https://sevasindhugs.karnataka.gov.in/ಈ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದಾಗಿದೆ.
ಹಂತ 2: ‘ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಿರಿ’ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3: Track Your Application Status ಎಂದು ಕಾಣಲಿದೆ
ಹಂತ 4: ನಿಮ್ಮ ಎಸ್ಕಾಂ ಯಾವುದು ಎನ್ನುವ ಆಯ್ಕೆ ಕಾಣಿಸುತ್ತದೆ ಅಲ್ಲಿ ನಿಮ್ಮ ಎಸ್ಕಾಂ ಆಯ್ಕೆ ಮಾಡಿಕೊಳ್ಳಿ.
ಹಂತ 5: ವಿದ್ಯುತ್ ಬಿಲ್‌ನಲ್ಲಿರುವ ಖಾತೆ ಸಂಖ್ಯೆ ಅಥವಾ ಅಕೌಂಟ್ ಐಡಿಯನ್ನು ನಮೂದಿಸಿ
ಹಂತ 6: Check Status ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಪ್ರಕ್ರಿಯೆ ಸಂಪೂರ್ಣವಾಗಲಿದೆ.

ಇದನ್ನೂ ಓದಿ: Rajanikanth: ಸೂಪರ್ ಸ್ಟಾರ್ ರಜನಿಕಾಂತ್ ಗೆ ಒಲಿದು ಬಂದ ರಾಜ್ಯಪಾಲ ಪಟ್ಟ ?! ಯಾವ ರಾಜ್ಯ ಗೊತ್ತಾ ? ಏನಿದು ಹೊಸ ಗುಡ್ ನ್ಯೂಸ್?

Leave A Reply

Your email address will not be published.