Saudi Arabia: ಸೂಕ್ತ ಕಾರಣವಿಲ್ಲದೆ 20 ದಿನಕ್ಕಿಂತ ಹೆಚ್ಚು ದಿನ ಶಾಲೆಗೆ ರಜೆ ಹಾಕಿದರೆ ಪೋಷಕರಿಗೆ ಜೈಲು ಶಿಕ್ಷೆ!
Saudi Arabia news children absent from school parents will be punished
ಶಾಲೆಗೆ ಯಾವುದೇ ಸೂಕ್ತ ಕಾರಣವಿಲ್ಲದೆ 20 ದಿನಗಳಿಗಿಂತ ಹೆಚ್ಚು ದಿನ ಗೈರು ಹಾಜರಾದರೆ ಮಕ್ಕಳ ಪೋಷಕರಿಗೆ ಶಾಕಿಂಗ್ ನಿಯಮವೊಂದನ್ನು ಸೌದಿ ಅರೇಬಿಯಾ ಜಾರಿಗೆ ತಂದಿದೆ.
ಶಾಲೆಗೆ ಗೈರು ಹಾಜರಾದ ಮಕ್ಕಳ ಪೋಷಕರಿಗೆ ಜೈಲು ಶಿಕ್ಷೆಯನ್ನು ಎದುರಿಸುವ ನಿಯಮವನ್ನು ಜಾರಿಗೆ ತಂದಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸೌದಿಅರೇಬಿಯಾ ಮಕ್ಕಳ ರಕ್ಷಣಾ ಕಾನೂನಿಗರ ಅನುಸಾರವಾಗಿ ಈ ಕ್ರಮ ಜಾರಿಗೊಳಿಸಿದೆ.
ವಿದ್ಯಾರ್ಥಿಯು ಕಾನೂನುಬದ್ಧ ಕ್ಷಮೆಯಿಲ್ಲದೆ 20 ದಿನಗಳವರೆಗೆ ಗೈರು ಹಾಜರಾಗಿದ್ದರೆ, ಮಕ್ಕಳ ಪೋಷಕರು ಮಕ್ಕಳ ರಕ್ಷಣಾ ಕಾನೂನಿನ ಅಡಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಷನ್ ಮೂಲಕ ತನಿಖೆಗೆ ಒಳಪಡಿಸಬಹುದು ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಪೋಷಕರನ್ನು ಬಂಧಿಸಲು ಸೌದಿ ಸರಕಾರ ಹಲವು ಹಂತಗಳನ್ನು ಮಾಡಿದೆ.
ಮೊದಲಿಗೆ ಶಾಲಾ ಪ್ರಾಂಶುಪಾಲರು ಶಿಕ್ಷಣ ಇಲಾಖೆಗೆ ವರದಿ ನೀಡಬೇಕು. ನಂತರ ಶಿಕ್ಷಣ ಸಚಿವಾಲಯ ಹಾಗೂ ಕುಟುಂಬ ಆರೈಕೆ ಇಲಾಖೆ ತನಿಖೆ ನಡೆಸಲಿದೆ. ನಂತೆ ಕೊನೆಯಲ್ಲಿ ನ್ಯಾಯಾಲಯಕ್ಕೆ ಕಳುಹಿಸಲಾಗುತ್ತದೆ. ಒಂದು ವೇಳೆ ತಪ್ಪಿತಸ್ಥರೆಂದು ಸಾಬೀತು ಆದರೆ, ನ್ಯಾಯಾಧೀಶರು ಪೋಷಕರ ವಿರುದ್ಧ ಸೂಕ್ತ ಅವಧಿಯ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.