Home Karnataka State Politics Updates Dr. G parameshwar: ಹಿಂದೂ ಧರ್ಮ ಯಾವಾಗ ಹುಟ್ಟಿತು, ಹುಟ್ಟಿಸಿದ್ದು ಯಾರು? ಉದಯನಿಧಿ ಬೆನ್ನಲ್ಲೇ ...

Dr. G parameshwar: ಹಿಂದೂ ಧರ್ಮ ಯಾವಾಗ ಹುಟ್ಟಿತು, ಹುಟ್ಟಿಸಿದ್ದು ಯಾರು? ಉದಯನಿಧಿ ಬೆನ್ನಲ್ಲೇ ವಿವಾದವನ್ನು ಮೈಮೇಳೆದುಕೊಂಡ ಗೃಹ ಸಚಿವ ಪರಮೇಶ್ವರ್ !!

G parameshwar

Hindu neighbor gifts plot of land

Hindu neighbour gifts land to Muslim journalist

Dr. G parameshwar: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಆಗಾಗ ಕೆಲವು ಹೇಳಿಕೆಗಳ ಮೂಲಕ ವಿವಾದಕ್ಕೆ ಕಾರಣವಾಗುತ್ತಿರುವ ಗೃಹ ಸಚಿವ ಡಾ ಪರಮೇಶ್ವರ್(Dr. G parameshwar)ಅವರು ಇದೀಗ ಹಿಂದೂ ಧರ್ಮದ ಕುರಿತು ಮಾತನಾಡಿ ಮತ್ತೆ ವಿವಾವದವನ್ನು ಮೈಮೇಲೆಳೆದುಕೊಂಡಿದ್ದಾರೆ.

ಹೌದು, ಸನಾತನ ಧರ್ಮದ ಬಗ್ಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆ ದೇಶದಾದ್ಯಂತ ತೀವ್ರ ಚರ್ಚೆಗೆ ಹಾಗೂ ವಿವಾದಕ್ಕೆ ಗ್ರಾಸವಾಗಿರುವ ಬೆನ್ನಲ್ಲೇ ಪರಮೇಶ್ವರ್ ಅವರು ಈ ಹೇಳಿಕೆ ನೀಡಿದ್ದಾರೆ. ಉದಯನಿಧಿ ಹೇಳಿಕೆ ಬೆಂಬಲಿಸಿ, ಸಮರ್ಥಿಸಿ ಕರ್ನಾಟಕದ ಕೆಲವು ಕಾಂಗ್ರೆಸ್ ನಾಯಕರು, ಸಚಿವರು ಹೇಳಿಕೆಗಳನ್ನು ಹರಿಬಿಡುತ್ತಿದ್ದಾರೆ. ಅಂತೆಯೇ ಇದೀಗ ಹಿಂದೂ ಧರ್ಮ ಯಾವಾಗ ಹುಟ್ಟಿತು ಯಾರು ಹುಟ್ಟಿಸಿದ್ದಾರೆ ಎಂದು ಪ್ರಶ್ನೆ ಕೇಳಿ ಗೃಹ ಸಚಿವ ಪರಮೇಶ್ವರ್ ವಿವಾದಕ್ಕೆ ಕಾರಣವಾಗಿದ್ದು, ಹಿಂದೂ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅಂದಹಾಗೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಅವರು ಪ್ರಪಂಚದ ಇತಿಹಾಸದಲ್ಲಿ ಅನೇಕ ಧರ್ಮಗಳು ಹುಟ್ಟಿಕೊಂಡಿವೆ. ಹಿಂದೂ ಧರ್ಮವನ್ನು (Hindu Religion) ಯಾರು ಹುಟ್ಟಿಸಿದರು, ಯಾವಾಗ ಹುಟ್ಟಿತು ಎಂಬುದು ಇನ್ನೂ ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಇದೆ. ಈ ವಿಚಾರದಲ್ಲಿ ಪ್ರಶ್ನಾರ್ಥಕ ಚಿಹ್ನೆ ತೆಗೆದಿಲ್ಲ. ಬೌದ್ಧ ಧರ್ಮ ಹಾಗೂ ಜೈನ ಧರ್ಮ ನಮ್ಮ ದೇಶದಲ್ಲಿ ಹುಟ್ಟಿತು. ಹೊರಗಡೆಯಿಂದ ಇಸ್ಲಾಂ ಧರ್ಮ ಹಾಗೂ ಕ್ರೈಸ್ತ ಧರ್ಮ ಬಂದಿವೆ. ಮನುಕುಲಕ್ಕೆ ಒಳ್ಳೆಯದಾಗಬೇಕೆಂಬುದೇ ಎಲ್ಲಾ ಧರ್ಮಗಳ ಸಾರಾಂಶ ಎಂದು ಪರಮೇಶ್ವರ್ ಹೇಳಿದ್ದಾರೆ.

ಛಲವಾದಿ ನಾರಾಯಣಸ್ವಾಮಿ ಆಕ್ಷೇಪ
ಹಿಂದೂ ಧರ್ಮದ ಬಗ್ಗೆ ಪರಮೇಶ್ವರ್ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಛಲವಾದಿ ನಾರಾಯಣಸ್ವಾಮಿ ಬೆಂಗಳೂರಿನಲ್ಲಿ ‘ಟಿವಿ9’ಗೆ ಪ್ರತಿಕ್ರಿಯಿಸಿದ್ದು, ಹಿಂದೂ ಧರ್ಮ ಹೀಯಾಳಿಸುವ ಚಾಳಿ ಏಕೆ ಬಂದಿದೆ ಅರ್ಥವಾಗುತ್ತಿಲ್ಲ. ಪರಮೇಶ್ವರ್​ ವಿದ್ಯಾವಂತರು, ಬುದ್ಧಿವಂತರು ಅಂತಾ ತಿಳಿದುಕೊಂಡಿದ್ದೇವೆ. ಅವರು ಮಾನವ, ಮಾನವೀಯತೆಯನ್ನೇ ಪ್ರಶ್ನೆ ಮಾಡಿದಂತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: BPL card Holders : BPL ಕಾರ್ಡ್ ದಾರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ – ನಿಮಗಾಗಿ ಸರ್ಕಾರ ಮಾಡಿತು ಹೊಸದೊಂದು ಘೋಷಣೆ !!