Golden Star Ganesh : ಕೋರ್ಟ್’ನಿಂದ ರಿಲೀಫ್ ಸಿಕ್ಕ ಬೆನ್ನಲ್ಲೇ ನಟ ಗಣೇಶ್ ಗೆ ಸರ್ಕಾರ ಕೊಡ್ತು ಬಿಗ್ ಶಾಕ್ – ಅರಣ್ಯ ಸಚಿವರು ಹೇಳಿದ್ದೇನು ಗೊತ್ತಾ?

Golden Star Ganesh: ಬಂಡೀಪುರ ಸೂಕ್ಷ್ಮ ಪರಿಸರ ವಲಯವಾಗಿರುವ, ಗುಂಡ್ಲುಪೇಟೆ ತಾಲೂಕಿನ ಜಕ್ಕಹಳ್ಳಿ ಗ್ರಾಮದ ಸರ್ವೆ ನಂಬರ್ 105 ರಲ್ಲಿ 1 ಎಕರೆ 24 ಗುಂಟೆ ಭೂಮಿಯನ್ನು ನಟ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಖರೀದಿಸಿದ್ದು, ಜಮೀನಿನಲ್ಲಿ ತಾತ್ಕಾಲಿಕ ಮನೆ ನಿರ್ಮಾಣಕ್ಕೆ ಮಾತ್ರ ಅನುಮತಿ ಪಡೆದಿದ್ದರು. ಕ್ರಮೇಣ ಇಲ್ಲಿ ಜೆಸಿಬಿ ಯಿಂದ ಕೆಲಸ ನಡೆಯುತ್ತಿದ್ದು, ಬೃಹತ್ ಕಟ್ಟಡಕ್ಕೆ ನಿರ್ಮಾಣಕ್ಕೆ ಸಿದ್ದತೆ ಮಾಡುತ್ತಿದ್ದಾರೆ ಎಂದು ಆರೋಪ ಕೇಳಬಂದಿದೆ.

 

 

ಈ ಪ್ರಕರಣ ಸಂಬಂಧ ನಟ ಗಣೇಶ್‌ ಅವರು ಸಲ್ಲಿಸಿದ್ದ ಮೆಮೊ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಪೀಠ, ಅರ್ಜಿದಾರರು ಕಟ್ಟಡ ನಿರ್ಮಾಣ ಮಾಡಬಹುದು. ಆದರೆ, ಅದು ಪ್ರಕರಣ ಸಂಬಂಧ ನ್ಯಾಯಾಲಯ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಆದೇಶಿಸಿತ್ತು.

 

ವಿಚಾರಣೆ ವೇಳೆ ಗಣೇಶ್‌ ಪರ ವಕೀಲ ಶ್ರೀಧರ್‌ ಪ್ರಭು, 2023ರಲ್ಲಿ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಚ್‌ ನೀಡಿರುವ ಆದೇಶದಂತೆ, ಅರ್ಜಿದಾರರು ವಿವಾದಿತ ಜಾಗದಲ್ಲಿ ಕಟ್ಟಡ ನಿರ್ಮಿಸಲು ಯಾವುದೇ ನಿರ್ಬಂಧವಿಲ್ಲ. ಕಟ್ಟಡ ನಿರ್ಮಾಣ ನಿಯಂತ್ರಣ ಅಥವಾ ನಿಷೇಧಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಗೆ ಯಾವುದೇ ಅಧಿಕಾರವಿಲ್ಲ. ಬೇರೆಯವರಿಗೆ ಮನೆ ನಿರ್ಮಾಣ ಮಾಡಲು ಅರಣ್ಯ ಇಲಾಖೆ ನೀಡಿದೆ. ಆದರೆ, ಅರ್ಜಿದಾರರಿಗೆ ಮಾತ್ರ ನಿರ್ಬಂಧಿಸಿದೆ. ಒಂದೊಮ್ಮೆ ಅರ್ಜಿದಾರರ ತಪ್ಪು ಕಂಡು ಬಂದರೆ ಕಟ್ಟಡ ತೆರವು ಮಾಡಲಾಗುವುದು ಎಂದು ಭರವಸೆ ನೀಡಿದ್ದರು.

ಈಗಾಗಲೇ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಗಣೇಶ್‌ಗೆ ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಿತ್ತು. ಜತೆಗೆ, ಪ್ರಕರಣ ಸಂಬಂಧ ಹಿಂದಿನ ಸೂಚನೆಯಂತೆ ಬಂಡೀಪುರ ಸೂಕ್ಷ್ಮ ಪರಿಸರ ವಲಯ ನಿಗಾ ಸಮಿತಿಗೆ ನೀಡಬೇಕಾದ ಮನವಿಯನ್ನು ಅಡ್ವೊಕೇಟ್‌ ಜನರಲ್‌ ಅವರ ಮೂಲಕ ಸಲ್ಲಿಸುವಂತೆ ಅರ್ಜಿದಾರರಿಗೆ ನಿರ್ದೇಶಿಸಿ ವಿಚಾರಣೆಯನ್ನು ಸೆ.12ಕ್ಕೆ ಮುಂದೂಡಿತ್ತು.

 

ಆದರೆ ಕೋರ್ಟ್ ವಿಚಾರಣೆಗೆ ಮುನ್ನವೇ, ಅರಣ್ಯ ಇಲಾಖೆಯ ಮಾಹಿತಿ ಇಲ್ಲದೇ ಜಮೀನು ನೀಡಿದ ಹಿನ್ನೆಲೆ ಜಾಗವನ್ನು ಸರಕಾರ ವಾಪಸ್‌ ಪಡೆಯಲು ತೀರ್ಮಾನಿಸಿದೆ. ಕಟ್ಟಡ ಕಟ್ಟಲು ಅನುಮತಿ ಇದ್ದರೂ ಜಾಗ ವಾಪಸ್‌ ಕೊಡಬೇಕಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ನಟ ಗಣೇಶ್ ಅವರ ಮುಂದಿನ ನಿಲುವಿನ ಬಗ್ಗೆ ಸೆಪ್ಟೆಂಬರ್ 12ರಂದು ತಿಳಿಯಲಿದೆ.

Leave A Reply

Your email address will not be published.