LPG price: ದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್: 200ರೂ ಬೆಲೆ ಕಡಿತ ಬೆನ್ನಲ್ಲೇ, LPG ಸಿಲಿಂಡರ್ ಬೆಲೆಗಳಲ್ಲಿ ಮತ್ತೆ ಕಂಡು ಕೇಳರಿಯದ ಇಳಿಕೆ

National news LPG price after domestic LPG price reduction commercial LPG gas cylinders prices cut

LPG price: ಎರಡೇ ದಿನಗಳ ಕೆಳಗೆ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ನ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿತ್ತು. ಗ್ರಹ ಬಳಕೆಯ 14 ಕೆಜಿ ಎಲ್ ಪಿ ಜಿ ಸಿಲಿಂಡರ್ ಗೆ ಇನ್ನೂರು ರೂಪಾಯಿ ಸಬ್ಸಿಡಿ ಘೋಷಣೆ ಮಾಡಿ ಕೇಂದ್ರ ಸರಕಾರ ಆದೇಶಿಸಿತ್ತು. ಅದರ ಬೆನ್ನಿಗೆ ಇದೀಗ ವಾಣಿಜ್ಯ ಬಳಕೆಯ ಸಿಲಿಂಡರ್ ದರ( LPG price) ಕೂಡ ಕಡಿತಗೊಂಡಿದೆ.

ಇವತ್ತು ತಿಂಗಳ ಮೊದಲನೆಯ ದಿನ. ರೂಡಿಯಂತೆ ಪ್ರತಿ ತಿಂಗಳ ಮೊದಲನೇ ದಿನದಂದು ವಾಣಿಜ್ಯ ಮತ್ತು ಗ್ರಹಬಳಕೆಯ ಎಲ್ಪಿಜಿ ಸಿಲಿಂಡರ್‌ಗಳ ಬೆಲೆ ಪರಿಷ್ಕರಣೆ ಆಗುತ್ತದೆ. ಅದರಂತೆ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ಪರಿಷ್ಕರಿಸಿದ್ದು, ಬರೋಬ್ಬರಿ 158 ರೂಪಾಯಿ ಕಡಿತಗೊಳಿಸಿವೆ.

ಈ ಹಿಂದೆ ಮೇ ತಿಂಗಳಲ್ಲಿ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ನ ಬೆಲೆ 172 ರೂಪಾಯಿಗಳು ಕಡಿತಗೊಂಡಿದ್ದು ಮತ್ತೆ ಜೂನ್ ನಲ್ಲಿ 83 ಕಡಿತಗೊಂಡಿತ್ತು. ಆಗಸ್ಟ್ ತಿಂಗಳಿನಲ್ಲಿ ಮತ್ತೆ ನೂರು ರೂಪಾಯಿಯಷ್ಟು ಬೆಲೆ ಕಡಿತ ಉಂಟಾಗಿತ್ತು. ಕೇವಲ ಜುಲೈ ತಿಂಗಳಿನಲ್ಲಿ ಮಾತ್ರ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಕೇವಲ ಏಳು ರೂಪಾಯಿ ಎಷ್ಟು ಹೆಚ್ಚಿಸಲಾಗಿತ್ತು.

ಇದೀಗ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 158 ರೂಪಾಯಿಯಾಗಿದ್ದು ವ್ಯಾಪಾರಸ್ಥರ ಮುಖದಲ್ಲಿ ಖುಷಿ ಮೂಡಿದೆ. ಈಗ ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 1768 ರೂಪಾಯಿ ಇದ್ದರೆ ದೆಹಲಿಯಲ್ಲಿ ಸಾವಿರದ 1680 ರೂಪಾಯಿ ಇದೆ.

ಇದನ್ನೂ ಓದಿ: ಸುಂದರ ನಟಿಯ ದುರಂತ ಅಂತ್ಯ, ಸಿನಿಮಾ, ಕಿರುತೆರೆ ನಟಿ ಅಪರ್ಣ ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆ !

Leave A Reply

Your email address will not be published.