Shakila: ದೊಡ್ಮನೆಗೆ ಗ್ರ್ಯಾಂಡ್ ಎಂಟ್ರಿ ನೀಡಲಿದ್ದಾರೆ ನಟಿ ಶಕೀಲಾ!!! ಎಷ್ಟು ಸಂಭಾವನೆ?

Actress Shakeela is entering 'Bigg Boss' house for the 2nd time

Share the Article

Shakila: ನಟಿ ಶಕೀಲಾ ಒಂದು ಕಾಲದಲ್ಲಿ ಮಲಯಾಳಂ ಚಿತ್ರರಂಗದ ಬಹುಬೇಡಿಕೆಯ ಖ್ಯಾತ ನಟಿ ಆಗಿದ್ದರು. ನಂತರ ತಮಿಳು, ತೆಲುಗು, ಕನ್ನಡ ಭಾಷೆಯ ಸಿನಿಮಾಗಳಲ್ಲೂ ತನ್ನ ನಟನೆಯಲ್ಲಿ ಸೈ ಅನಿಸಿಕೊಂಡಿದ್ದಾರೆ. ಇದರ ನಡುವೆ ಒಮ್ಮೆ ಅವರು ಬಿಗ್ ಬಾಸ್ ಕನ್ನಡ ಮನೆಯೊಳಗೂ ಹೋಗಿ ಬಂದಿದ್ದರು. ಇದೀಗ ಮತ್ತೊಮ್ಮೆ ‘ಬಿಗ್ ಬಾಸ್’ ಶೋಗೆ ಕಾಲಿಡಲು ಸಜ್ಜಾಗಿದ್ದಾರೆ.

ಈಗಾಗಲೇ ಬಿಗ್ ಬಾಸ್ ಎಲ್ಲಾ ಭಾಷೆಗಳಲ್ಲೂ ಜನಪ್ರಿಯತೆ ಪಡೆದುಕೊಂಡಿರೋ ರಿಯಾಲಿಟಿ ಶೋ. ಮಲಯಾಳಂ, ಕನ್ನಡ, ಮರಾಠಿ, ಹಿಂದಿ ಸೇರಿ ಅನೇಕ ಭಾಷೆಗಳಲ್ಲಿ ಈ ಶೋ ನಡೆಸಲಾಗುತ್ತಿದೆ. ಇದೀಗ ತೆಲುಗು ಬಿಗ್ ಬಾಸ್ (Bigg Boss) 7 ನೇ ಸೀಸನ್ ಸೆಪ್ಟೆಂಬರ್ ತಿಂಗಳಿಂದ ಆರಂಭ ಆಗಲಿದ್ದು, ಈ ಬಾರಿ ಸ್ಪರ್ಧಿಯಾಗಿ ಮಲಯಾಳಂ ನಟಿ ಶಕೀಲಾ ಭಾಗವಹಿಸುವ ಸಾಧ್ಯತೆ ಇದೆ.

ಪ್ರತಿ ಬಾರಿ ಬಿಗ್ ಬಾಸ್ ಆರಂಭ ಆಗುವಾಗಲೂ ಒಂದಷ್ಟು ಸ್ಪರ್ಧಿಗಳ ಹೆಸರು ಓಡಾಡುತ್ತದೆ. ಅದೇ ರೀತಿ ಈ ಬಾರಿಯೂ ಒಂದಷ್ಟು ಸೆಲೆಬ್ರಿಟಿಗಳ ಹೆಸರು ಹರಿದಾಡಿದೆ. ಆ ಪೈಕಿ ನಟಿ ಶಕೀಲಾ (Shakila) ಹೆಸರು ಕೂಡ ಒಂದು.

ಹೌದು, ಶಕೀಲಾ ಕಾಲಿಡುತ್ತಿರುವುದು ತೆಲುಗು ಬಿಗ್ ಬಾಸ್ ಗೆ. ಅಲ್ಲದೇ ಭಾರೀ ಮೊತ್ತದ ಸಂಭಾವನೆ ಆಫರ್ ನೀಡಿ ಈ ರಿಯಾಲಿಟಿ ಶೋಗೆ ಆಹ್ವಾನ ನೀಡಲಾಗಿದೆ ಎಂದು ತಿಳಿದ್ದು ಬಂದಿದ್ದು, ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್-2ರಲ್ಲಿ ಸ್ಪರ್ಧಿಸಿದ್ದ ಶಕೀಲಾ ಈ ಬಾರಿ ತೆಲುಗಿಗೆ ಕಾಲಿಡುವುದು ಪಕ್ಕಾ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಅಕ್ಕಿನೇನಿ ನಾರ್ಗಾಜುನ ನಿರೂಪಣೆಯ ತೆಲುಗು ಬಿಗ್ ಬಾಸ್ 7 ಸೆಪ್ಟಂಬರ್ 3ರಂದು ಆರಂಭವಾಗುತ್ತಿದ್ದು, ಕಾಮಿಡಿಯನ್ ರಿಯಾಜ್, ಮಾಡೆಲ್ ಪ್ರಿನ್ಸ್ ಯಾವರ್, ಸಿಂಗರ್ ದಾಮಿನಿ ಬಾತ್ಲಾ, ನಟ ಶಿವಾಜಿ, ಕ್ರಾಂತಿ, ಅಮರ್ ದೀಪ್ ಚೌಧರಿ, ಯೂಟ್ಯೂಬರ್ ಅನಿಲ್ ಗೀಲಾ, ಡ್ಯಾನ್ಸರ್ ಸಂದೀಪ್, ನಟಿ ಪೂಜಾ ಮೂರ್ತಿ ಇನ್ನಿತರ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ.

Leave A Reply