Belthangady: ಪ್ರತಿಭಾವಂತ ಕಬಡ್ಡಿ ಆಟಗಾರ ಆತ್ಮಹತ್ಯೆಗೆ ಶರಣು

Dakshina Kannada news a student commits suicide at Belthangady

Share the Article

Belthangady: ಪ್ರತಿಭಾವಂತ ಕಬಡ್ಡಿ ಆಟಗಾರ ಬೆಳ್ತಂಗಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ, ಪುದುವೆಟ್ಟು ಗ್ರಾಮದ ಕುಬಲ ನಿವಾಸಿ ಸ್ವರಾಜ್ (24) ರವರು ನೇಣುಬಿಗಿದು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಇಂದು ಆ.31 ರಂದು ಬೆಳಿಗ್ಗೆ ನಡೆದಿದೆ.

ಇವರು ಪ್ರಸುತ್ತ ಧರ್ಮಸ್ಥಳದಲ್ಲಿ ವಾಸವಾಗಿದ್ದು ಇವರ ಹಳೆಮನೆ ಇರುವ ಪುದುವೆಟ್ಟುಗೆ ಅವರು ಹೋಗಿದ್ದರು. ಅಲ್ಲಿ ಸ್ನಾನ ಮಾಡುವ ಕೊಠಡಿಯಲ್ಲಿ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉಜಿರೆಯ ಸಮೀಪ ಖಾಸಗಿ ಕಂಪನಿಯೊಂದರಲ್ಲಿ ಅವರು ಉದ್ಯೋಗವನ್ನು ನಿರ್ವಹಿಸುತ್ತಿದ್ದರು. ತಂದೆ ಸತೀಶ್ ಮತ್ತು ತಾಯಿ, ಸಹೋದರಿ ಸ್ವಾತಿ ಹಾಗೂ ಸಹೋದರಿ ಕುಟುಂಬ ವರ್ಗವನ್ನು ಅಗಲಿದ್ದಾರೆ. ಸಾವಿಗೆ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

ಇದನ್ನೂ ಓದಿ: Sarvapalli Radhakrishnan National Award: ಪ್ರತಿಷ್ಠಿತ ಸರ್ವಪಳ್ಳಿ ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾದ ಉಪನ್ಯಾಸಕಿ: ಸುಳ್ಯದ ಸಾಧಕಿ ಡಾಕ್ಟರ್ ಅನುರಾಧ ಕುರುಂಜಿಗೆ ಸಂದ ಗೌರವ !

Leave A Reply