BPL card Holders : BPL ಕಾರ್ಡ್ ದಾರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ – ನಿಮಗಾಗಿ ಸರ್ಕಾರ ಮಾಡಿತು ಹೊಸದೊಂದು ಘೋಷಣೆ !!

Ration card update Good news for ration card holders deadline for ration card name change

BPL card Holders: ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಬಳಿಕ ರಾಜ್ಯದಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ವಿಚಾರ ಭಾರೀ ಸದ್ಧುಮಾಡುತ್ತಿದೆ. ಅಂತೆಯೇ ಇದೀಗ ಬಿಪಿಎಲ್ ಕಾರ್ಡ್​​ದಾರರಿಗೆ (BPL Card Holders) ಆಹಾರ ಇಲಾಖೆ ತಿದ್ದುಪಡಿಗೆ ಮತ್ತೆ ಅವಕಾಶ ನೀಡಿದ್ದು ಈ ವಿಚಾರವಾಗಿ ಮಹತ್ವದ ಘೋಷಣೆಯೊಂದನ್ನು ಮಾಡಿದೆ.

ಹೌದು, ಬಿಪಿಎಲ್ ಕಾರ್ಡ್ ಗಳಲ್ಲಿ ಮಾಹಿತಿ ತಿದ್ದುಪಡಿಗೆ ಸರ್ಕಾರ ಮತ್ತೆ ಅವಕಾಶ ನೀಡಿದೆ. ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರಿಸಲು, ಮೂರು ಹಂತದಲ್ಲಿ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿದೆ. ಕಳೆದ ತಿಂಗಳು ಮಾಹಿತಿ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿದ್ದು, ರಾಜ್ಯಾದ್ಯಂತ ಸರ್ವರ್ ಬ್ಯುಸಿ ಇರುವುದರಿಂದ ಸಾಕಷ್ಟು ಸಮಸ್ಯೆ ಆಗಿತ್ತು.ಹೀಗಾಗಿ ಆಹಾರ ಇಲಾಖೆಯ ವೆಬ್ಸೈಟ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಜಿಲ್ಲೆಗಳನ್ನು ವಿಂಗಡಿಸಿ ಹೆಸರು ತಿದ್ದುಪಡಿಗೆ ಸರ್ಕಾರ ಅವಕಾಶವನ್ನು ನೀಡಿದೆ.

ಯಾವ ಜಿಲ್ಲೆಗಳಲ್ಲಿ ಯಾವಾಗ ತಿದ್ದುಪಡಿಗೆ ಅವಕಾಶ?
ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಸೆಪ್ಟೆಂಬರ್ 9 ರಿಂದ ಸೆಪ್ಟೆಂಬರ್ 11 ರವರೆಗೆ ಅವಕಾಶ ನೀಡಿದ್ದು, ತಿದ್ದುಪಡಿಗೆ ಬೆಳಗ್ಗೆ 10 ರಿಂದ ಸಂಜೆ 6:00 ಗಂಟೆಯ ವರೆಗೆ ಆಹಾರ ಇಲಾಖೆಯ ವೆಬ್ಸೈಟ್ ಓಪನ್ ಇರಲಿದೆ.
ಅದರಂತೆ ರಾಜ್ಯದ ಬಾಗಲಕೋಟೆ, ಬೆಳಗಾವಿ, ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು ಜಿಲ್ಲೆ, ಮಂಡ್ಯ, ಮೈಸೂರು, ಉಡುಪಿ, ಉತ್ತರಕನ್ನಡ ಜಿಲ್ಲೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 14ರಿಂದ 16ರ ವರೆಗೆ ಸರ್ಕಾರ ಅವಕಾಶ ನೀಡಿದೆ.

ಎಲ್ಲೆಲ್ಲಿ ತಿದ್ದುಪಡಿಗೆ ಅವಕಾಶ?
ಅಂದಹಾಗೆ ಸೆ.1ರಿಂದ 10ರವರೆಗೆ ಮತ್ತೆ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು, ಬೆಳಗ್ಗೆ 10ರಿಂದ 6 ಗಂಟೆಯವರೆಗೆ ತಿದ್ದುಪಡಿಗೆ ಸಮಯ ನೀಡಲಾಗಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಫಲಾನುಭವಿಗಳು ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ.

ಏನೇನು ತಿದ್ದುಪಡಿ ಮಾಡಬಹುದು?
1 ಫಲಾನುಭವಿ ಹೆಸರು ಬದಲಾವಣೆ
2.ಪಡಿತರ ಕೇಂದ್ರ ಬದಲಾವಣೆ
3.ಕಾರ್ಡ್ ಸದಸ್ಯರ ಹೆಸರು ಡಿಲಿಟ್, ಸೇರ್ಪಡೆ
4.ಕಾರ್ಡ್ ಮುಖ್ಯಸ್ಥರ ಹೆಸರು ಬದಲಾವಣೆ
5.ಮಹಿಳಾ ಮುಖ್ಯಸ್ಥರ ಹೆಸರು ಬದಲಾವಣೆ

ಇದನ್ನೂ ಓದಿ: Anna bhagya: ಅನ್ನಭಾಗ್ಯ ಫಲಾನುಭವಿಗಳೇ.. ನಿಮಗಿನ್ನೂ ಅಕ್ಕಿ ಹಣ ಬಂದಿಲ್ಲವೇ? ನಿಮ್ಮಲ್ಲಿ ಬ್ಯಾಂಕ್ ಅಕೌಂಟ್ ಇಲ್ಲವೇ? ಹಾಗಿದ್ರೆ ನಿಮಗೊಂದು ಗುಡ್ ನ್ಯೂಸ್

Leave A Reply

Your email address will not be published.