Gruha Lakshmi Yojana: ಗೃಹ ಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಕೆಗೆ ಡೆಡ್ ಲೈನ್ ಫಿಕ್ಸ್ ?! ಇಲ್ಲಿದೆ ಈ ಕುರಿತು ಬಿಗ್ ಅಪ್ಡೇಟ್!
Gruhalakshmi update last date to apply for gruhalakshmi yojana here is the complete detail
Gruhalakshmi Scheme: ಮಹಿಳೆಯರು ಕಾತುರದಿಂದ ಕಾಯುತ್ತಿದ್ದ ಕಾಂಗ್ರೆಸಿನ(Congress) 4ನೇ ಗ್ಯಾರಂಟಿ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme)ಮೈಸೂರಿನಲ್ಲಿ ರಾಹುಲ್ ಗಾಂಧಿ,(Rahul Gandhi)ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯನವರು(Siddaramaiah) ಚಾಲನೆ ನೀಡಿದ್ದಾರೆ. ಗೃಹ ಲಕ್ಷ್ಮೀ ಯೋಜನೆಗೆ (Gruha Lakshmi Yojana)ಚಾಲನೆ ಸಿಗುತ್ತಿದ್ದಂತೆ ಮನೆಯ ಯಜಮಾನಿ ಮಹಿಳೆಯರಿಗೆ ಸಹಾಯಧನ ನೀಡುವ 2,000 ರೂ. ಈಗಾಗಲೇ ರಾಜ್ಯದ ಮಹಿಳೆಯರ ಖಾತೆಗೆ ಹಣ ವರ್ಗಾವಣೆಯಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ (Gruha Lakshmi Scheme)ಅನುಸಾರ ಕರ್ನಾಟಕ ರಾಜ್ಯದ ಪ್ರತಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2,000ಗಳನ್ನು ನೀಡಲಿದೆ. ಕರ್ನಾಟಕದಲ್ಲಿ ಸುಮಾರು 1.70 ಕೋಟಿ ಫಲಾನುಭವಿಗಳನ್ನು ಈ ಯೋಜನೆಯಡಿ ಅರ್ಹರು ಎಂದು ಪರಿಗಣಿಸಲಾಗಿದೆ.
ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿ ಮಾಡಿಕೊಳ್ಳದೆ ಇರುವ ಮನೆಯ ಯಜಮಾನಿಯರು ಶೀಘ್ರವೇ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ಅಟಲ್ ಜನಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೋಂದಾವಣಿ ಮಾಡಿಕೊಳ್ಳಬಹುದು.ಈ ಯೋಜನೆಯಡಿ ನೋಂದಾಯಿಸಲು ಯಾವುದೇ ಕೊನೆಯ ದಿನಾಂಕ ನಿಗದಿ ಆಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಸಹಾಯವಾಣಿ ಸಂಖ್ಯೆ 1902 ಕ್ಕೆ ಕರೆ ಮಾಡಬಹುದು. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸದವರು ಮತ್ತು ಪಡಿತರ ಚೀಟಿಯಲ್ಲಿ ಯಜಮಾನಿ ಎಂದು ಹೆಸರಿಲ್ಲದೆ ಇರುವ ಮಹಿಳೆಯರು ರೇಷನ್ ಕಾರ್ಡ್ ನಲ್ಲಿ ಯಜಮಾನಿ ಎಂದು ತಿದ್ದುಪಡಿ ಮಾಡಲು ಸೆಪ್ಟೆಂಬರ್ 14 ರವರೆಗೆ ಅನುವು ಮಾಡಿಕೊಡಲಾಗಿದೆ. ಈ ನಿಟ್ಟಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವವರು ತಪ್ಪದೇ ಯಜಮಾನಿ ಎಂದು ಬದಲಾವಣೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.