Crime News: ಮುಂಬೈನ ಫ್ಲಾಟ್ ಅಲ್ಲಿ ಕತ್ತು ಸೀಳಿದ ಗಗನಸಖಿಯ ಶವ ಪತ್ತೆ – ಬೆಚ್ಚಿ ಬೀಳಿಸೋ ಈ ಘನ ಘೋರ ಕೃತ್ಯದ ಹಿಂದಿರೋ ಅಸಲಿಯತ್ತೇನು ಗೊತ್ತಾ?

Crime News:ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ.ಇದೀಗ, ಯುವತಿಯೊಬ್ಬಳ ಕತ್ತು ಸೀಳಿ ಕೊಲೆ ಮಾಡಿದ ದಾರುಣ ಘಟನೆ ವರದಿಯಾಗಿದೆ.ಮುಂಬೈನ (Mumabi)ಉಪನಗರದ ಫ್ಲಾಟ್ವೊಂದರಲ್ಲಿ ತರಬೇತಿ ನಿರತ ಗಗನಸಖಿಯ ಶವ ಕತ್ತು ಸೀಳಿದ ರೀತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

 

ಛತ್ತೀಸ್‌ಗಢದಿಂದ ಆಗಮಿಸಿದ್ದ ರೂಪಲ್ ಓಗ್ರೆ (25) ಎಂಬಾಕೆ ಏರ್ ಇಂಡಿಯಾಗೆ ಆಯ್ಕೆಯಾಗಿದ್ದ ಹಿನ್ನೆಲೆ ಈ ವರ್ಷದ ಏಪ್ರಿಲ್‌ನಲ್ಲಿ ಮುಂಬೈಗೆ ಸ್ಥಳಾಂತರ ಮಾಡಿದ್ದರಂತೆ. ಕೆಲವು ದಿನಗಳ ಹಿಂದೆ ಮನೆಗೆ ಹೋಗಿದ್ದ ತನ್ನ ಸಹೋದರಿ ಮತ್ತು ತನ್ನ ಗೆಳೆಯನೊಂದಿಗೆ ಅಂಧೇರಿಯ ಪ್ಲಶ್ ಹೌಸಿಂಗ್ ಸೊಸೈಟಿಯಲ್ಲಿ (Housing Society)ತನ್ನ ಫ್ಲಾಟ್‌ನಲ್ಲಿ ರುಪಲ್ ನೆಲೆಸಿದ್ದಳು.

ರೂಪಾಲ್ ಕರೆ ಸ್ವೀಕರಿಸದ ಹಿನ್ನೆಲೆ ಪೋಷಕರು ರುಪಾಲ್ ಅವಳ ಸ್ನೇಹಿತರ ಬಳಿ ಮನೆಗೆ ಭೇಟಿ ನೀಡಿ ವಿಚಾರಿಸುವಂತೆ ಕೇಳಿಕೊಂಡಿದ್ದಾರೆ. ಹೀಗಾಗಿ, ಆಕೆಯ ಸ್ನೇಹಿತರು ಅಲ್ಲಿಗೆ ಹೋಗಿ ನೋಡಿದಾಗ ಫ್ಲಾಟ್ ಒಳಗಿನಿಂದ ಬೀಗ ಹಾಕಿದ್ದು ಕಂಡುಬಂದಿದೆ. ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಫ್ಲಾಟ್‌ ಹೊಕ್ಕಾಗ ಎಂಎಸ್ ಓಗ್ರೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾದರು ಕೂಡ ರೂಪಾಲ್ ಸಾವಿನ ಕದ ತಟ್ಟಿದ್ದಳು.

ಓಗ್ರೆ ಅವರ ಕೊಲೆ ಪ್ರಕರಣಕ್ಕೆ(Murder) ಸಂಬಂಧಿಸಿದಂತೆ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ 40 ವರ್ಷದ ವ್ಯಕ್ತಿ ವಿಕ್ರಮ್ ಅತ್ವಾಲ್ ಮತ್ತು ಆತನ ಪತ್ನಿಯನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ, ಪೊಲೀಸರು ವಿಕ್ರಮ್ ಅತ್ವಾಲ್ ನನ್ನು ಬಂಧಿಸಿದ್ದು, ಹೌಸಿಂಗ್ ಸೊಸೈಟಿಯಲ್ಲಿನ ಭದ್ರತಾ ಕ್ಯಾಮೆರಾಗಳ ಪರಿಶೀಲನೆ ಮಾಡುತ್ತಿದ್ದಾರೆ ಎಂದು ವರದಿಯಾಗಿದ್ದು, ಆರೋಪಿಗಳ ಪತ್ತೆಗೆ 12 ತಂಡಗಳನ್ನು ರಚಿಸಲಾಗಿದೆಯಂತೆ.

Leave A Reply

Your email address will not be published.