ಸೌಜನ್ಯಾ ತಾಯಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ : ವ್ಯಕ್ತಿಯ ವಿರುದ್ದ ಪ್ರಕರಣ ದಾಖಲು

Share the Article

 

ಮಂಗಳೂರು : ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಹತ್ಯೆಯಾದ ಸೌಜನ್ಯ ಎಂಬ ಯುವತಿಯ ತಾಯಿ
ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಸಂದೇಶ ಕಳುಹಿಸಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ರಾಘವೇಂದ್ರ ಭಟ್ ಎಂಬಾತ
ಹತ್ಯೆಯಾದ ಸೌಜನ್ಯಾ ತಾಯಿಯನ್ನು ಕುರಿತು ಆಕ್ಷೇಪಾರ್ಹ ಕಮೆಂಟ್‌ ಹಾಕಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಅಲ್ಲದೇ ಈ ವ್ಯಕ್ತಿ ತನ್ನ ಕಮೆಂಟ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೂಡ ಯಾಚಿಸಿದ್ದರು.

ಆಕ್ಷೇಪಾರ್ಹ ಕಮೆಂಟ್‌ ಹಾಕಿರುವ ಕುರಿತಂತೆ ಆ.28ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ .

Leave A Reply