Uttar Pradesh: ಹೊಲವನ್ನು ಮೇಕೆ ಹಾಳು ಮಾಡಿದ್ದಕ್ಕೆ, ಪಕ್ಕದ ಮನೆಯವನ ‘ಅದನ್ನೇ’ ಕಚ್ಚಿದ ವ್ಯಕ್ತಿ!
Uttarpradesh news farmers property damaged by goat


Uttar Pradesh: ಮೇಕೆ ಮುಟ್ಟದ ಸೊಪ್ಪಿಲ್ಲ. ಹಾಗಿರುವಾಗ ಸೊಗಸಾಗಿ ಬೆಳೆದ ಹೊಲವನ್ನು ಮೇಕೆ ಮೇಯದೇ ಬಿಡುತ್ತಾ. ಇದೀಗ ಹೊಲವನ್ನು ಹಾಳು ಮಾಡಿದ್ದಕ್ಕಾಗಿ ಜಮೀನಿನ ಒಡೆಯ ಪಕ್ಕದ ಮನೆಯವನ ಗುಪ್ತಾಂಗವನ್ನೇ ಕಚ್ಚಿದ ಘಟನೆ ನಡೆದಿದೆ.
ಹೌದು, ಉತ್ತರ ಪ್ರದೇಶದ (Uttar Pradesh) ಷಹಜಹಾನ್ಪುರದ ರೋಜಾದಲ್ಲಿ ಈ ಘಟನೆ ನಡೆದಿದ್ದು, ರಾತ್ರಿ ಹೊತ್ತು ಪಕ್ಕದ ಮನೆಯವರ ಮೇಕೆಗಳು ಹೊಲದಲ್ಲಿ ಓಡಾಡಿ ಬೆಳೆಯನ್ನು ನಾಶಪಡಿಸಿದ್ದವು. ಈ ಕಾರಣಕ್ಕಾಗಿ 28 ವರ್ಷದ ವ್ಯಕ್ತಿಯೊಬ್ಬ ಪಕ್ಕದ ಮನೆಯವನ ಖಾಸಗಿ ಅಂಗವನ್ನು ಕಚ್ಚಿದ್ದಾನೆ.
ಸದ್ಯ ಗಾಯಗೊಂಡಿರುವ ಕುರಿ ಮಾಲೀಕನನ್ನು ಶಹಜಹಾನ್ಪುರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆತನಿಗೆ ನಾಲ್ಕು ಹೊಲಿಗೆಗಳನ್ನು ಹಾಕಲಾಗಿದ್ದು, ವೈದ್ಯರ ಪ್ರಕಾರ ಮೇಲ್ಮೈ ಗಾಯಗಳಷ್ಟೇ ಆಗಿದೆ, ಆಂತರಿಕ ನಾಳಗಳಿಗೆ ಯಾವುದೇ ಹಾನಿಯಾಗಿಲ್ಲ, ಕಾಲಾನಂತರದಲ್ಲಿ ರೋಗಿ ಗುಣಮುಖರಾಗುತ್ತಾರೆ ಎಂದು ತಿಳಿಸಿದ್ದಾರೆ.
ಮೇಕೆಗಳ ವಿಚಾರವಾಗಿ ಗಂಗಾರಾಮ್ ಸಿಂಗ್ ಜತೆಗೆ ಪದೇ ಪದೇ ಜಗಳವಾಗುತ್ತಿತ್ತು, ಈ ಬಾರಿ ಕೋಪ ತಾರಕಕ್ಕೇರಿತ್ತು, ಕೋಪದಲ್ಲಿ ತನ್ನನ್ನು ಕೆಳಗೆ ಒದ್ದು ಬೀಳಿಸಿ ಗುಪ್ತಾಂಗವನ್ನು ಕಚ್ಚಿದ್ದಾನೆ ಎಂದಿದ್ದಾರೆ. ಸದ್ಯ ರೋಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.