Home latest ಪುತ್ತೂರು ಮಾದರಿಯಲ್ಲೇ ಮತ್ತೊಂದು ಚಾಕು ಇರಿತ ! ಕಾಲೇಜ್ ಆವರಣದಲ್ಲೇ ನಡೆದು ಹೋದ ರಕ್ತಪಾತ!!

ಪುತ್ತೂರು ಮಾದರಿಯಲ್ಲೇ ಮತ್ತೊಂದು ಚಾಕು ಇರಿತ ! ಕಾಲೇಜ್ ಆವರಣದಲ್ಲೇ ನಡೆದು ಹೋದ ರಕ್ತಪಾತ!!

Hindu neighbor gifts plot of land

Hindu neighbour gifts land to Muslim journalist

ಪುತ್ತೂರಿನಲ್ಲಿ ಮಹಿಳಾ ಪೊಲೀಸ್ ಠಾಣೆಯ ಆಸ್ಪಾಸಿನಲ್ಲಿ ಹುಡುಗಿಯೊಬ್ಬಳ ಕುತ್ತಿಗೆಗೆ ಚಾಕು ಇರಿದ ಘಟನೆ ಮತ್ತೊಂದು ಇಂಥವುದೇ ಘಟನೆ ನಡೆದಿದೆ. ಕಾಲೇಜು ಆವರಣದಲ್ಲೇ ಯುವತಿಗೆ ಇರಿದು ನಂತರ ಆಕೆಯನ್ನು ಕಾರಿನಲ್ಲಿ ಅಪಹರಣ ಮಾಡಿರುವ ಘಟನೆ ವರದಿಯಾಗಿದೆ.

ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಚಾಕುವಿನಿಂದ ಇರಿದು ಅಪಹರಿಸಿದ ಆಘಾತಕಾರಿ ಘಟನೆ ಕರ್ನಾಟಕದ ರಾಮನಗರದಲ್ಲಿ ಸೋಮವಾರ ನಡೆದಿದೆ. ಆಕೆಯನ್ನು ಇರಿದುದಲ್ಲದೆ ನಂತರ ಆಕೆಯನ್ನು ಒಂದಷ್ಟು ಕಾಲ ಅಪಹರಣ ಮಾಡಲಾಗಿದೆ. ನಂತರ ಅಪಹರಣಕಾರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಇದೀಗ ಚಾಕು ಇರಿತಕ್ಕೆ ಒಳಗಾದ ಬಾಲಕಿಯ ಸ್ಥಿತಿ ಚಿಂತಾ ಜನಕವಾಗಿದೆ.

ವಿದ್ಯಾರ್ಥಿನಿಯ ಕಾಲೇಜಿಗೆ ಹೋಗುತ್ತಿದ್ದಳು. ಇನ್ನೇನು ರಾಮನಗರ ನಗರದ ಕಾಲೇಜು ಪ್ರವೇಶ ದ್ವಾರ ಪ್ರವೇಶಿಸಬೇಕು, ಆಗ ಆರೋಪಿ ಮತ್ತು ಆತನ ಸಹಚರರು ವಿದ್ಯಾರ್ಥಿನಿಗೆ ಅಡ್ಡಗಟ್ಟಿದರು. ನೋಡ ನೋಡುತ್ತಲೇ ಆಕೆಯ ಆಕೆಯ ಭುಜ ಮತ್ತು ಕೈಗಳಿಗೆ ಮನಸ್ಸೋ ಇಚ್ಛೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಆಕೆ ಅಲ್ಲೇ ಕುಸಿದ್ದಿದ್ದಳು.ಕೂಡಲೇ ಅಪಹರಣಕಾರರು ಆಕೆಯನ್ನು ನೋಡಿ ಅಲ್ಲೇ ಬಿಡದೆ ಆಕೆಯನ್ನು ಎಳೆದುಕೊಂಡು ತಮ್ಮ ಕಾರಿನೊಳಗೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಸ್ಥಳೀಯರು ಮತ್ತು ವಿದ್ಯಾರ್ಥಿಗಳು ಅಪಹರಣವನ್ನು ತಡೆಯಲು ಯತ್ನಿಸಿದ್ದಾರೆ. ಆಗ ಅಲ್ಲಿದ್ದ ವಿದ್ಯಾರ್ಥಿಗಳು ಅಪಹರಣಕಾರರ ಮೇಲೆ ಕಲ್ಲು ತೂರಾಟ ನಡೆಸಿ ಅಪಹರಣವನ್ನು ಭಂಗ ಮಾಡಲು ಯತ್ನಿಸಿದ್ದಾರೆ ಆದರೂ ಅಪಹರಣಕಾರರು ಗಾಯಗೊಂಡ ವಿದ್ಯಾರ್ಥಿನಿಯ ಜೊತೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಆದರೆ ಅಪರಣಕಾರರು ವಿದ್ಯಾರ್ಥಿನಿಯನ್ನು ರಾಮಕೃಷ್ಣ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಕೂಡಲೇ ಪೊಲೀಸರು ಆಸ್ಪತ್ರೆಗೆ ತೆರಳಿರುತ್ತಾರೆ. ನಂತರ ಅಪಹರಣಕಾರರ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪುತ್ತೂರಿನಲ್ಲಿ ಘಟನೆಯಂತೆ ರಾಮನಗರದ ಪ್ರಕರಣಕ್ಕೂ ಪ್ರೀತಿಯೇ ಕಾರಣವೇ?

ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ರಾಮನಗರ ಜಿಲ್ಲೆಯ ಒಂದೇ ಗ್ರಾಮದ ನಿವಾಸಿಗಳಾಗಿದ್ದರು, ಯುವತಿಯನ್ನು ಯುವಕ ಪ್ರೀತಿಸುತ್ತಿದ್ದ. ಆದರೆ ಯುವತಿಯು ಆತನ ಪ್ರೀತಿಯನ್ನು ನಿರಾಕರಿಸಿದ್ದಳು ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಆತ ಆಕೆಯ ಮೇಲೆ ದಾಳಿ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ನಿಖರವಾದ ಕಾರಣವನ್ನು ಶೀಘ್ರದಲ್ಲೇ ಕಂಡುಹಿಡಿಯಲಾಗುವುದು ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.