Horticulture Department: ತೋಟಗಾರಿಕೆ ಇಲಾಖೆಯಿಂದ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಸಹಾಯಧನ ಪಡೆಯಲು ರೈತರಿಂದ ಅರ್ಜಿ ಆಹ್ವಾನ
Agriculture news Application invited from farmers to get subsidy under Area Extension Program from Horticulture Department
Horticulture Department: ತೋಟಗಾರಿಕಾ ಇಲಾಖಾ(Horticulture Department) ವಿವಿಧ ಯೋಜನೆಯಡಿ 2023-24 ನೇ ಸಾಲಿನಲ್ಲಿ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಅನಾನಸ್, ತಾಳೆ, ಕೊಕೊ, ಗೇರು ಮತ್ತು ರಾಂಬೂಟನ್ ಕೃಷಿ ಮಾಡಲು ಅವಕಾಶವಿದ್ದು, ಸಹಾಯಧನ ಪಡೆಯಲು ಆಸಕ್ತ ರೈತರು ಅರ್ಜಿ ಆಹ್ವಾನಿಸಲಾಗಿದೆ.
ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವ ರೈತರು ಅರ್ಜಿ ನಮೂನೆ, ಪಹಣಿ ಪತ್ರ RTC ಪಹಣಿ ಪತ್ರ (RTC) ದಲ್ಲಿ ಬೆಳೆ ದಾಖಲಾತಿಯಾಗದ ಪಕ್ಷದಲ್ಲಿ ಬೆಳೆ ದೃಢೀಕರಣ ಪತ್ರ, ರಾಷ್ಟ್ರೀಕೃತ ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಪರಿಶಿಷ್ಟ ವರ್ಗ/ ಪರಿಶಿಷ್ಟ ಪಂಗಡದ ಫಲಾನುಭವಿಗಳಾದಲ್ಲಿ ಜಾತಿ ಪ್ರಮಾಣ ಪತ್ರದ ಪ್ರತಿಯ ದಾಖಲೆಗಳನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ಅಥವಾ ಸಹಾಯಕ ತೋಟಗಾರಿಕೆ ನಿರ್ದೇಶಕರು- 9731854527, ಸಹಾಯಕ ತೋಟಗಾರಿಕೆ ನಿರ್ದೇಶಕರು-9449526117 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಮಹೇಶ್ ಶೆಟ್ಟಿ ತಿಮರೋಡಿಯವರ ಬಗ್ಗೆ ಯೂ ಟ್ಯೂಬ್‌ನಲ್ಲಿ ಖಾಸಗಿ ಮಾತು| ಮಾತಿನ ಚಕಮಕಿ, ಇತ್ತಂಡಗಳ ಮೂರು ಜನ ಆಸ್ಪತ್ರೆಗೆ ದಾಖಲು ?!