Bengaluru: ಪತ್ನಿಯ ಜತೆ ಮೆಲ್ಲಗೆ ಮಾತಾಡು ಎಂದ ಸಹೋದ್ಯೋಗಿ, ಗುಂಡು ಹಾರಿಸಿದ ಖಾಸಗಿ ಗನ್ ಮ್ಯಾನ್ !

Bengaluru news Narrow escape for gunman as colleague opens fire during row in Bengaluru

Share the Article

Bengaluru: ಗುಂಡು ಹೊಡೆದು ತನ್ನ ಸಹೋದ್ಯೋಗಿ ಮೇಲೆಯೇ ಗುಂಡು ಹಾರಿಸಿದ ಆರೋಪದ ಮೇರೆಗೆ ಖಾಸಗಿ ಗನ್ ಮ್ಯಾನ್ ಒಬ್ಬರನ್ನು ಬೆಂಗಳೂರು ಪೊಲೀಸರು ನಿನ್ನೆ, ಗುರುವಾರ ಬಂಧಿಸಿದ್ದಾರೆ.

ಬೆಂಗಳೂರಿನ(Bengaluru) ಖ್ಯಾತ ಉದ್ಯಮಿಯೊಬ್ಬರ 39 ವರ್ಷದ ಖಾಸಗಿ ಗನ್ಮ್ಯಾನ್ನನ್ನು ಸಹೋದ್ಯೋಗಿ ಮೇಲೆ ಗುಂಡು ಹಾರಿಸಿದ ಆರೋಪದ ಮೇರೆಗೆ ತಿಲಕನಗರ ಪೊಲೀಸರು ಬಂಧಿಸಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿ ಮತ್ತು ಆತನ ಸಹೋದ್ಯೋಗಿ- ಈ ಇಬ್ಬರೂ ಮಾಜಿ ಸೈನಿಕರು ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿರುವ ಜಯನಗರದಲ್ಲಿರುವ ತಮ್ಮ ಮಾಲೀಕ ದೀಪಕ್ ಗೌಡ ಎಂಬವರು ನೀಡಿದ ಮನೆಯಲ್ಲಿ ಸ್ನೇಹಿತನ ಜತೆ ಇಬ್ಬರೂ ಮದ್ಯ ಸೇವಿಸುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆಯು ಐದು ದಿನಗಳ ಹಿಂದೆ ಅಂದರೆ, ಆಗಸ್ಟ್ 26 ರ ಮಧ್ಯರಾತ್ರಿ ಸಂಭವಿಸಿದ್ದು, ಆರೋಪಿಯನ್ನು ನಿವೃತ್ತ ಸೈನಿಕ ಪ್ರಶಾಂತ್ ಎಂದು ಗುರುತಿಸಲಾಗಿದೆ. ಆತನು ಮಾಜಿ ಸೈನಿಕ ಮತ್ತು ತನ್ನ ಸಹೋದ್ಯೋಗಿ ಕೂಡಾ ಆಗಿರುವ ಪಿಪಿ ಅನಿಲ್ ಕುಮಾರ್ ಮೇಲೆ ಗುಂಡಿನ ದಾಳಿ ನಡೆಸಿದ್ದ ಎಂದು ಆರೋಪಿಸಲಾಗಿದೆ. ಸುಮಾರು 48 ವರ್ಷ ಪ್ರಾಯದ ಕುಮಾರ್ ಅವರು ಗುಂಡು ತಪ್ಪಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಡೆದ ಬಳಿಕ ಕುಮಾರ್ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದಾರೆ.

ಈ ಬರೋ ಸ್ನೇಹಿತರುಗಳು ಒಟ್ಟಾಗಿ ಗುಂಡು ಪಾರ್ಟಿ ನಡೆಸುತ್ತಿದ್ದರು. ಆಗ ಆರೋಪಿ ಪತ್ನಿಯ ಫೋನ್ ಕರೆಗೆ ಉತ್ತರಿಸುತ್ತಿದ್ದ ಮತ್ತು ಆಕೆಯ ಮೇಲೆ ಏಕಾಏಕಿ ಕೂಗಾಡಲು ಆರಂಭಿಸಿದ್ದಾನೆ. ಆಗ ಕುಮಾರ್ ರವರು ಸ್ವಲ್ಪ ದನಿ ತಗ್ಗಿಸಿ ಮಾತಾಡುವಂತೆ ಕೇಳಿಕೊಂಡಿದ್ದಾರೆ. ಅಷ್ಟಕ್ಕೇ ಕುಪಿತಗೊಂಡ ಆತ ಕುಮಾರ್ ಅವರಿಗೆ ಗುಂಡು ಹಾರಿಸಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೂರು ದಾಖಲಿಸಿಕೊಂಡು ಆರೋಪಿ ಪ್ರಶಾಂತ್ ರನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಯಿಂದ ಲೈಸನ್ಸ್ ಹೊಂದಿರುವ, ಭದ್ರತೆಗಾಗಿ ಕೊಟ್ಟಿರುವ ಗನ್ ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Fire: ಬಹುಮಹಡಿ ವಸತಿಕಟ್ಟಡದಲ್ಲಿ ಭೀಕರ ಅಗ್ನಿ ದುರಂತ: ಮಕ್ಕಳು ಸೇರಿ 64 ಮಂದಿ ಸಜೀವ ದಹನ!!!

Leave A Reply