LPG Gas Cylinder Price: ಗ್ಯಾಸ್ ಸಿಲಿಂಡರ್ ಬೆಲೆ ರೂ. 200 ಮಾತ್ರವಲ್ಲ, ರೂ. 400 ಕಡಿತ ! ಹೇಗೆ ಅಂತೀರಾ?

National news LPG gas cylinder price cut 10 crore customers will get 400 cheaper gas cylinder

LPG Gas Cylinder Price : ಕೇಂದ್ರ ಸರ್ಕಾರವು (Central government) ಜನತೆಗೆ ಸಿಹಿಸುದ್ದಿ ನೀಡಿದೆ. ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ಜನರಿಗೆ ಕೊಂಚ ಮಟ್ಟಿಗೆ ರಿಲೀಫ್ ಆಗುವ ಸುದ್ಧಿ ಹೊರ ಬಿದ್ದಿದೆ. ಚುನಾವಣೆಯ ಹೊಸ್ತಿಲಲ್ಲಿ ಕೇಂದ್ರ ಸರ್ಕಾರ ಬಿಗ್ ರಿಲೀಫ್ ನೀಡಿದ್ದು, ಸರ್ಕಾರವು ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ (LPG Price) 200 ರೂ.ವರೆಗೆ ಕಡಿತಗೊಳಿಸಿದೆ. ಆದರೆ, ಗ್ಯಾಸ್ ಸಿಲಿಂಡರ್ ಬೆಲೆ (LPG Gas Cylinder Price) ರೂ. 200 ಮಾತ್ರವಲ್ಲ, ರೂ. 400 ಕಡಿತವಾಗಿದೆ. ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ.

ಸರ್ಕಾರ ಇದೀಗ ಗ್ಯಾಸ್ ಸಿಲಿಂಡರ್‌ಗಳ ಮೇಲಿನ ದರವನ್ನು ಕಡಿತ ಮಾಡಿದೆ. ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ಮೇಲೆ 200 ರೂ.ಗಳ ಸಹಾಯಧನವನ್ನು ಸರ್ಕಾರ (governement) ಘೋಷಿಸಿದ್ದು ಜನರಿಗೆ ಕೊಂಚ ನಿರಾಳವಾಗಿದೆ. ಈಗ ಎಲ್ಲಾ ಗೃಹಬಳಕೆದಾರರಿಗೆ ಗ್ಯಾಸ್ ಸಿಲಿಂಡರ್ 200 ರೂಪಾಯಿ ಅಗ್ಗವಾಗಿ ಸಿಗಲಿದೆ. ಇದಲ್ಲದೇ ಉಜ್ವಲ ಯೋಜನೆಯಡಿ 75 ಲಕ್ಷ ಹೊಸ ಎಲ್‌ಪಿಜಿ ಸಂಪರ್ಕಗಳನ್ನು ಸರ್ಕಾರ ಉಚಿತವಾಗಿ ನೀಡಲಿದೆ. 75 ಲಕ್ಷ ಕುಟುಂಬಗಳು ಉಜ್ವಲ ಯೋಜನೆಯ ಕನೆಕ್ಷನ್ ಪಡೆದ ನಂತರ ಹೊಸ ಫಲಾನುಭವಿಗಳ ಸಂಖ್ಯೆ 10.35 ಕೋಟಿಗೆ ಏರಲಿದೆ.

ಸರ್ಕಾರವು ಸಿಲಿಂಡರ್‌ ಮೇಲೆ 200 ರೂಪಾಯಿ ಕಡಿತಗೊಳಿಸಿದ ನಂತರ, ಉಜ್ವಲ ಯೋಜನೆಯ ಫಲಾನುಭವಿಗಳು ಒಟ್ಟು 400 ರೂ. ಲಾಭವನ್ನು ಪಡೆಯುತ್ತಾರೆ. ಅವರಿಗೆ ಸರ್ಕಾರ ಈಗಾಗಲೇ 200 ರೂ. ಸಬ್ಸಿಡಿ ನೀಡುತ್ತಿದೆ. ಈಗ ಮತ್ತೆ ಸಿಲಿಂಡರ್ ದರ 200 ರೂಪಾಯಿ ಕಡಿಮೆ ಮಾಡಿದ ನಂತರ ಉಜ್ವಲ ಫಲಾನುಭವಿಗಳಿಗೆ 400 ರೂಪಾಯಿ ಕಡಿಮೆ ದರದಲ್ಲಿ ಸಿಲಿಂಡರ್ ದೊರೆಯಲಿದೆ.

ಉಜ್ವಲ ಯೋಜನೆಯಡಿ (ujvala scheme) ಫಲಾನುಭವಿಗಳು ಒಂದು ವರ್ಷದಲ್ಲಿ ಒಟ್ಟು 12 ಅಡುಗೆ ಅನಿಲ ಸಿಲಿಂಡರ್‌ಗಳ ಮೇಲೆ ಸಬ್ಸಿಡಿ ಪಡೆಯಬಹುದು. ಮಾರ್ಚ್ 2023 ರವರೆಗಿನ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಉಜ್ವಲ ಯೋಜನೆಯಡಿ ಸರ್ಕಾರವು 9 ಕೋಟಿಗೂ ಹೆಚ್ಚು ಉಚಿತ ಅಡುಗೆ ಅನಿಲ ಸಂಪರ್ಕಗಳನ್ನು ವಿತರಿಸಿದೆ.

ಇದನ್ನೂ ಓದಿ: Flight: ವಿಮಾನದಲ್ಲಿ ಹೊಸ ಪ್ರಯೋಗ; ಪ್ರಾರಂಭವಾಗಲಿದೆ ‘ವಯಸ್ಕರಿಗೆ ಮಾತ್ರ’ ವಿಭಾಗ!! ಏನಿದೆ? ಏನಿರಲ್ಲ?

Leave A Reply

Your email address will not be published.