Shirva: ಪ್ರತಿಭಾವಂತ ವಿದ್ಯಾರ್ಥಿನಿ ಅನಾರೋಗ್ಯಕ್ಕೆ ತುತ್ತಾಗಿ ಸಾವು!!!

Udupi death news student died due to illness at shirva

Share the Article

Shirva: ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಿರ್ವದ (Shirva) ಬಳಿಯ ಕಾನ್ವೆಂಟ್‌ ರಸ್ತೆಯ ನಿವಾಸಿ ರಿಯಾನ್ನ ಜೇನ್‌ ಡಿಸೋಜಾ ಎಂಬ ವಿದ್ಯಾರ್ಥಿನಿ ನಿಧನರಾಗಿದ್ದಾರೆ . ಇವರು ಕಳೆದ ವರ್ಷ ಕ್ಯಾನ್ಸರ್‌ ಎಂಬ ರೋಗಕ್ಕೆ ತುತ್ತಾಗಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆನ್ನಲಾಗಿದೆ. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

20 ರ ಹರೆಯದ ರಿಯಾನ್ನ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು. ಅತ್ಯುತ್ತಮ ನೃತ್ಯಗಾರ್ತಿಯಾಗಿದ್ದ ಇವರು ಕೊರಿಯೊಗ್ರಾಫರ್‌ ಆಗಿ ಕೂಡಾ ತಮ್ಮ ಸೇವೆ ನೀಡಿದ್ದಾರೆ. ಬಿಕಾಂ ಪದವಿ ಪಡೆದ ಇವರು ಎಂಕಾಂ ಮಾಡುವ ಸಂದರ್ಭದಲ್ಲಿ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಇವರು ತಂದೆ, ತಾಯಿ, ಅಪಾರ ಸ್ನೇಹಿತರು, ಬಂಧು ಬಳಗದವರನ್ನು ಅಗಲಿದ್ದಾರೆ.

ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಿಂದ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಸಹಾಯಧನ ಪಡೆಯಲು ರೈತರಿಂದ ಅರ್ಜಿ ಆಹ್ವಾನ

Leave A Reply