Home Interesting Healthy Food: ಜಪಾನಿಯರಂತೆ 100 ವರ್ಷಕ್ಕೂ ಹೆಚ್ಚು ಕಾಲ ಬದುಕಲು ಬಯಸುವಿರಾ? ಏನು ಮಾಡಬೇಕು? ಇಲ್ಲಿದೆ...

Healthy Food: ಜಪಾನಿಯರಂತೆ 100 ವರ್ಷಕ್ಕೂ ಹೆಚ್ಚು ಕಾಲ ಬದುಕಲು ಬಯಸುವಿರಾ? ಏನು ಮಾಡಬೇಕು? ಇಲ್ಲಿದೆ ತಿಳಿಯಿರಿ!!!

Hindu neighbor gifts plot of land

Hindu neighbour gifts land to Muslim journalist

Okinawa: ಆಧುನಿಕ ಯುಗದಲ್ಲಿ ಆಹಾರ ಪದ್ಧತಿ ಹಾಗೂ ಜೀವನಶೈಲಿಗಳೆರಡೂ ಬದಲಾಗಿದ್ದು, ಆರೋಗ್ಯ ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲು ಆಗಿದೆ. ಹಿಂದಿನ ಕಾಲದ ಜನರು ದೀರ್ಘ ಬಾಳ್ವೆ ಹೊಂದಿದ್ದರು. ಅದಕ್ಕೆ ಕಾರಣ ಅವರ ಜೀವನ ಶೈಲಿ ಹಾಗೂ ಅವರ ಆಹಾರ ಪದ್ಧತಿಯೇ ಆಗಿತ್ತು. ಆದರೆ ಈಗ ಹಾಗಿಲ್ಲ. ಈಗ ಫಾಸ್ಟ್ ಫುಡ್ ಇದ್ದರೆ ಸಾಕು. ಅದರಿಂದಲೇ ಹೆಚ್ಚು ಜನರು ಆರೋಗ್ಯ ಸಮಸ್ಯೆಯಿಂದ ತಮ್ಮ ಅರ್ಧ ಆಯಸ್ಸಿನಲ್ಲೇ ಜನರು ಸಾವನ್ನಪ್ಪುತ್ತಿದ್ದಾರೆ.

ಒಟ್ಟಿನಲ್ಲಿ ಆರೋಗ್ಯ (Health )ದ ಗುಟ್ಟು ನಾವು ಸೇವಿಸುವ ಆಹಾರದಲ್ಲಿದೆ. ನಮ್ಮ ಆಹಾರ (Food) ಕ್ರಮ ಸರಿಯಾಗಿದ್ದರೆ ನಾವು ಹೆಚ್ಚು ಕಾಲ ಬದುಕಲು ಸಾಧ್ಯ ಎನ್ನುವುದಕ್ಕೆ ಜಪಾನೀಯರೇ ಸಾಕ್ಷಿ. ಹೌದು, ಜಪಾನಿನ ಓಕಿನೋವಾ (Okinawa) ಎಂಬಲ್ಲಿಯ ಹೆಚ್ಚು ಜನರು 100 ವರ್ಷಕ್ಕೂ ಹೆಚ್ಚು ಕಾಲ ಬದುಕಿದ್ದಾರೆ ಹಾಗೂ ಯಾವುದೇ ರೋಗವಿಲ್ಲದೇ ಸಂತೋಷವಾಗಿದ್ದಾರೆ. ಇದಕ್ಕೆ ಕಾರಣ ಅವರ ಡಯಟ್ ಮಾದರಿಯ ಫುಡ್ ಆಗಿದೆ. ಬನ್ನಿ ಅವರ ಜೀವನದ ಆಹಾರ ಕ್ರಮಗಳನ್ನು ತಿಳಿಯೋಣ.

ಓಕಿನೋವಾ ಜನರು ಸಸ್ಯ ಆಧಾರಿತ ತರಕಾರಿಗಳನ್ನು ಹೆಚ್ಚು ಬಳಸುತ್ತಾರೆ. ಮತ್ತು ಯಾವುದೇ ಔಷದಿ, ಮಾತ್ರೆ ಬಳಸುವುದು ಕೂಡ ಅತ್ಯಂತ ವಿರಳ.

ಓಕಿನಾವನ್ ತೊಫು ಎಂಬುದರಲ್ಲಿ ಹೆಚ್ಚಿನ ಪ್ರೋಟೀನ್ ಇರುತ್ತದೆ. ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ಇದರಿಂದ ಆರೋಗ್ಯ ಸಮತೋಲನದಲ್ಲಿ ಇರುತ್ತದೆ.

ಇನ್ನು ಓಕಿನೋವಾದಲ್ಲಿ ಆಹಾರದ ಕೊರತೆಯಿರುವ ಕಾರಣ ಅಲ್ಲಿನ ಜನರು 1950 ರಿಂದಲೂ ಸಿಹಿ ಗೆಣಸನ್ನು ಹೆಚ್ಚು ಸೇವಿಸುತ್ತಾರೆ. ಗೆಣಸನ್ನು ಅವರು ಬೆನಿ ಇಮೋ ಎನ್ನುತ್ತಾರೆ. ಸಿಹಿ ಗೆಣಸು ಹೆಚ್ಚಿನ ಫೈಬರ್ ಮತ್ತು ಎಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುವುದರಿಂದ ದಿನದ ಸುಮಾರು 67 ಕ್ಯಾಲೊರಿಗಳು ಅವರಿಗೆ ಗೆಣಸಿನಿಂದ ಸಿಗುತ್ತದೆ.

ಇನ್ನು ಗ್ರೀನ್ ಮಲ್ಬೆರಿ ಎಲೆಗಳು ಅನೇಕ ಪೋಷಕಾಂಶಗಳನ್ನು ಹೊಂದಿದೆ. ಇವು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆಮಾಡುತ್ತದೆ ಮತ್ತು ಕೊಲೆಸ್ಟ್ರಾಲ್ ಅನ್ನು ಕೂಡ ನಿಯಂತ್ರಣದಲ್ಲಿಡುತ್ತದೆ. ಗ್ರೀನ್ ಮಲ್ಬೆರಿ ಎಲೆಗಳಿಂದ ಗಂಟಲು ಕೆರೆತ ಕೂಡ ಗುಣಮುಖವಾಗುತ್ತದೆ.

ಸ್ಕ್ವಿಡ್ ಇಂಕ್ ಸೂಪ್, ಈ ಸೂಪ್ ನಲ್ಲಿ ಎಂಜಾಯ್ಮ್, ಅಮಿನೋ ಎಸಿಡ್ ಮತ್ತು ಆರೋಗ್ಯಕರ ಹಾರ್ಮೋನ್ ಇದೆ. ಇದು ಇಮ್ಯುನಿಟಿಯನ್ನು ಹೆಚ್ಚಿಸಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಆಸಾ ಕಡಲ ಸಸ್ಯ ಅಯೋಡಿನ್ ಮತ್ತು ಎಂಟಿ ಆಕ್ಸಿಡೆಂಟ್ ನಿಂದ ಕೂಡಿದೆ. ಇದು ಓಕಿನೋವಾ ಜನರ ಮೂಳೆಗಳನ್ನು ಸದೃಢವಾಗಿರಿಸುತ್ತದೆ.

ಮಗ್ವರ್ಟ್ ಈ ಸಸ್ಯದ ಎಲೆ ಕಹಿಯಾಗಿರುತ್ತದೆ ಮತ್ತು ಇದರ ರುಚಿ ಹಂದಿಯ ಮಾಂಸವನ್ನು ಹೋಲುತ್ತದೆ. ಇದನ್ನು ಓಕಿನೋವಾ ಜನರು ಹೆಚ್ಚು ಸೇವಿಸುತ್ತಾರೆ. ಇದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಇದರಿಂದಲೇ ಅವರು 100 ವರ್ಷಕ್ಕೂ ಹೆಚ್ಚು ಕಾಲ ಆರೋಗ್ಯವಾಗಿ ಬದುಕುತ್ತಾರೆ.

ಮಾಹಿತಿ ಪ್ರಕಾರ ಜಪಾನಿಯರು ಹೊಟ್ಟೆತುಂಬಾ ಊಟ ಮಾಡುವುದಿಲ್ಲ, ಶೇ.80ರಷ್ಟು ಹೊಟ್ಟೆ ತುಂಬುವವರೆಗೆ ಅಥವಾ ಅದಕ್ಕಿಂತ ಕಡಿಮೆ ಊಟ ಮಾಡುತ್ತಾರೆ. ಅನ್ನ, ಮೀನು, ಮಿಶೋ, ಬೇಳೆ ಕಾಳುಗಳು, ಹಸಿ ತರಕಾರಿಗಳು, ಸೋಯಾ ರೀತಿಯ ಪದಾರ್ಥ ಬಳಕೆ ಮಾಡುತ್ತಾರೆ. ಮತ್ತು ಸಾಂಪ್ರದಾಯಿಕ ಜೀವನ ಶೈಲಿಯಲ್ಲಿ ಜೀವಿಸುತ್ತಾರೆ.

ಮುಖ್ಯವಾಗಿ ಬರಹಗಾರ ಡ್ಯಾನ್ ಬ್ಯೂಟನರ್ ಎನ್ನುವವರು ಸುಮಾರು 20 ವರ್ಷಗಳ ಕಾಲ ಓಕಿನೋವಾ ಜನರು 100 ವರ್ಷಗಳ ಕಾಲ ಬದುಕಲು ಕಾರಣ ಏನು ಎನ್ನುವುದರ ಬಗ್ಗೆ ಅಧ್ಯಯನ ನಡೆಸಿ, ಓಕಿನೋವಾ ಜನರು ಹೆಚ್ಚು ಕಾಲ ಬದುಕಲು ಅವರು ಸೇವಿಸುವ ಆಹಾರವೇ ಕಾರಣ ಎನ್ನುವುದು ಕಂದುಕೊಂಡಿದ್ದಾರೆ.