Home Jobs Mangaluru: ಮಂಗಳೂರಿನಲ್ಲಿ ಆನ್’ಲೈನ್ ಉದ್ಯೋಗದ ಹೆಸರಿನಲ್ಲಿ ಮಹಾ ಮೋಸ! ಲಕ್ಷ ಲಕ್ಷ ಹಣ ಸ್ವಾಹ!!!

Mangaluru: ಮಂಗಳೂರಿನಲ್ಲಿ ಆನ್’ಲೈನ್ ಉದ್ಯೋಗದ ಹೆಸರಿನಲ್ಲಿ ಮಹಾ ಮೋಸ! ಲಕ್ಷ ಲಕ್ಷ ಹಣ ಸ್ವಾಹ!!!

Mangaluru
Image source: jagran

Hindu neighbor gifts plot of land

Hindu neighbour gifts land to Muslim journalist

Mangaluru: ಮಂಗಳೂರಿನಲ್ಲಿ (Mangaluru) ಆನ್‌ಲೈನ್‌ ಉದ್ಯೋಗದ ಹೆಸರಿನಲ್ಲಿ ಮಹಾ ಮೋಸ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ಪಾರ್ಟ್‌ಟೈಂ ಉದ್ಯೋಗದ (part time job) ಆಮಿಷವೊಡ್ಡಿ ಒಟ್ಟು 10.88 ಲಕ್ಷ ರೂ. ಹೂಡಿಕೆ ಮಾಡಿಸಿ ವಂಚಿಸಲಾಗಿದೆ. ಈ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿಯೋರ್ವ ತಾನು ಅಕ್ಯುಯೇಟ್ ಮೀಡಿಯಾ ಕಂಪನಿಯ ಪ್ರತಿನಿಧಿಯೆಂದು ಪರಿಚಯಿಸಿಕೊಂಡಿದ್ದು, ನಂತರ ಆ. 26ರಂದು ವಾಟ್ಸ್‌ಆಪ್ ಸಂದೇಶ ಕಳುಹಿಸಿ, ಆನ್‌ಲೈನ್‌ನಲ್ಲಿ ಟಾಸ್ಕ್ ಗಳ ಮೂಲಕ ಪ್ರತಿದಿನ 2-3 ಸಾವಿರ ರೂ. ಸಂಪಾದನೆ ಮಾಡಬಹುದು ಎಂದು ಹೇಳಿದ್ದಾನೆ. ಇದನ್ನು ನಂಬಿದ ದೂರುದಾರ ಸುಲಭ ಕೆಲಸ ಹಾಗೂ ಹಣವೂ ಸಿಗುತ್ತದೆ ಎಂದು ಹಂತ ಹಂತವಾಗಿ ಹಣವನ್ನು ಹೂಡಿಕೆ ಮಾಡಿದ್ದಾರೆ.

ಮೊದಲು ದೂರುದಾರ 1,000 ರೂ.ಗಳಿಂದ 3,000 ರೂ.ಗಳನ್ನು ತೊಡಗಿಸಿದಾಗ ಅವರ ಖಾತೆಗೆ ಅಷ್ಟೇ ಹಣ ಜಮೆಯಾಗಿತ್ತು. ಆದರೆ ಇಷ್ಟಕ್ಕೇ ಬಿಡದ ಅಪರಿಚಿತ ವ್ಯಕ್ತಿ ಇನ್ನೂ ಕೂಡ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದಾನೆ. ಮೊದಲು ಹೂಡಿಕೆ ಮಾಡಿದಾಗ ಹಣ‌ ಸಿಕ್ಕಿತು ಹಾಗಾಗಿ ಇನ್ನೂ ಕೂಡ ಸಿಗಬಹುದು ಎಂದು ನಂಬಿದ ದೂರುದಾರ ಮತ್ತೆ ಹಂತಹಂತವಾಗಿ ಆ.28ರ ವರೆಗೆ ಒಟ್ಟು 10.88 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಆದರೆ, ಅಪರಿಚಿತ ವ್ಯಕ್ತಿ ಈ ಮೊತ್ತ ಮರುಪಾವತಿಸದೆ ವಂಚಿಸಿದ್ದಾನೆ. ಘಟನೆ ಬಗ್ಗೆ ಅರಿತ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: Ration Card: ರೇಷನ್ ಕಾರ್ಡ್ ರದ್ದಾಗಿದೆಯೇ ನಿಮ್ಮದು? ಪ್ರಸ್ತುತ ಚಾಲ್ತಿಯಲ್ಲಿದೆಯೇ ಚೆಕ್ ಮಾಡಲು ಈ ಮಾಹಿತಿ ಓದಿ!